25.3 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್. ಡಿ. ಎಂ. ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳ ಮತ್ತು ಸ್ವಚ್ಛತಾ ಸೇನಾನಿಗಳ ಪದ ಪ್ರದಾನ ಸಮಾರಂಭ

ಉಜಿರೆ : ‘ ಗುರುಗಳ ಸೂಕ್ತ ಮಾರ್ಗದರ್ಶನದೊಂದಿಗೆ ನಿಮ್ಮ ನಾಯಕತ್ವ ಗುಣ ಬೆಳೆಯಲಿ, ಮುಂದೆ ಭವಿಷ್ಯದಲ್ಲಿ ಕೃಷಿ, ವ್ಯವಹಾರ, ರಾಜಕಾರಣ ಇತ್ಯಾದಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಭರವಸೆಯ ನಾಯಕರಾಗಿ ಗುರುತಿಸಿಕೊಳ್ಳಿ. ಪ್ರಾಮಾಣಿಕವಾಗಿ ಪ್ರಯತ್ನಿಸಿದಾಗ ಯಶಸ್ಸು ಸಿಕ್ಕೇ ಸಿಗುತ್ತದೆ ‘ ಎಂದು ಮೂಡುಬಿದಿರೆಯ ನ್ಯಾಯವಾದಿ ಹಾಗೂ ನೋಟರಿ ಶ್ವೇತಾ ಜೈನ್ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳ ಮತ್ತು ಸ್ವಚ್ಛತಾ ಸೇನಾನಿಗಳ ಪದ ಪ್ರದಾನ ನೆರವೇರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಹಲವು ಸಾಧಕರ ಉದಾಹರಣೆಯೊಂದಿಗೆ ವಿದ್ಯಾರ್ಥಿಗಳಿಗೆ ಪ್ರೇರಣೆಯನ್ನು ನೀಡಿದರು. ವಿದ್ಯಾರ್ಥಿ ಪ್ರತಿನಿಧಿಗಳಿಗೆ ಗುರುತು ಪತ್ರವನ್ನು ವಿತರಿಸಿ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ. ಅವರು ತರಗತಿ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ‘ನಾಯಕನಾದವನು ಮೊದಲು ತಾನು ಉತ್ತಮ ಶಿಸ್ತು ಮತ್ತು ವ್ಯಕ್ತಿತ್ವವನ್ನು ಹೊಂದಿ ಇತರರಿಗೆ ಪ್ರೇರಣೆಯಾಗಬೇಕು ‘ ಎಂದು ಹೇಳಿದರು.

ಉಪ ಪ್ರಾಂಶುಪಾಲ ಡಾ.ರಾಜೇಶ್ ಬಿ. ಸ್ವಚ್ಛತಾ ಸೇನಾನಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಶುಭ ಕೋರಿದರು.ವಿದ್ಯಾರ್ಥಿನಿ ಆತ್ಮಿ ಅವರು ಪರಿಚಯ ಮಾಡಿದರು. ಅನುಶ್ರೀ ನಿರೂಪಿಸಿ , ಯುಕ್ತಾ ವಂದಿಸಿದರು.

Related posts

ಇಂದಬೆಟ್ಟು ವಲಯದ ಗುರಿಪಳ್ಳ ಕಾರ್ಯಕ್ಷೇತ್ರದಲ್ಲಿ ‘ಬೆಳಕು’ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ

Suddi Udaya

ರಾಜ ಕೇಸರಿ ಸಂಘಟನೆಯ 541ನೇ ಸೇವಾ ಯೋಜನೆ: ಉಜಿರೆ ದೊಂಪದ ಪಲ್ಕೆ ಕೋಟಪ್ಪ ಪೂಜಾರಿಯವರಿಗೆ ಸಿಟಿ ಸ್ಕ್ಯಾನಿಂಗ್ ಮಾಡಿಸಲು ಸಹಾಯ ಹಸ್ತ

Suddi Udaya

ಮಲೆಬೆಟ್ಟು: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ : ಪ್ರಾಣಾಪಾಯದಿಂದ ಪಾರು

Suddi Udaya

30ನೇ ವರ್ಷದ ಆಳ್ವಾಸ್ ವಿರಾಸತ್‌ಗೆ ಅದ್ಧೂರಿಯ ಚಾಲನೆ, ಮೇಳೈಸಿದ ವೈಭವ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ಆಶ್ರಯದಲ್ಲಿ ಇಕೋಫ್ರೆಶ್ ಎಂಟರ್‌ ಪ್ರೈಸಸ್ ಬೆಳ್ತಂಗಡಿ-ಪುತ್ತೂರು ಇದರ ಸಹಯೋಗದೊಂದಿಗೆ ರೈತರಿಗಾಗಿ ಕೃಷಿ ಉಪಕರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟನೆ

Suddi Udaya

ಕಳೆಂಜ: ಜಾಗದ ವಿಚಾರವಾಗಿ ಹಲ್ಲೆ, ಬೆದರಿಕೆ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!