April 2, 2025
Uncategorizedಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸಂಪೂರ್ಣ ಹಾಳಾದ ಧರ್ಮಸ್ಥಳ-ಮುಳಿಕ್ಕಾರು ರಸ್ತೆ: ಶಾಲಾ ಮಕ್ಕಳು ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣ, ಅಲ್ಲಲ್ಲಿ ಹೂತು ಹೋಗುವ ವಾಹನಗಳು

ಧರ್ಮಸ್ಥಳ: ಧರ್ಮಸ್ಥಳದಿಂದ ಮುಳಿಕ್ಕಾರು ಹೋಗುವ ರಸ್ತೆಯು ಸಂಪೂರ್ಣ ಹಾಳಾಗಿದ್ದು ಜನರು, ಶಾಲಾ ಮಕ್ಕಳು ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸುಮಾರು 200 ಕ್ಕಿಂತಲೂ ಹೆಚ್ಚು ಮನೆಗಳನ್ನು ಹೊಂದಿರುವ ಮುಳಿಕ್ಕಾರು ಪ್ರದೇಶಕ್ಕೆ ಹೋಗಲು ರಸ್ತೆಯ ಮಧ್ಯೆ ಅಲ್ಲಲ್ಲಿ ಕಾಂಕ್ರೀಟ್ ರಸ್ತೆ ಇದ್ದು, ಉಳಿದ ಕಡೆ ನಡೆದುಕೊಂಡು ಹೋಗಲು ಕಷ್ಟ ಪಡುವ ಸನ್ನಿವೇಶ ಇದೆ. ರಿಕ್ಷಾ, ಜೀಪುಗಳಲ್ಲಿ ಶಾಲಾ ಮಕ್ಕಳು ಶಾಲೆಗೆ ತೆರಳಲು ಅಸಾಧ್ಯವಾಗಿದೆ.

ಹರಸಾಹಸ ಪಟ್ಟು ಈ ರಸ್ತೆಯಿಂದ ಜೀಪುಗಳು ಸಾಗಿದರೂ ಕೆಲವು ಕಡೆ ಹೂತು ಹೋಗಿ ಇನ್ನೊಂದು ವಾಹನದಿಂದ ಅಥವಾ ಜನರು ಎಳೆಯಬೇಕಾದ ಪರಿಸ್ಥಿತಿ ಇದೆ.

ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಿ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ.

Related posts

ಮುಂಡಾಜೆ ಹೈಸ್ಕೂಲಿನಲ್ಲಿ ನಿವೃತ್ತ ಅಧ್ಯಾಪಕರಿಗೆ ಗುರುವಂದನೆ

Suddi Udaya

ಸ್ವಚ್ಛತಾ ಕೀ ಸೇವಾ ಆಂದೋಲನ

Suddi Udaya

ಪಡಂಗಡಿ: ಹಿರಿಯ ನಾಗರಿಕ ಧರ್ಣಪ್ಪ ಶೆಟ್ಟಿ ಯವರಿಂದ ಮತ ಚಲಾವಣೆ

Suddi Udaya

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಶಿಬಿರ

Suddi Udaya

ಗುರುವಾಯನಕೆರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರ ಭಾರತಿಗೆ ಜಯ

Suddi Udaya

ಇಳoತಿಲ: ನಾಯಿಮಾರು ನಿವಾಸಿ ವಾರಿಜಾ ನಿಧನ

Suddi Udaya
error: Content is protected !!