April 2, 2025
ಅಪಘಾತಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿ

ಗುಂಡ್ಯ: ನಿಂತಿದ್ದ ಕಾರಿನ ಮೇಲೆ ಮಗುಚಿ ಬಿದ್ದ ಕಂಟೇನರ್: ಪ್ರಾಣಾಪಾಯದಿಂದ ಪಾರಾದ ಐವರು

ನೆಲ್ಯಾಡಿ: ಶಿರಾಡಿ ಗ್ರಾಮದ ಗುಂಡ್ಯ ಸಮೀಪದ ಬರ್ಚಿನಹಳ್ಳ ಎಂಬಲ್ಲಿ ನಿಂತಿದ್ದ ಕಾರಿನ ಮೇಲೆ ಕಂಟೇನರ್ ಲಾರಿ ಮಗುಚಿ ಬಿದ್ದು ಕಾರು ಸಂಪೂರ್ಣ ನಜ್ಜುಗುಜ್ಜು ಆಗಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.


ಧರ್ಮಸ್ಥಳದಿಂದ ದಾವಣಗೆರೆಗೆ ಕಾರಿನಲ್ಲಿ ಐದು ಜನ ಪ್ರಯಾಣಿಸುತ್ತಿದ್ದು, ಗುಂಡ್ಯ ಸಮೀಪದ ಬರ್ಚಿನಹಳ್ಳ ಎಂಬಲ್ಲಿ ಕಾರನ್ನು ನಿಲ್ಲಿಸಿ ಕಾರಿನಲ್ಲಿ ಇದ್ದವರೆಲ್ಲರೂ ಕೆಳಗೆ ಇಳಿದು ಸಮೀಪದಲ್ಲಿದ್ದ ಸಂದರ್ಭ ಮಂಗಳೂರಿಗೆ ಬೆಂಗಳೂರಿಗೆ ತೆರಳುತ್ತಿದ್ದ ಕಂಟೇನ‌ರ್ ಲಾರಿ ಕಾರಿನ ಮೇಲೆ ಮಗುಚಿ ಬಿದ್ದಿದ್ದು.

ಅದೃಷ್ಟವಶಾತ್ ಕಾರಿನಲ್ಲಿ ಯಾರು ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಲಿಲ್ಲ.

ಗುಂಡ್ಯದ ಪರಶುರಾಮ ಕ್ರೈನ್ ಮೂಲಕ ಕಾರನ್ನು ಹೊರತೆಗೆಯಲಾಯಿತು. ಸ್ಥಳಕ್ಕೆ ಸಂಚಾರಿ ಪೊಲೀಸರು ಹಾಗೂ ನೆಲ್ಯಾಡಿ ಹೊರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

Related posts

ರಿಕ್ಷಾ ಚಾಲಕರ ಅಪತ್ಕಾಲದ ನೆರವಿನ ಯೋಜನೆ ಕ್ಷೇಮ ನಿಧಿ ಉಜಿರೆಯ ಉದ್ಯಮಿ, ಲಕ್ಷ್ಮಿ ಗ್ರೂಪ್ ನ ಮಾಲಕರಾದ ಮೋಹನ್ ಕುಮಾರ್ ಅವರಿಂದ 50 ಸಾವಿರ ದೇಣಿಗೆ ಹಸ್ತಾಂತರ

Suddi Udaya

ಜೂ.15-29: ಶಿಶಿಲ ಗ್ರಾ.ಪಂ. ನಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

Suddi Udaya

ಪಣಕಜೆ ಹೆದ್ದಾರಿಯಲ್ಲಿ ವಿದ್ಯುತ್ ವಯರ್ ಗೆ ಜೆಸಿಬಿ ತಾಗಿ ವಾಹನ ಸಂಚಾರ ಕ್ಕೆ ಆಡಚಣೆ

Suddi Udaya

ಭೀಕರ ಮಳೆಗೆ ಚಾರ್ಮಾಡಿ ಗಾಂಧಿನಗರದಲ್ಲಿ ಮನೆಯ ಗೋಡೆ ಕುಸಿತ

Suddi Udaya

ಅಳದಂಗಡಿ ಅರಮನೆಗೆ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಭೇಟಿ

Suddi Udaya

ಜ.5ರಂದು ಕೋರ್ಟುಗೆ ಹಾಜರಾಗಲು ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ನ್ಯಾಯಾಲಯ ಆದೇಶ

Suddi Udaya
error: Content is protected !!