30.7 C
ಪುತ್ತೂರು, ಬೆಳ್ತಂಗಡಿ
May 17, 2025
ಕರಾವಳಿಕೃಷಿಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಪ್ರಮುಖ ಸುದ್ದಿ

ಆಗಸ್ಟ್ 18: ಹೊಕ್ಕಾಡಿಗೋಳಿ ಫ್ರೆಂಡ್ಸ್ ಆಶ್ರಯದಲ್ಲಿ “ಕೆಸರ್ದ ಕಂಡೊಡು ಗೊಬ್ಬುದ ಗಮ್ಮತ್”

ಆರಂಬೋಡಿ: ಹೊಕ್ಕಾಡಿಗೋಳಿ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಕೆಸರ್ದ ಕಂಡೊಡು ಗೊಬ್ಬುದ ಗಮ್ಮತ್ ಇತಿಹಾಸ ಪ್ರಸಿದ್ಧ ಹೊಕ್ಕಾಡಿಗೋಳಿ ಕಂಬಳ ಗದ್ದೆಯಲ್ಲಿ ಆಗಸ್ಟ್ 18ರಂದು ಜರಗಲಿದೆ.
ಬೆಳಿಗ್ಗೆ 9-30ಕ್ಕೆ ಕುಕ್ಕಿಪ್ಪಾಡಿ ಗ್ರಾ.ಪಂ. ಅಧ್ಯಕ್ಷರಾದ ಶೇಖರ್ ಶೆಟ್ಟಿ ಬದ್ಯಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕ್ರೀಡೋತ್ಸವ ಉದ್ಘಾಟನೆಯನ್ನು ಆರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್‌ಚಂದ್ರ ಜೈನ್ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಪ್ರಭಾಕರ ಎಚ್., ಹೊಕ್ಕಾಡಿಗೋಳಿ ಕಂಬಳ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ನೋಣಾಲುಗುತ್ತು, ಉಮೇಶ್ ಶೆಟ್ಟಿ ಮಾಣಿಸಾಗು ಹೊಸಮನೆ, ಬಂಗಾಡಿ ಕೊಲ್ಲಿ ಕಂಬಳ ಸಮಿತಿ ಅಧ್ಯಕ್ಷ ರಂಜನ್ ಜಿ. ಗೌಡ, ವೇಣೂರು ಪೆರ್ಮುಡ ಕಂಬಳ ಸಮಿತಿ ಅಧ್ಯಕ್ಷರಾದ ನಿತೀಶ್ ಎಚ್. ಕೋಟ್ಯಾನ್, ಮೂಡಬಿದ್ರೆ ನಗರ ಯೋಜನಾ ಪ್ರಾಧಿಕಾರ (ಮೂಡ) ಅಧ್ಯಕ್ಷರಾದ ಹರ್ಷವರ್ಧನ ಪಡಿವಾಳ, ಮೂಡಬಿದ್ರೆ ವಕೀಲರಾದ ನಾಗೇಶ್ ಬಿ. ಶೆಟ್ಟಿ, ಕೊಯಿಲ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಜಗದೀಶ್, ಕಿರಣ್ ಕುಮಾರ್ ಮಂಜಿಲ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಹಾಗೂ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮಕ್ಕಳಿಗೆ ಮಹಿಳೆಯರಿಗೆ, ಪುರುಷರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಜರಗಲಿದೆ ಎಂದು ಹೊಕ್ಕಾಡಿಗೋಳಿ ಫ್ರೆಂಡ್ಸ್ ವ್ಯವಸ್ಥಾಪಕರು ತಿಳಿಸಿದ್ದಾರೆ.

Related posts

ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: 12 ನಿರ್ದೇಶಕರುಗಳ ಸ್ಥಾನಕ್ಕೆ 25 ಮಂದಿ ಕಣದಲ್ಲಿ

Suddi Udaya

ವೇಣೂರು: ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯೋರ್ವರನ್ನು ಅಂಬ್ಯುಲೆನ್ಸ್‌ನಲ್ಲಿ ವೇಣೂರಿನಿಂದ ಕೇವಲ 45 ನಿಮಿಷಗಳಲ್ಲಿ ಕೆಎಂಸಿ ಆಸ್ಪತ್ರೆಗೆ ತಲುಪಿಸಿದ ಚಾಲಕ ಪ್ರಸಾದ್

Suddi Udaya

ಕೊಕ್ಕಡ: ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿ: ಬೈಕ್ ಸವಾರನಿಗೆ ಗಂಭೀರ ಗಾಯ

Suddi Udaya

ನ.7: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಮೇ. 16 : ತುರ್ತು ಕಾಮಗಾರಿ ಪ್ರಯುಕ್ತ ನಾನಾ ಕಡೆಗಳಲ್ಲಿ ವಿದ್ಯುತ್ ಕಡಿತ

Suddi Udaya

ತನ್ನ ಹೋಟೆಲ್ ಗೆ ಕಂಬಳ ಓಟದ ಪ್ರಸಿದ್ಧ ” ಕೋಣ ತಾಟೆ” ಹೆಸರಿಟ್ಟ ಮಾಲೀಕ

Suddi Udaya
error: Content is protected !!