September 6, 2026
ಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಬೆಳ್ತಂಗಡಿ : ಎಸ್.ಐ.ಟಿ ತನಿಖೆ ಮುಂದುವರಿಯಲಿ ಅರ್ಜಿದಾರರಿಗೆ ಕಿರುಕುಳ ಬೇಡ ಹೈಕೋರ್ಟ್

ಬೆಳ್ತಂಗಡಿ : ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ 39/2025 ಪ್ರಕರಣದ ರದ್ದು ಕೋರಿದ ಮತ್ತು ಪ್ರಕರಣಕ್ಕೆ ತಡೆ ಕೋರಿ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ವಿಠಲ್ ಗೌಡ, ಜಯಂತ್.ಟಿ ಸೇರಿ ಅರ್ಜಿ ಸಲ್ಲಸಿದ್ದ ಪ್ರಕರಣ ಕಳೆದ ಭಾರಿಯ ವಿಚಾರಣೆಯಲ್ಲಿ ಎಸ್.ಐ.ಟಿ ವಿಚಾರಣೆಗೆ ತಡೆಯಾಜ್ಞೆ ತೆರವು ಮಾಡಿ ವಿಚಾರಣೆ ಮುಂದೂಡಿತ್ತು.ಈಗ ನಡೆಯುತ್ತಿರುವ ಎಸ್.ಐ.ಟಿ ತನಿಖೆ ಮುಂದುವರಿಯಲಿ ಅರ್ಜಿದಾರರಾದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರಿಗೆ ಕಿರುಕುಳ ನೀಡಬಾರದು ಎಂದು ರಾಜ್ಯ ಉಚ್ಚ ನ್ಯಾಯಾಲಯ ಸೂಚನೆ ನೀಡಿ ಪ್ರಕರಣದ ವಿಚಾರಣೆಯನ್ನು ಮತ್ತೆ ಮುಂದೂಡಿದೆ.

ನ.28 ರಂದು ಎಸ್‌.ಐ.ಟಿ ತನಿಖೆಗೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ವಿಠಲ್ ಗೌಡ ಅವರು ಸಲ್ಲಿಸಿದ್ದ ಅರ್ಜಿಯ ಮುಂದುವರಿದ ವಿಚಾರಣೆ ನಡೆಸಿದ ಹೈಕೋರ್ಟ್ ದೂರುದಾರರ ಪರವಾದ ವಾದಗಳನ್ನು ಆಲಿಸಿದ ಬಳಿಕ ಎಸ್.ಐ.ಟಿ ತನಿಖೆ ಮುಂದುವರಿಯಲಿ ಎಂದು ನ್ಯಾಯಾಲಯ ಸೂಚಿಸಿದೆ. ಈ ಹಿಂದೆ ನೀಡಿದ್ದ ಆದೇಶದಂತೆ ಅರ್ಜಿದಾರರಿಗೆ ಎಸ್.ಐ.ಟಿ ಯಾವುದೇ ಕಿರುಕುಳ ನೀಡಬಾರದು ಎಂದು ಸೂಚಿಸಿದೆ.ಇದೀಗ ಎಸ್.ಐ.ಟಿ ತನಿಖೆಗೆ ಯಾವುದೇ ಅಡೆತಡೆಗಳು ಇಲ್ಲವಾಗಿದ್ದು ತನಿಖೆ ಮುಂದುವರಿಯಲಿದೆ.

ಈಗಾಗಲೆ ಎಸ್.ಐ.ಟಿ ತಂಡ ಬೆಳ್ತಂಗಡಿ ನ್ಯಾಯಾಲಯಕ್ಕೆ BNS 215 ಅಡಿಯಲ್ಲಿ ವರದಿಯೊಂದನ್ನು ಸಲ್ಲಿಸಿದ್ದು ನ್ಯಾಯಾಲಯದಲ್ಲಿ ತನಿಖೆಯೊಂದಿಗೆ ಮಹೇಶ್ ಶೆಟ್ಟಿ ಹಾಗೂ ಇತರರು ಸಹಕರಿಸುತ್ತಿಲ್ಲ ಎಂಬ ವಿಚಾರವನ್ನು ನ್ಯಾಯಾಧೀಶರ ಮುಂದೆ ಇಟ್ಟಿರುವುದಾಗಿ ತಿಳಿದು ಬಂದಿದ್ದು ನ್ಯಾಯಾಲಯದಿಂದ ಡಿ.2 ರಂದು ಸೂಕ್ತ ಅನುಮತಿಗಳನ್ನು ಪಡೆದುಕೊಂಡು ಮುಂದಿನ ತನಿಖೆಗೆ ಸಿದ್ದತೆ ನಡೆಸುತ್ತಿದೆ.

Related posts

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ಜಿಲ್ಲಾ ಮಟ್ಟದ ಪ್ರಶಸ್ತಿ

Suddi Udaya

ಮಂಗಳೂರು ಕೃಷಿಕರ ಸಹಕಾರಿ ಸಂಘ ಮಂಗಳೂರು (ಮಾಸ್ ಲಿಮಿಟೆಡ್) ಇವರಿಂದ ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಸಹಯೋಗದಲ್ಲಿ ಗುರುವಾಯನಕೆರೆಯಲ್ಲಿ ಅಡಿಕೆ ಖರೀದಿ ಕೇಂದ್ರದ ಉದ್ಘಾಟನೆ

Suddi Udaya

ರಾಜ್ಯದ ಕಾಂಗ್ರೆಸ್ ಸರಕಾರದ ದುರಾಡಳಿತದ ವಿರುದ್ದ ಕಳಿಯ ಗ್ರಾ.ಪಂ. ಎದುರು ಬಿಜೆಪಿ ಪ್ರತಿಭಟನೆ

Suddi Udaya

ಅಲಂಕೃತಗೊಂಡ ನಾರಾವಿ ಸಖಿ ಮತದಾನ ಕೇಂದ್ರದಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ

Suddi Udaya

ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ; ಉಮೇಶ್ ಶೆಟ್ಟಿ ಉಜಿರೆ ಬಳಗದ ಸದಸ್ಯರ ಪದಗ್ರಹಣ

Suddi Udaya

ನಿಡ್ಲೆ: ಗೋವಾ ಕೊಂಕಣ್ ರೈಲ್ವೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡೊಂಬಯ್ಯಗೌಡ ಹೃದಯಾಘಾತದಿಂದ ನಿಧನ

Suddi Udaya
error: Content is protected !!