27.5 C
ಪುತ್ತೂರು, ಬೆಳ್ತಂಗಡಿ
April 3, 2025
ಆಯ್ಕೆಪ್ರಮುಖ ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆಯ ಶ್ರೀ ಧ.ಮಂ.ಪ.ಪೂ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳ ಮತ್ತು ಸ್ವಚ್ಛತಾ ಸೇನಾನಿಗಳ ಪದಪ್ರದಾನ ಕಾರ್ಯಕ್ರಮ

ಉಜಿರೆ: ಉಜಿರೆಯ ಶ್ರೀ ಧ.ಮಂ.ಪ.ಪೂ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳ ಮತ್ತು ಸ್ವಚ್ಛತಾ ಸೇನಾನಿಗಳ ಪದಪ್ರದಾನ ಕಾರ್ಯಕ್ರಮವು ಆಗಸ್ಟ್ 9ರಂದು ಜರುಗಿತು. ಕಾರ್ಯಕ್ರಮಕ್ಕೆ ಮೂಡಬಿದ್ರೆ ನ್ಯಾಯವಾದಿಗಳಾದ ಶ್ವೇತಾ ಜೈನ್ ಭಾಗವಹಿಸಿ ಮಾತನಾಡುತ್ತಾ ಗುರುಗಳ ಸೂಕ್ತ ಮಾರ್ಗದರ್ಶನದೊಂದಿಗೆ ನಿಮ್ಮ ನಾಯಕತ್ವ ಗುಣ ಬೆಳೆಯಲಿ, ಮುಂದೆ ಭವಿಷ್ಯದಲ್ಲಿ ಕೃಷಿ ವ್ಯವಹಾರ, ರಾಜಕಾರಣ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಭರವಸೆಯ ನಾಯಕರಾಗಿ ಗುರುತಿಸಿಕೊಳ್ಳಿ ಎಂದು ಶುಭಹಾರೈಸಿದರು.

ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ ವಿದ್ಯಾರ್ಥಿ ಪ್ರತಿನಿಧಿಗಳ ಪ್ರತಿಜ್ಞಾವಿಧಿ ಬೋಧಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ನಾಯಕರಿಗೆ ಗುರುತು ಪತ್ರ ನೀಡಿ ಗೌರವಿಸಲಾಯಿತು. ಉಪಪ್ರಾಂಶುಪಾಲ ಡಾ. ರಾಜೇಶ್ ಬಿ. ಸ್ವಚ್ಛತಾ ಸೇನಾನಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ವಿದ್ಯಾರ್ಥಿನಿ ಆತ್ಮಿ ಅತಿಥಿ ಪರಿಚಯ ಮಾಡಿ, ಅನುಶ್ರೀ ನಿರೂಪಿಸಿ, ಯುಕ್ತಾ ವಂದಿಸಿದರು.

Related posts

ನೈಋತ್ಯ ರೈಲ್ವೆಯ ಡಿಆರ್‌ಯುಸಿಸಿ ಸದಸ್ಯರಾಗಿ ಬಂಗಾಡಿಯ ರಾಜೇಶ್ ಪುದುಶೇರಿ ನೇಮಕ

Suddi Udaya

ಸಹಾಯಕ ಪ್ರಾಧ್ಯಾಪಕರಾಗಳು ವಿದ್ಯಾ ಮಾತಾ ಅಕಾಡೆಮಿಯಿಂದ ಆನ್ಲೈನ್ ತರಬೇತಿ

Suddi Udaya

ಬೆಳ್ತಂಗಡಿ ಸರಕಾರಿ ಪ.ಪೂ. ಕಾಲೇಜಿಗೆ ಶೇ. 96.36 ಫಲಿತಾಂಶ

Suddi Udaya

ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ವಸತಿ ಮತ್ತು ವಾಣಿಜ್ಯ ಸಂಬಂಧ ಭೂ ಪರಿವರ್ತನೆ ಜಮೀನುಗಳ ಏಕ ವಿನ್ಯಾಸ ನಕ್ಷೆಗಳಿಗೆ ಆಯಾ ಗ್ರಾ.ಪಂ. ಗಳಲ್ಲಿಯೆ ಅನುಮೋದನೆ ನೀಡುವಂತೆ ಶಾಸಕರುಗಳಿಂದ ಮನವಿ

Suddi Udaya

ಹಳೆಕೋಟೆ ಮನೆಯಲ್ಲಿ ನಡೆದ ಬಂಗೇರರ ಅಂತಿಮ ವಿಧಿ-ವಿಧಾನ: ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶಕ್ಕೆ ಅವಕಾಶ: ವರ್ತಕರಿಂದ ಅಂಗಡಿ-ಮುಂಗಟ್ಟು ಬಂದ್ ಮಾಡಿ ಗೌರವ

Suddi Udaya

ಬೆಳ್ತಂಗಡಿ ತಹಶೀಲ್ದಾರ್ ಆಗಿ ಮತ್ತೆ ಪೃಥ್ವಿ ಸಾನಿಕಂ ನೇಮಕ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ