ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನಲ್ಲಿ ಆಟಿದ ಆಯನ ವಿಶೇಷ ಕಾರ್ಯಕ್ರಮ

Suddi Udaya

ಉಜಿರೆ ಇಲ್ಲಿನ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನಲ್ಲಿ ಆಟಿ ತಿಂಗಳ ವಿಶಿಷ್ಟ ಆಚರಣೆ ಆತಿದ ಆಯನ ವಿಶೇಷ ಕಾರ್ಯಕ್ರಮ ಆ.10ರಂದು ನಡೆಯಿತು.
ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ಸಂಭ್ರಮಾಚಾರಣೆಗಳಿಗೆ ಕೊರತೆ ಇರಲಿಲ್ಲ ಪ್ರಕೃತಿಯನ್ನು ಆರಾಧಿಸುತ್ತಾ ಪ್ರಕೃತಿದತ್ತ ಆಹಾರ ಸ್ವೀಕರಿಸುತ್ತಾ ಆರೋಗ್ಯ ಕಾಳಜಿ ಮೆರೆಯುತ್ತಿದ್ದ ನಾಡೆಂದರೆ ಅದುವೇ ತುಳುನಾಡು.ಆದರೆ ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಆಹಾರ, ಜೀವನಶೈಲಿ ಮರೆಯಾಗುತ್ತಿದೆ.ಆದರೆ ನಾವಿನ್ಯತೆಗಳ ನಡುವೆಯೂ ತುಳುನಾಡಿನ ಸಂಸ್ಕೃತಿ,ವೈಶಿಷ್ಟ್ಯ ಹಾಗೂ ಸಂಪ್ರದಾಯಗಳನ್ನು ಇಂದಿನ ಯುವಜನತೆ ಗೆ ಪರಿಚಯಿಸಲು ಆಯೋಜಿಸಿದ ‘ಆಟಿದ ಆಯನೊ’ ಎಂಬ ಕಾರ್ಯಕ್ರಮ ಶ್ಲಾಘನೀಯ ಎಂದು ಸಾಹಿತಿ,ನಾಟಕಕಾರ ಸದಾನಂದ ಮುಂಡಾಜೆ ಅಭಿಪ್ರಾಯ ಪಟ್ಟರು.ಅವರು ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಆಟಿ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ,ತುಳುವರ ಪ್ರತಿಯೊಂದು ಆಚರಣೆಯಲ್ಲಿಯೂ ವೈಜ್ಞಾನಿಕತೆ ಇದೆ ಎಂದು ಉದಾಹರಣೆ ಸಹಿತ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಮಾತನಾಡಿ
ತುಳುನಾಡಿನ ವಿಶಿಷ್ಟ ಆಚಾರಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟಾಗ ಮುಂದಿನ ಪೀಳಿಗೆಗೆ ತುಳುನಾಡಿನ ಪರಂಪರೆಯನ್ನು ಮುಂದುವರಿಸಬಹುದು.ವೈಜ್ಞಾನಿಕ ದೃಷ್ಟಿಕೋನದಿಂದ ಈ ಆಚರಣೆಯನ್ನು ವಿದ್ಯಾರ್ಥಿಗಳು ಸಂಘಟಿಸಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಆಟಿ ತಿಂಗಳ ವಿಶೇಷ ಖಾದ್ಯಗಳು, ಸಲಕರಣೆಗಳು ಹಾಗೂ ಗಿಡಮೂಲಿಕೆ ಔಷಧಿ ಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ವಿದ್ಯಾರ್ಥಿ ಶರಣ್ ಸ್ವಾಗತಿಸಿ,ಶ್ರೇಯಾ ವಂದಿಸಿದರು.ವಿದ್ಯಾರ್ಥಿನಿಯರಾದ ಸ್ವಪ್ನ ಹಾಗೂ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.ಕಾಲೇಜಿನ ಕಲಾವಿಭಾಗವು ಕಾರ್ಯಕ್ರಮವನ್ನು ಸಂಘಟಿಸಿ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.

Leave a Comment

error: Content is protected !!