ಕೊಕ್ರಾಡಿ: ಸರಕಾರಿ ಪದವಿಪೂರ್ವ ಕಾಲೇಜು ಕೊಕ್ರಾಡಿಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಏರ್ಪಡಿಸಿದ ಆಟಿದ ನೆಂಪು ಕಾರ್ಯಕ್ರಮವು ಪ್ರಾಂಶುಪಾಲರಾದ ನೋರ್ಬರ್ಟ್ ಮಾರ್ಟೀಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಅಂಡಿಂಜೆ ಗ್ರಾ.ಪಂ ನ ಮಾಜಿ ಅಧ್ಯಕ್ಷ ಮೋಹನ್ ಅಂಡಿಂಜೆ ದೀಪ ಬೆಳಗಿಸಿ ಆಷಾಡದ ಮಹತ್ವ ಹಾಗೂ ಅದರ ವಿಶೇಷತೆಗಳ ಬಗ್ಗೆ ಒಂದೆರಡು ಹಿತನುಡಿಗಳನ್ನು ಆಡಿದರು.
ಸರಕಾರಿ ಪದವಿಪೂರ್ವ ಕೊಕ್ರಾಡಿ ಕಾಲೇಜಿನ ಕಾರ್ಯಧ್ಯಕ್ಷ ಶ್ರೀ ಸೂರ್ಯನಾರಾಯಣ. ಡಿ. ಕೆ, ಮಾಜಿ , ವೇಣೂರು ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವೆಂಕಟೇಶ್ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರುಗಳು ಉಪಸ್ಥಿತರಿದ್ದರು
ವಿದ್ಯಾರ್ಥಿಗಳು ಆಷಾಡ( ಆಟಿ) ತಿಂಗಳಿನಲ್ಲಿ ಮಾಡುವ ವಿವಿಧ ರೀತಿಯ ತಿಂಡಿ ತಿನಸುಗಳನ್ನು ತಯಾರಿಸಿ, ತಂದಿದ್ದರು.ಹಾಗೂ ವಿವಿಧ ರೀತಿಯ ಔಷಧೀಯ ಗುಣಗಳುಳ ಗಿಡಮೂಲಿಕೆಯ ಸಸಿ, ಬಲ್ಲಿ, ಚೆಕ್ಕೆ , ಹಿರಿಯರು ಉಪಯೋಗಿಸುತ್ತಿದ ಕೃಷಿ ಸಲಕರಣೆಗಳನ್ನು ತಂದಿದ್ದರು.