ಬೆಳ್ತಂಗಡಿ :ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ನಡ/ ಕನ್ಯಾಡಿ ಗ್ರಾಮ ಸಮಿತಿ ಮಹಿಳಾ ವೇದಿಕೆ ವತಿಯಿಂದ ಸತತವಾಗಿ ಒಂಬತ್ತನೇ ವರ್ಷದ ಆಟಿಡೊಂಜಿ ಕೂಟ ಕಾರ್ಯಕ್ರಮ ಕಾರ್ಯಕ್ರಮವು ನಡೆಯಿತು.
ಬೆಳ್ತಂಗಡಿ ತಾಲೂಕು ಗೌಡರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಮಕ್ಕಳನ್ನು ವೇದಿಕೆಗೆ ಕರೆದು ಅವರ ಪ್ರತಿಭೆಯನ್ನು ಗುರುತಿಸುವ ಕಾರ್ಯವನ್ನು ಸಂತೋಷ ವ್ಯಕ್ತಪಡಿಸಿದರು ಸ್ವಜಾತಿ ಬಾಂಧವರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಾಣಿ ವಿದ್ಯಾಸಂಸ್ಥೆಯ ಹಿರಿಯ ಶಿಕ್ಷಕಿ ಶ್ರೀಮತಿ ಮೋಹನಾಂಗಿ ನೆರವೇರಿಸಿ ಆಟಿ ತಿಂಗಳ ಮಹತ್ವವನ್ನು, ಆಟಿತಿಂಗಳ ತಿನಿಸುಗಳ ಬಗ್ಗೆ ಮಾಹಿತಿಯನ್ನು ನೀಡಿದರು, ಹಿಂದಿನ ಕಾಲದಲ್ಲಿ ಯಾವ ರೀತಿಯಲ್ಲಿ ಆಚಾರ ವಿಚಾರಗಳನ್ನು ಹೇಗೆ ನಡೆಸುತ್ತಿದ್ದರು ಎಂಬ ವಿಚಾರವನ್ನು ತಿಳಿಸಿದರು.
ಯುವ ವೇದಿಕೆ ಅಧ್ಯಕ್ಷರಾದ ಚಂದ್ರಕಾಂತ್ ನಿಡ್ದಾಚೆ ಅವರು ನಡ ಗ್ರಾಮದ ಮಹಿಳಾ ಸಂಘಟನೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿ ಇದೇ ತಿಂಗಳು 18ನೇ ತಾರೀಕಿನಂದು ನಡೆಯುವ ಗೌಡರ ಕೆಸರ್ ಗಮ್ಮತ್ತು ಕ್ರೀಡಾಕೂಟದ ಬಗ್ಗೆ ಮಾಹಿತಿಯನ್ನು ನೀಡಿದರು.
ಮಹಿಳಾ ವೇದಿಕೆಯ ಅಧ್ಯಕ್ಷರು ಸೌಮ್ಯ ಲತಾ ಯತೀಶ ಗೌಡ ಗೌರವಾಧ್ಯಕ್ಷರು ಶ್ರೀಮತಿ ಮಮತಾ ಶ್ರೀನಾಥ್ ಪ್ರಮುಖರಾದ ರತ್ನಾವತಿ ಲೋಕೇಶ್ ತಾಲೂಕು ಸಮಿತಿಯ ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ ಎಂ ತಾಲೂಕು ಸಮಿತಿಯ ನಿರ್ದೇಶಕರಾದ ವಸಂತಗೌಡ ವಿ ಜಿ ಕೊಯ ಗುಡ್ಡೆ ಉಪಸ್ಥಿತರಿದ್ದರು. ನಡದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ರೀಮತಿ ರಾಜಿವಿ ಇವರ ನಿಸ್ವಾರ್ಥ ಸೇವೆಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು