ಪಡಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಅಂತೋನಿ ಫೆರ್ನಾಂಡಿಸ್ ಇವರ ಅಧ್ಯಕ್ಷತೆಯಲ್ಲಿ ಆ.11ರಂದು ಸಮೃದ್ಧಿ ಸಭಾಭವನದಲ್ಲಿ ನಡೆಯಿತು.
ಸಂಘವು ವರದಿ ಸಾಲಿನಲ್ಲಿ ರೂ.162 ಕೋಟಿ ವಾರ್ಷಿಕ ವ್ಯವಹಾರ ನಡೆಸಿ,ರೂ.92.91 ಲಕ್ಷ ನಿವ್ವಳ ಲಾಭ ಗಳಿಸಿದ್ದು ಸಂಘದ ಅಧ್ಯಕ್ಷ ಅಂತೋನಿ ಫೆರ್ನಾಂಡಿಸ್ ಸದಸ್ಯರಿಗೆ 14% ಡಿವಿಡೆಂಟ್ ಘೋಷಿಸಿದರು.
ಸಭೆಯಲ್ಲಿ ಕುಶಾಲಪ್ಪ ಗೌಡ ಪೂವಾಜೆ, ಶ್ರೀಮತಿ ವಾಣಿ ಆರ್ ಬಳ್ಳಾಲ್, ಅತುಲ್ ಕೃಷ್ಣ ರವರನ್ನು ಸನ್ಮಾನಿಸಲಾಯಿತು.
ಕಳೆದ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸ್ಥಳೀಯ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಪ್ರೋತ್ಸಾಹಿಸಲಾಯಿತು. ಸಂಘದ ಸಾಲಗಾರ ಸದಸ್ಯರಿಗೆ ಮರಣ ಸಾಂತ್ವನ ನಿಧಿಯನ್ನು ಅನುಷ್ಠಾನಕ್ಕೆ ತರಲಾಯಿತು. ಹಾಗೂ ಮೈಕ್ರೋ ಎಟಿಎಂ ಅನ್ನು ಬಿಡುಗಡೆ ಮಾಡಲಾಯಿತು.
ವೇದಿಕೆಯಲ್ಲಿ ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಕುಶಾಲಪ್ಪ ಗೌಡ ಪೂವಾಜೆ, ಸಂಘದ ಉಪಾಧ್ಯಕ್ಷರಾದ ನರೇಂದ್ರ ಕುಮಾರ್ , ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸುಕೇಶಿನಿ ಎ., ನಿರ್ದೇಶಕರಾದ ಸಂತೋಷ್ ಶೆಟ್ಟಿ, ರವಿಕುಮಾರ್ ಕೆ.ವೈ., ರಾಮು, ಪದ್ಮನಾಭ ನಾಯ್ಕ ಸಿ.ಸಿ., ಉಮೇಶ್, ಶ್ರೀಮತಿ ಉಷಾ, ಶ್ರೀಮತಿ ಸುನಂದ, ನವೀನ, ವಲಯ ಮೇಲ್ವಿಚಾರಕರು ಸುದರ್ಶನ್ ಉಪಸ್ಥಿತರಿದ್ದರು.
ಅಂಡಿಂಜೆ ಸರಕಾರಿ ಉನ್ನತಿಕರಿಸಿದ ಶಾಲಾ ಮುಖ್ಯ ಶಿಕ್ಷಕ ಶಿವಶಂಕರ್ ಭಟ್ ನಿರೂಪಿಸಿದರು. ನಿರ್ದೇಶಕರಾದ ಕೃಷ್ಣಪ್ಪ ಪೂಜಾರಿ ಸ್ವಾಗತಿಸಿ, ನಾರಾಯಣ ಮೂಲ್ಯ ಧನ್ಯವಾದವಿತ್ತರು
.