27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಶಾಲಾ ಕಾಲೇಜು

ಪುಂಜಲ್ ಕಟ್ಟೆ ಕ್ಲಸ್ಟರ್ ವತಿಯಿಂದ ರಘುಪತಿ ಕೆ ರಾವ್ ರವರಿಗೆ ಬೀಳ್ಕೊಡುಗೆ ಸಮಾರಂಭ

ಬೆಳ್ತಂಗಡಿ :ಪ್ರತಿಯೊಬ್ಬರೂ ಕೂಡ ತಾವು ಮಾಡುವಕರ್ತವ್ಯವನ್ನುಸಂತೋಷದಿಂದ ಮಾಡಿದರೆಖಂಡಿತವಾಗಿಯೂ ಸಂತೃಪ್ತಿ ಸಿಕ್ಕೇ ಸಿಗುತ್ತದೆ. ಅಂತಹ ಸಂತೃಪ್ತಿಯು ಶಿಕ್ಷಣ ಕ್ಷೇತ್ರದಲ್ಲಿ ನಾನು ಮಾಡಿರುವ ಕರ್ತವ್ಯದ ಅವಧಿಯಲ್ಲಿ ನನಗೆ ದೊರಕಿದೆ ಎಂದು ತುಂಬ ಮನದಿಂದ ಹೇಳಬಯಸುತ್ತೇನೆ.ಪ್ರತಿಯೊಬ್ಬರೂ ಕೂಡ ತಾವು ಮಾಡುವ ಕರ್ತವ್ಯವನ್ನು ಮನ ಸಂತೋಷದಿಂದ ಮಾಡಿದಾಗ ಮಾತ್ರ ಅದರಲ್ಲಿ ಆ ತೃಪ್ತಿ ಸಿಗಲು ಸಾಧ್ಯ. ಶಿಕ್ಷಣ ಕ್ಷೇತ್ರದಲ್ಲಿ ಕಳೆದ 28 ವರ್ಷಗಳ ಕರ್ತವ್ಯದ ಅವಧಿಯು ಅಂತಹ ಸಂತೃಪ್ತಿಯನ್ನು ನೀಡಿದೆ. ನಮ್ಮೆಲ್ಲರ ಬದುಕು ಮಕ್ಕಳೊಂದಿಗೆ ನಡೆಯುತ್ತದೆ. ಯಾವುದೇ ಸಮಸ್ಯೆ ಇದ್ದರೂ ಕೂಡ ಮಕ್ಕಳ ಮುಂದೆ ಬಂದಾಗ ಆ ಎಲ್ಲಾ ಸಮಸ್ಯೆಗಳು ಮಾಯವಾಗಿ ಸಂತೋಷದ ಕ್ಷಣ ಹೊರಹೊಮ್ಮುತ್ತದೆ. ನಾನು ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ, ಸಂಘಟನೆಗಳಲ್ಲಿ ತೊಡಗಿ, ಶಾಲೆಗಳಲ್ಲಿ ಮಾಡಿರುವ ಪ್ರತಿಕ್ಷಣವೂ ಕೂಡ ನನ್ನ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿ ಕೊಟ್ಟಿದೆ. ಇಂದು ಈ ಶಿಕ್ಷಣ ಕ್ಷೇತ್ರದಿಂದ ನಿವೃತ್ತಿಯಾದರು ಕೂಡ ಸದಾ ಸಂತೋಷದ ಕ್ಷಣವನ್ನು ನಾನು ಪಡೆದಿದ್ದೇನೆ ಎನ್ನುವ ಧನ್ಯತಾಭಾವ ನನ್ನಲ್ಲಿದೆ* ಎಂದು ಜುಲೈ 31ರಂದು ಶಿಕ್ಷಣ ಕ್ಷೇತ್ರದಿಂದ ನಿವೃತ್ತಿ ಗೊಂಡಿರುವ ರಘುಪತಿ ಕೆ ರಾವ್ ಇವರು ಮಾತನಾಡಿದರು.
ಅವರು ಪುಂಜಾಲಕಟ್ಟೆಯ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಅಗಸ್ಟ್ 10ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ಸಭಾಭವನದಲ್ಲಿ ಹಮ್ಮಿಕೊಂಡಿರುವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಈ ಸಭೆಯ ಅಧ್ಯಕ್ಷತೆಯನ್ನು ಕನ್ನಡ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಉದಯಕುಮಾರ್ ಬಿ ವಹಿಸಿಕೊಂಡು ಸಭೆಯನ್ನು ಮುನ್ನಡೆಸುತ್ತಾ ರಘುಪತಿ ಕೆ ರಾವ್ ಅವರ ಬಗ್ಗೆ ಏಳೆ ಎಳೆಯಾಗಿ ಸಭೆಯ ಮುಂದೆ ವಿಚಾರಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ ಬೆಳ್ತಂಗಡಿ ಶಾಖೆಯ ಅಧ್ಯಕ್ಷ ಜಯರಾಜ್ ಜೈನ್, ಕೆಪಿಎಸ್. ಪುಂಜಾಲಕಟ್ಟೆಯ ಪ್ರಾಥಮಿಕ ಶಾಲೆ ವಿಭಾಗದ ಪ್ರಭಾರ ಮುಖ್ಯೋಪಾಧ್ಯಾಯರಾದ ಕರುಣಾಕರ್, ಮಾಲಾಡಿ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಲತಾ ನಾಯಕ್, ಮಚ್ಚಿನ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಪ್ರಕಾಶ್ ನಾಯಕ್, ಇಂದು ಸನ್ಮಾನ ಸ್ವೀಕರಿಸಿರುವ ರಘುಪತಿ ಕೆ ರಾವ್ ದಂಪತಿಗಳು , ಪುಂಜಾಲಕಟ್ಟೆಯ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಚೇತನ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ವಿಚಾರಗಳನ್ನು ಸಭೆಯ ಮುಂದಿಟ್ಟರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡು, ಜಯರಾಜ್ ಜೈನ್ ಮಾಲಾಡಿ ಸ್ವಾಗತಿಸಿ, ಪೂಂಜಾಲಕಟ್ಟೆ ಸುರೇಶ್ ಶೆಟ್ಟಿ. ಧನ್ಯವಾದ ಸಲ್ಲಿಸಿ, ಪುಂಜಾಲಕಟ್ಟೆ ಪ್ರೌಢಶಾಲಾ ವಿಭಾಗದ ಸಮಾಜ ವಿಜ್ಞಾನ ಶಿಕ್ಷಕ ಧರಣೇಂದ್ರ ಕೆ ನಿರೂಪಿಸುವುದರೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.

Related posts

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಬೆಳ್ತಂಗಡಿ ತಾಲೂಕಿನ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರ ಸಭೆ

Suddi Udaya

ಭರತನಾಟ್ಯ ಜೂನಿಯರ್ ಪರೀಕ್ಷೆ: ಅಳದಂಗಡಿಯ ನಿಯತಿ ಯು. ಶೆಟ್ಟಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಬೇಸಿಗೆ ಶಿಬಿರ ಯಶಸ್ವಿ ಸಂಪನ್ನ

Suddi Udaya

ತೆಕ್ಕಾರು ಗ್ರಾ.ಪಂನಲ್ಲಿ ವಿಶೇಷ ಗ್ರಾಮ ಸಭೆ

Suddi Udaya

ಮರೋಡಿ ಗ್ರಾಮ‌ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ‌ ಸುತ್ತಿನ ಗ್ರಾಮಸಭೆ

Suddi Udaya

ಗುರುವಾಯನಕೆರೆ: ಶ್ರೀ ಅಯ್ಯಪ್ಪ ಮಂದಿರದಲ್ಲಿ ಭಜನಾ ವಾರ್ಷಿಕೋತ್ಸವ ಪ್ರಯುಕ್ತ ತಾಲೂಕಿನ ವಿವಿಧ ತಂಡಗಳಿಂದ ಕುಣಿತ ಭಜನೆ

Suddi Udaya
error: Content is protected !!