September 6, 2026
ಗ್ರಾಮಾಂತರ ಸುದ್ದಿ

ಬೆಳ್ತಂಗಡಿ ಖಾಸಗಿ ರಸ್ತೆಗೆ ಅಡ್ಡಲಾಗಿ ಇಟ್ಟ ಕಾರು ಮಹಿಳೆಯಿಂದ ಕಾರು ಮಾಲಿಕನಿಗೆ ಹಿಗ್ಗ ಮುಗ್ಗ ಕ್ಲಾಸ್

ಬೆಳ್ತಂಗಡಿ : ಖಾಸಗಿ ರಸ್ತೆಗೆ ಅಡ್ಡಲಾಗಿ ಎರಡು ಗಂಟೆಗೂ ಅಧಿಕ ಸಮಯ‌ ಕೀಯಾ ಕಾರು ನಿಲ್ಲಿಸಿ ಹೋಗಿದ್ದ ಮಾಲೀಕ ಜಿಲ್ಲಾ ಕಿಸನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೋಹನ್ ಕಲ್ಮಂಜ ಎಂಬಾತನಿಗೆ ಸಂಚಾರಿ ಪೊಲೀಸರ ಮುಂದೆಯೇ ಮಹಿಳೆ ಹಾಗೂ ಸಾರ್ವಜನಿಕರು ಸರಿಯಾಗಿ ಕ್ಲಾಸ್ ತೆಗೆದುಕೊಂಡ ಘಟನೆ ಆ.11 ರಂದು ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ಶ್ರೀ ಗುರುದೇವ ಬ್ಯಾಂಕ್ ನ ಶಾಖಾ ಕಚೇರಿಗೆ ಹಾಗೂ ಖಾಸಗಿ ಮನೆಗೆ ಹೋಗುವ ರಸ್ತೆಗೆ ಅಡ್ಡಲಾಗಿ ಆ.11 ರಂದು 12:30 ಕ್ಕೆ ಕೀಯಾ ಕಂಪನಿಯ KA-70-M-4209 ಸಂಖ್ಯೆಯ ಕಾರನ್ನು ಮಾಲೀಕ ಮೋಹನ್ ಕಲ್ಮಂಜ ಎಂಬಾತ ಇಟ್ಟು ಬೇರೆಡೆ ಹೋಗಿದ್ದು ಎಷ್ಟೇ ಕರೆ ಮಾಡಿ ತಿಳಿಸಿದರೂ ಕ್ಯಾರೆ ಮಾಡಿರಲ್ಲಿಲ್ಲ ಬ್ಯಾಂಕ್ ಸಭೆಗೆ ಬರಬೇಕಾದ ಸದಸ್ಯರ ಕಾರು ಒಳಪ್ರವೇಶ ಮಾಡಲು ಸಾಧ್ಯವಾಗಿರಲ್ಲಿಲ್ಲ, ಪಕ್ಕದ ಖಾಸಗಿ ಮನೆಯ ಮಾಲಕಿ ವಯಸ್ಸಾದ ತಾಯಿ ಜೊತೆ ಬೆಂಗಳೂರಿಗೆ ಹೋಗಲು ರಸ್ತೆ ಕಡೆ ಬರುವಾಗ ಕೂಡ ಕಾರು ಮಾಲೀಕ ಒಂದು ಗಂಟೆಯಾದರೂ ಬಂದೇ ಇಲ್ಲ ಕೊನೆಗೆ ಬೆಳ್ತಂಗಡಿ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರನ್ನು ಕರೆಸಲಾಯಿತು.

ಖಾಸಗಿ ಮನೆಯ ಮಹಿಳೆ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಕಾರು ಮಾಲೀಕ ಮೋಹನ್ ಕಲ್ಮಂಜ ನಿಗೆ ಕರೆ ಮಾಡಿ ತಕ್ಷಣ ಬರಲು ತಿಳಿಸಿದರೂ ತಡವಾಗಿ 2:30 ಕ್ಕೆ ಮಾಲೀಕ ಆಗಮಿಸಿದ್ದಾನೆ.

ಈ ವೇಳೆ ಪೊಲೀಸರ ಮುಂದೆಯೇ ಮಹಿಳೆ ಹಾಗೂ ಸಾರ್ವಜನಿಕರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದು. ಈ ವೇಳೆ ಕಾರು ಮಾಲೀಕ ಮೋಹನ್ ಕಲ್ಮಂಜ ಮಹಿಳೆಗೆ ಸಾರ್ವಜನಿಕರ ಮುಂದೆ ಕ್ಷಮೆ ಕೇಳಿದ್ದಾನೆ. ಬಳಿಕ ಸಂಚಾರಿ ಪೊಲೀಸರು ಕಾರನ್ನು ಠಾಣೆ ವಶಕ್ಕೆ ಪಡೆದುಕೊಂಡಿದ್ದು‌‌‌. ಪೊಲೀಸರು ಕಾರಿನ ಮೇಲೆ ಮಾಲೀಕ ಮೋಹನ್ ಕಲ್ಮಂಜನಿಗೆ ದಂಡ ವಿಧಿಸಿದ್ದಾರೆ. ಮಹಿಳೆ ಕಾರು ಮಾಲೀಕ ಮೋಹನ್ ಕಲ್ಮಂಜನಿಗೆ ಕ್ಲಾಸ್ ತೆಗೆದುಕೊಂಡ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ

.

Related posts

ವಿದ್ಯಾಮಾತಾದಲ್ಲಿ ತರಬೇತಿ ಪಡೆದ ಬಸವರಾಜ ಮುದವಿ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆ

Suddi Udaya

ಡಿಪ್ಲೋಮಾ ಕೋರ್ಸ್ ಗೆ ವಿವಿಧ ಸಂಸ್ಥೆಗಳಿಂದ ಅರ್ಜಿ ಆಹ್ವಾನ

Suddi Udaya

ಹ್ಯಾಕರ್ ಗಳ ವಂಚನೆಗೆ ಸಿಲುಕಿ ರಿಯಾದ್ ಜೈಲಿನಲ್ಲಿರುವ ಚಂದ್ರಶೇಖರ್: ಚಂದ್ರಶೇಖರ್ ಬಿಡುಗಡೆಗೆ ಕ್ರಮ ಕೈಗೊಳ್ಳಲು ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಕೇಂದ್ರ ಸರ್ಕಾರಕ್ಕೆ ಒತ್ತಾಯ

Suddi Udaya

ಅರಸಿನಮಕ್ಕಿ ಸರಕಾರಿ ಪ.ಪೂ. ಕಾಲೇಜಿಗೆ ಶೇ. 93.33 ಫಲಿತಾಂಶ

Suddi Udaya

ನವೋದಯ ಸ್ವಸಹಾಯ ತಂಡದ ಮಹಿಳ ಸದಸ್ಯರಿಗೆ ಸಮವಸ್ತ್ರ ವಿತರಣೆ

Suddi Udaya

ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯ ವೃತ: ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿ

Suddi Udaya
error: Content is protected !!