ಬಂಟ್ವಾಳದಲ್ಲಿ ಸಮರ ಸೌಗಂಧಿಕೆ ತಾಳಮದ್ದಳೆ

Suddi Udaya

ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯಲ್ಲಿ 41ನೇ ಕಾರ್ಯಕ್ರಮವಾಗಿ ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಸಮರಸೌಗಂಧಿಕೆ ತಾಳಮದ್ದಳೆ ಜರಗಿತು.

ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ನಿತೇಶ್ ಕುಮಾರ್ ವೈ, ಹಿಮ್ಮೆಳದಲ್ಲಿ ಮುರಳಿಧರ ಆಚಾರ್ಯ ನೇರೆಂಕಿ, ವಿನೋದ್ ಬಂಟ್ವಾಳ ಅರ್ಥಧಾರಿಗಳಾಗಿ ಶ್ರೀಧರ ಎಸ್ಪಿ ಸುರತ್ಕಲ್ (ಭೀಮ) ಹರೀಶ ಆಚಾರ್ಯ ಬಾರ್ಯ( ವಜ್ರಕಾಯ ಭೀಮ ) ಪಾತಾಳ ಅಂಬಾ ಪ್ರಸಾದ್ (ದ್ರೌಪದಿ ) ದಿವಾಕರ ಆಚಾರ್ಯ ಗೇರುಕಟ್ಟೆ (ಹನುಮಂತ ) ಶ್ರೀಮತಿ ಗೀತಾ ಕುದ್ದಣ್ಣಾಯ ( ಕುಬೇರ) ಭಾಗವಹಿಸಿದ್ದರು.


ಕಲಾಪೋಷಕ ಯನ್.ಉಮೇಶ ಶೆಣೈ ಉಪ್ಪಿನಂಗಡಿ ಕಾರ್ಯಕ್ರಮಕ್ಕೆ ಸಹಕರಿಸಿದರು. ಶ್ರಾವಣ ಮಾಸ ತಾಳಮದ್ದಳೆ ಸಮಿತಿಯ ನಾಗೇಂದ್ರ ಪೈ ಬಂಟ್ವಾಳ ಸ್ವಾಗತಿಸಿ ವಂದಿಸಿದರು.

Leave a Comment

error: Content is protected !!