31.1 C
ಪುತ್ತೂರು, ಬೆಳ್ತಂಗಡಿ
November 24, 2024
ತಾಲೂಕು ಸುದ್ದಿಪ್ರತಿಭಟನೆ

ಬಾಂಗ್ಲಾ ಹಿಂದು ಗಳಿಗಾಗಿರುವ ದೌರ್ಜನ್ಯದ ವಿರುದ್ಧ ಹಿಂದೂ ಹಿತ ರಕ್ಷಣಾ ಸಮಿತಿಯಿಂದ ಮಾನವ ಸರಪಳಿ ಮೂಲಕ ಪ್ರತಿಭಟನೆ

ಬೆಳ್ತಂಗಡಿ: ಬಾಂಗ್ಲಾ ದೇಶದಲ್ಲಿರುವ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ, ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿ, ಜನ ಜಾಗೃತಿಗೋಸ್ಕರ ಹಿಂದೂ ಹಿತರಕ್ಷಣಾ ಸಮಿತಿ ಬೆಳ್ತಂಗಡಿ ತಾಲೂಕು, ಇದರ ವತಿಯಿಂದ ಮಾನವ ಸರಪಳಿಯ ಮೂಲಕ ಪ್ರತಿಭಟನೆಯು ಆ.,12 ರಂದು ಬೆಳ್ತಂಗಡಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಮಾತನಾಡಿ ಜಗತ್ತಿನ ಏಕೈಕ ಹಿಂದು ರಾಷ್ಟ್ರವಾಗಿದ್ದ ಭಾರತ,ಯಾವುದೋ ಕಾರಣಕ್ಕೆ ಜಾತ್ಯಾತೀತ ರಾಷ್ಟ್ರವಾಗಿದೆ.ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹತ್ಯೆ,ಅತ್ಯಾಚಾರ, ಹಿಂಸೆ ಹಿಂದುಗಳಿಗೆ ನೋವು ತಂದಿದ್ದು ಹಿಂದೂ ಸಮಾಜ ಈ ಘಟನೆಯನ್ನು ಖಂಡಿಸುತ್ತದೆ. ವಿಶ್ವ ಸಂಸ್ಥೆ ಹಾಗೂ ಈ ದೇಶದ ಪ್ರಧಾನಿಯವರು ಹಿಂದೂಗಳ ರಕ್ಷಣೆಗೆ ಧಾವಿಸಬೇಕು ಎಂದರು.

ಬಾಂಗ್ಲಾದೇಶ ಮತ್ತು ಪಾಕಿಸ್ಥಾನದ ಹಿಂದೂಗಳ ಪರಿಸ್ಥಿತಿ ಯಾವ ಮಟ್ಟದಲ್ಲಿದೆಯೆಂದು ಜಗತ್ತಿಗೆ ಗೊತ್ತಾಗಿದೆ.ಈ ದೇಶದ ನಪುಂಸಕ ಮತ್ತು ಬುದ್ದಿಜೀವಿ ಹಿಂದೂಗಳು ಇನ್ನೂ ಎಚ್ಚರವಾಗದಿದ್ದರೆ ಬಾಂಗ್ಲಾದೇಶದ ಪರಿಸ್ಥಿತಿ ನಿಮಗೂ ಬರಬಹುದು.ಹಿಂದೂಗಳ ಪರ ನಿಂತು ಒಕ್ಕೊರಲಿನಿಂದ ಬಾಂಗ್ಲಾದೇಶದ ಘಟನೆಯನ್ನು ಖಂಡಿಸಬೇಕು ಎಂದರು.

ಅತೀ ಹೆಚ್ಚು ಮುಸ್ಲಿಮರಿರುವ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ದಾಳಿ ಮಾಡಿದಾಗ ಈ ದೇಶದ ವಿಪಕ್ಷ ನಾಯಕ ರಾಹಲ್ ಗಾಂಧಿಯವರಿಗೆ ಕಣ್ಣೀರು ಬರುತ್ತೆ,ಹೇಳಿಕೆ ಕೂಡ ನೀಡುತ್ತೀರಿ.ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲೆ ಹಿಂಸೆ,ಹತ್ಯೆಯಾದಗಾ ನಿಮಗೆ ನೋವಾಗುವುದಿಲ್ಲ.ನಿಮಗೆ ತಾಕತ್ತಿದ್ದರೆ ಈ ಘಟನೆಯನ್ನು ಖಂಡಿಸಿ ಎಂದು ಆಗ್ರಹಿಸಿದರು.

ಇದು ಹಿಂದೂಗಳಿಗೆ ಕಣ್ಣು ತೆರೆಸುವ ಸಮಯ. ನಾವು ಮೈ ಮರೆತರೆ ನಮ್ಮ‌ ಪರಿಸ್ಥಿತಿ ಬಾಂಗ್ಲಾದೇಶದ ಹಿಂದೂಗಳಿಗಾದ ಆಗೆ ಆಗಬಹುದು ಎಂದರು.

ಹಿಂದೂ ಮುಖಂಡ ನವೀನ್ ನೆರಿಯ ಮಾತನಾಡಿ ಪ್ರಪಂಚದಲ್ಲಿ ಹಿಂದೂಗಳು ಯಾರಿಗೂ ಅನ್ಯಾಯ ಮಾಡಿದ ಇತಿಹಾಸವಿಲ್ಲ.ಬಾಂಗ್ಲಾದಲ್ಲಿ ಅತೀ ಹೆಚ್ಚು ದೌರ್ಜನ್ಯಕ್ಕೆ ಒಳಗಾದವರು ಹಿಂದೂಗಳು.ಕೂಡಲೇ ಭಾರತ ಸರಕಾರ ಮತ್ತು ವಿಶ್ವ ಸಂಸ್ಥೆ ಮಧ್ಯಪ್ರವೇಶಿಸಿ ಬಾಂಗ್ಲಾದೇಶದ ಹಿಂದೂಗಳಿಗೆ ರಕ್ಷಣೆ ನೀಡಬೇಕು ಎಂದರು.

ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್,ಜಯಾನಂದ ಗೌಡ ಪ್ರಜ್ವಲ್,ಲವಿಶ್ವನಾಥ ಹೊಳ್ಳ,ರಕ್ಷಿತ್ ಶೆಟ್ಟಿ ಪದ್ಮುಂಜ,ರವಿ ಕುಮಾರ್ ಬರಮೇಲು,ಉಮೇಶ್ ಕುಲಾಲ್ ಗುರುವಾಯನಕೆರೆ,ಗಣೇಶ್ ಮುಂಡಾಜೆ,ಶರತ್ ಶೆಟ್ಟಿ, ಗಣೇಶ್ ಗೌಡ ನಾವೂರು,ಹಿಂದೂ ಮುಖಂಡರಾದ ನವೀನ್ ನೆರಿಯಾ, ಮೋಹನ್ ಬೆಳ್ತಂಗಡಿ, ಸಂತೋಷ್ ಕುಮಾರ್ ಕಾಪಿನಡ್ಕ,ಸೀತರಾಮ್ ಬೆಳಾಲ್,ಅನಿಲ್ ಕುಮಾರ್ ಯು, ದಿನೇಶ್ ಚಾರ್ಮಾಡಿ,ಕೊರಗಪ್ಪ ನಾಯ್ಕ್ ಧರ್ಮಸ್ಥಳ, ರಮೇಶ್ ಧರ್ಮಸ್ಥಳ, ಸಂತೋಷ್ ಅತ್ತಾಜೆ,ಈಶ್ವರ ಬೈರ,ಪದ್ಮನಾಭ ಅರ್ಕಜೆ,ನಂದ ಕುಮಾರ್ ಹಾಗೂ ಹಿಂದೂ ಮುಖಂಡರು ಮೊದಲಾದವರು ಇದ್ದರು‌.

Related posts

ಕಣಿಯೂರು ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Suddi Udaya

ಮಾ.24: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ 16ನೇ ವರ್ಷದ ಸಾಮೂಹಿಕ ವಿವಾಹ

Suddi Udaya

ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಖ್ಯಾತ ಮೂತ್ರರೋಗ ತಜ್ಞ ಡಾ.‌ಸದಾನಂದ ಪೂಜಾರಿ ಯವರಿಗೆ ಡಾ. ಬಿಸಿ ರಾಯ್ ರಾಜ್ಯ ಪ್ರಶಸ್ತಿ,

Suddi Udaya

ಬೆಳ್ತಂಗಡಿ: ಶ್ರೀ ಗುರುದೇವ ಪ್ರ.ದರ್ಜೆ ಕಾಲೇಜಿನ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ನಾಡಗೀತೆ, ರಾಷ್ಟ್ರಗೀತೆ ಬರವಣಿಗೆಯ ಸ್ಪರ್ಧೆ

Suddi Udaya

ಬೆಳ್ತಂಗಡಿ ಮುಳಿಯದಲ್ಲಿ ‘ಮುಳಿಯ ಚಿನ್ನೋತ್ಸವ’ ವಿಶ್ವ ವಿನೂತನ ಚಿನ್ನಾಭರಣಗಳ ಹಬ್ಬಕ್ಕೆ ಚಾಲನೆ

Suddi Udaya
error: Content is protected !!