ಕನ್ಯಾಡಿ 1 ಸ.ಉ.ಹಿ.ಪ್ರಾ. ಶಾಲೆಯಲ್ಲಿ ಆಟಿಡೊಂಜಿ ದಿನ : ಶಿಕ್ಷಕ ನಾಭಿರಾಜ ಜೈನ್ ರಿಗೆ ಸನ್ಮಾನ

Suddi Udaya

ಕನ್ಯಾಡಿ : ಕನ್ಯಾಡಿ 1 ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಶಾಲೆಯಲ್ಲಿ ಸತತ ಎಂಟು ವರ್ಷಗಳಿಂದ ಸ್ಥಳೀಯವಾಗಿ ಆಚರಿಸುವ ಆಟಿಡೊಂಜಿ ಆಷಾಢ ತಿಂಗಳಲ್ಲಿ ಪ್ರತಿ ವರ್ಷವೂ ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದು ಇಂದಿಗೆ 8 ಸಂವತ್ಸರಗಳನ್ನ ಪೂರೈಸಿ 9ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮವನ್ನು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ನೋಣಯ್ಯ ಗೌಡ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಜಗದೀಶ್ (BIERT ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ) ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮದ ಕುರಿತು ಭಾಷಣ ನೀಡಿದರು.

ಕಾರ್ಯಕ್ರಮಕ್ಕೆ ಗ್ರಾಮಸ್ಥರಾದ ನಾಭಿರಾಜ ಜೈನ್ ಸ್ಥಳೀಯವಾಗಿ ಸೇವಾ ಕೈಂಕರ್ಯ ಹಾಗೂ ಶಾಲೆಯಲ್ಲಿ ಹಲವಾರು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದಕ್ಕಾಗಿ ಮೆಚ್ಚಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಮುನಿರಾಜ್ ಅಜ್ರಿ ಆಗಮಿಸಿದ್ದರು. ಪಂಚಾಯಿತ್ ಸದಸ್ಯರಾಗಿರುವ ಪ್ರವೀಣ್ ವಿ ಜಿ , ಶಶಿಕಲಾ ಜೈನ್ ಮತ್ತು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿರುವ ಜಯ ಶೆಟ್ಟಿ ಉಪಸ್ಥಿತರಿದ್ದರು.

ಪ್ರಧಾನ ಗುರುಗಳಾಗಿರುವ ಹನುಮಂತರಾಯ ಮತ್ತು ಶಿಕ್ಷಕ ಬಳಗ ಕಾರ್ಯಕ್ರಮ ನಿರ್ವಹಿಸಿದರು . ಶಾಲೆಯ ಪ್ರಮುಖ ಯೋಜನೆಯಾದ ವಿದ್ಯಾನಿಧಿ ಯೋಜನೆಗೆ ಒಂದನೇ ತರಗತಿಗೆ ಹೊಸದಾಗಿ ದಾಖಲಾದ ಮಕ್ಕಳಿಗೆ ತಲಾ ಒಂದು ಸಾವಿರ ರೂಪಾಯಿ ಬಾಂಡನ್ನು ಮಕ್ಕಳಿಗೆ ಹಸ್ತಾಂತರಿಸಲಾಯಿತು. ವಿದ್ಯಾನಿಧಿ ಯೋಜನೆಗೆ ಬೇಕಾಗುವ ಮೊತ್ತವನ್ನು ಕನ್ಯಾಡಿಯ ನಾಭಿರಾಜ್ ಜೈನ್ ಇವರು ನೀಡಿ ಸಹಕರಿಸಿದರು. ವಿದ್ಯಾನಿಧಿ ಯೋಜನೆಗೆ ಪೂರಕವೆಂಬಂತೆ ಶಾಲೆಯ ಅಕೌಂಟ್ನ ಸ್ಕ್ಯಾನರ್ ಬಿಡುಗಡೆಯನ್ನು ಮಾಡಲಾಯಿತು. ಹಾಗೂ ವೇದಿಕೆಯಲ್ಲಿರುವ ಗಣ್ಯರು ವಿದ್ಯಾನಿಧಿ ಯೋಜನೆಗೆ ದೇಣಿಗೆಯನ್ನು ನೀಡಿದರು.

ಕಾರ್ಯಕ್ರಮವನ್ನು ವಿಕಾಸ್ ಕುಮಾರ್ ನಡೆಸಿಕೊಟ್ಟರು. ಸಹಶಿಕ್ಷಕಿ ಶ್ರೀದೇವಿ ಕತ್ತಿ ಸ್ವಾಗತಿಸಿದರು. ಶಿಕ್ಷಕಿ ಪ್ರಮೀಳಾ ಮತ್ತು ಪವಿತ್ರ ಇವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಹರಿತ ಅತಿಥಿ ಪರಿಚಯ ಮಾಡಿದರು. ಶ್ರೀಮತಿ ನಿಶ್ಮಿತ ವಂದಿಸಿದರು.

ಪಾಲಕ ಪೋಷಕರು ಆಟಿಡೊಂಜಿಯ ದಿನ ವಿವಿಧ ಖಾದ್ಯಗಳನ್ನು ಶಾಲೆಗೆ ತಂದು ಉಣಬಡಿಸಿದರು. ಪಾಲಕರಿಗೆ ವಿವಿಧ ರೀತಿಯ ಆಟಗಳನ್ನು ಆಡಿಸಿ ಗೆದ್ದವರಿಗೆ ಬಹುಮಾನ ನೀಡಲಾಯಿತು.

Leave a Comment

error: Content is protected !!