29.6 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ ವಲಯದ ಅನಾರು ಕಾರ್ಯಕ್ಷೇತ್ರದ ದುರ್ಗ ಶ್ರೀ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ

ಕೊಕ್ಕಡ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಕೊಕ್ಕಡ ವಲಯದ ಅನಾರು ಕಾರ್ಯಕ್ಷೇತ್ರದ ದುರ್ಗ ಶ್ರೀ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ಅನಾರು ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಳಿಯ ಬೀಡಿನ ಹಿರಿಯರಾದ ದೇವಪಾಲ ಅಜ್ರಿಯವರು ನೆರವೇರಿಸಿ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರು ಪ್ರಬುದ್ಧತೆಯನ್ನು ಹೊಂದಿರುತ್ತಾರೆ ಎಂದರು. ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿಯವರಾದ ಸುರೇಂದ್ರರವರು ಹಿನ್ನೆಲೆಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷರಾದ ಆನಂದ ರವರು ಒಕ್ಕೂಟದ ಉಪಾಧ್ಯಕ್ಷರಾದ ವೇದಾವತಿ ಯವರು ಮೇಲ್ವಿಚಾರಕರಾದ ಭಾಗೀರಥಿ ಮೇಡಮ್ ರವರು ಸೇವಾ ಪ್ರತಿನಿಧಿಗಳಾದ ಚೈತ್ರ ಮತ್ತು ಸುಮಿತ್ರರವರು ಉಪಸ್ಥಿತರಿದ್ದರು. ಜ್ಞಾನವಿಕಾಸಮನ್ವಯ ಅಧಿಕಾರಿಯವರಾದ ಮಧುರ ವಸಂತ್ ರವರು ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಂಯೋಜಕ ಪ್ರೇಮಾವತಿ ಯವರು ಸ್ವಾಗತಿಸಿ ಸದಸ್ಯರಾದ ರೇವತಿಯವರು ಧನ್ಯವಾದ ನೀಡಿದರು,

Related posts

ನಾಗೇಶ್ ಕುಮಾರ್ ಅಭಿಮಾನಿ ಬಳಗದಿಂದ ಸೌಜನ್ಯ ಮನೆಗೆ ಭೇಟಿ

Suddi Udaya

ದಂತ ವೈದ್ಯಕೀಯ ಪರೀಕ್ಷೆ : ಗೇರುಕಟ್ಟೆಯ ಡಾ|ಅನುದೀಕ್ಷಾರಿಂದ ಅತ್ಯುತ್ತಮ ಸಾಧನೆ

Suddi Udaya

ಕುತ್ಲೂರು ಅಂಗನವಾಡಿ ಕೇಂದ್ರಕ್ಕೆ ಟಿ.ವಿ. ಮತ್ತು ಇಂಟರ್ನೆಟ್ ಕೊಡುಗೆ

Suddi Udaya

ಮೊಗ್ರು: ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಮತ್ತು ಶ್ರೀ ರಾಮ ಶಿಶು ಮಂದಿರ ಅಲೆಕ್ಕಿ- ಮುಗೇರಡ್ಕ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಶ್ರೀ ಬಾಲಕೃಷ್ಣ ತೊಟ್ಟಿಲ ಸಂಭ್ರಮ

Suddi Udaya

ತಣ್ಣೀರುಪಂಥ ವಲಯದ ಕರಾಯ ಕಲ್ಲೇರಿ, ಕುಪ್ಪೆಟ್ಟಿ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ

Suddi Udaya

ನಿವೃತ್ತ ಸೇನಾನಿ ಅನೀಶ್ ಡಿ.ಎಲ್‌ ರವರಿಗೆ ಬೆಳ್ತಂಗಡಿಯಲ್ಲಿ ಅದ್ದೂರಿಯ ಸ್ವಾಗತ

Suddi Udaya
error: Content is protected !!