ಗುರುವಾಯನಕೆರೆ ಶ್ರೀ ವೇದವ್ಯಾಸ ಶಿಶುಮಂದಿರದ ಮಾತೃ ಮಂಡಳಿ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವು ಆ.10 ರಂದು ನಮ್ಮ ಮನೆ ಹವ್ಯಕ ಭವನದ ವಠಾರದಲ್ಲಿ ನಡೆಯಿತು.
ದೀಪ ಪ್ರಜ್ವಲನೆಯ ಮೂಲಕ ನಡೆದ ಕಾರ್ಯಕ್ರಮದಲ್ಲಿ, ಶಿಶು ಮಂದಿರ ಮಂದಿರದ ಮಾಜಿ ಕಾರ್ಯದರ್ಶಿ, ಶ್ರೀಮತಿ ಸುಧಾಮಣಿಯವರು ಆಟಿ ತಿಂಗಳ ವಿಶೇಷತೆ ಮತ್ತು ಆಟಿ ತಿಂಗಳಲ್ಲಿ ಮಾಡುವ ತಿಂಡಿ ತಿನಿಸುಗಳ ಮಹತ್ವದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಶು ಮಂದಿರದ ಅಧ್ಯಕ್ಷ ಇಂದುಮತಿಯವರು ಕಳೆದ ನಾಲ್ಕು ವರ್ಷದಿಂದ ನಡೆಸುತ್ತಿರುವ ಆಟಿಡೊಂಜಿ ದಿನ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ, ಮಾತೆಯರಿಗೆ ಮತ್ತು ಮಕ್ಕಳಿಗೆ ಹಲವಾರು ಮನರಂಜಾನ ಆಟಗಳನ್ನು ನಡೆಸಿಕೊಡಲಾಯಿತು.
ವೇದಿಕೆಯಲ್ಲಿ ಶಿಶುಮಂದಿರದ ಮಾತೃ ಮಂಡಳಿಯ ಅಧ್ಯಕ್ಷ ಸುಪ್ರಿಯಾ ಶೆಟ್ಟಿ ಉಪಸ್ಥಿತರಿದ್ದು, ಮಾತೆಯರು ಮಾಡಿಕೊಂಡು ಬಂದ ಸುಮಾರು 32 ವಿಧದ ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳ ವಿವರವನ್ನು ಓದಿದರು. ಶಿಶುಮಂದಿರದ ಕೋಶಾಧಿಕಾರಿ ಪ್ರಿಯದರ್ಶಿನಿ ಸುವರ್ಣ, ಸೋಮಶೇಖರ್ ದೇವಸ್ಯ, ರಾಮಚಂದ್ರ ಶೆಟ್ಟಿ, ಬಾಲಕೃಷ್ಣ, ಶೈಲಜಾ, ಮಾತಾಜಿಗಳಾದ ಅಶ್ವಿನಿ ಮತ್ತು ಜಯಶ್ರೀ, ಪ್ರಕಾಶ್ ಕಾಮತ್ ಸಹಕರಿಸಿದರು.
ಮಾತೃ ಮಂಡಳಿಯ ಕಾರ್ಯದರ್ಶಿ ಸ್ವಾತಿ ಕಾರ್ಯಕ್ರಮ ನಿರೂಪಿಸಿ, ಮಾತೃ ಮಂಡಳಿಯ ಜೊತೆ ಕಾರ್ಯದರ್ಶಿ ಸಂಧ್ಯಾ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಬಾಲಗೋಕೂಲ ಮಕ್ಕಳು ಮತ್ತು ಅವರ ಪೋಷಕರು ಹಾಜರಿದ್ದರು. ಇಂದುಮತಿ ಧನ್ಯವಾದವಿತ್ತರು.