ಬೆಳ್ತಂಗಡಿ:ಸುಬ್ರಮಣ್ಯ ದೇವಾಲಯದ ಪರಿಸರದಲ್ಲಿ ತಿರುಗಾಡುತ್ತಿದ್ದ ಒಂಟಿ ಮಹಿಳೆಯನ್ನು ಗುರುತಿಸಿದ ಸಾರ್ವಜನಿಕರು, ಸ್ಥಳೀಯ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ರವಿ ಕಕ್ಕೆಪದವು ಇವರಿಗೆ ದೂರವಾಣಿ ಮುಖಾಂತರ ಮಾಹಿತಿಯನ್ನು ನೀಡಿದ್ದು,ಸ್ಥಳಕ್ಕೆ ಆಗಮಿಸಿದ ಅವರು ವಿಷಯದ ಗಂಭೀರತೆಯನ್ನು ಅರಿತು ಸುಬ್ರಮಣ್ಯ ಠಾಣೆಗೆ ತೆರಳಿ ಠಾಣಾಧಿಕಾರಿಗಳಿಗೆ ತಿಳಿಸಿರುತ್ತಾರೆ.
ಮಹಿಳಾ ಪೇದೆ, ಪುನೀತ ಇವರನ್ನು ಸ್ಥಳಕ್ಕೆ ಕಳಿಹಿಸಿಕೊಟ್ಟು ಠಾಣಾಧಿಕಾರಿಗಳು ಸಂಬಂಧ ಪಟ್ಟ ಮಹಿಳೆಯನ್ನು ವಿಚಾರಿಸಿ,ಈಕೆ ಮೈಸೂರು ಪಿರಿಯಾಪಟ್ಟಣ ತಾಲ್ಲೂಕಿನ ಗ್ರಾಮದಲ್ಲಿ ವಾಸ್ತವ್ಯ ಇರುವ ಮಹಿಳೆಯೆಂದು ಗುರುತಿಸಿ, ಮಹಿಳಾಪೇದೆ ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಕರೆ ಮಾಡಿ ಈಕೆಯ ಮಾಹಿತಿಯನ್ನು ಕಲೆ ಹಾಕಿದಾಗ ಈಕೆ ಸುಮಾರು 15 ವರ್ಷಗಳಿಂದ ತನ್ನೂರನ್ನು ತೊರೆದು ಅನೇಕ ಕಡೆಗಳಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ.ಈಕೆಯ ಸಂಬಂಧಿಕರು ಸ್ಥಳೀಯ ಠಾಣಾ ವ್ಯಾಪ್ತಿಯಲ್ಲಿ ವಾಸ್ತವ್ಯ ಇರುವುದನ್ನು ಪತ್ತೆ ಹಚ್ಚಿದ್ದು ಈಕೆಯನ್ನು ಸುಬ್ರಹ್ಮಣ್ಯದಿಂದ ತನ್ನೂರಿಗೆ ಬಸ್ಸನ್ನು ಏರಿಸಿ ಕಳುಹಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ರವಿ ಕಕ್ಕೆಪದವು, ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿಗಳು ಮತ್ತು ಮಹಿಳಾ ಸಿಬ್ಬಂದಿ, ಸುಬ್ರಮಣ್ಯ ದೇವಳದ ಭದ್ರತಾ ಸಿಬ್ಬಂದಿ ರವೀಶ್ ಕೋಡ್ತಗುಳಿ, ಪುಟ್ಟಣ್ಣ ವಾಲಗದಕೇರಿ,ಆಪತ್ಭಾಂದವ ದೀಪಕ್ ಯುವ ತೇಜಸ್ವು ಸುಬ್ರಹ್ಮಣ್ಯ ಇವರು ಸಹಕರಿಸಿದ್ದಾರೆ.