ಅಳದಂಗಡಿ: ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಆ.13 ರಂದು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸರಸ್ವತಿ ರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ಇಲಾಖೆ ನಿರ್ದೇಶಕ ಜೋಸೆಫ್ ರವರು ಗ್ರಾಮ ಸಭೆಯನ್ನು ಉತ್ತಮವಾಗಿ ಮುನ್ನಡೆಸಿದರು.
ಬೆಳೆ ವಿಮೆ ಸಮೀಕ್ಷೆಯಲ್ಲಿ ಒಬ್ಬ ವ್ಯಕ್ತಿಯ ಜಾಗವು ಬೇರೆಯವರ ಹೆಸರಲ್ಲಿ ತೋರಿಸುತ್ತಿದೆ. ಸರಿಯಾದ ಮಾಹಿತಿ ಅದರಲ್ಲಿ ತೋರಿಸುತ್ತಿಲ್ಲ ಎಂದು ಸದಾನಂದ ಪೂಜಾರಿ ಉಂಗಿಲಬೈಲು ಕೃಷಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು.
ಪಿಲ್ಯ ಬೀಡು ಎಂಬಲ್ಲಿ ವಿದ್ಯುತ್ ಕಂಬವು ಸಾರ್ವಜನಿಕ ರಸ್ತೆಯಲ್ಲಿದ್ದು, ದೊಡ್ಡ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರೋರ್ವರು ಮೆಸ್ಕಾಂ ಇಲಾಖೆಗೆ ಮನವಿ ಮಾಡಿಕೊಂಡರು.
ಸಭೆಯಲ್ಲಿ ಉಪಾಧ್ಯಕ್ಷೆ ಶಾಲಿನಿ, ಸದಸ್ಯರಾದ ಪ್ರಶಾಂತ್ ವೇಗಸ್, ಅಬ್ದುಲ್ ಖಾದರ್, ಹರೀಶ್ ಆಚಾರ್ಯ, ಕೃಷ್ಣಪ್ಪ ಪೂಜಾರಿ, ರವಿ ಪೂಜಾರಿ, ಪ್ರವೀಣ, ರೂಪಶ್ರೀ, ಗೀತಾ, ಸೌಮ್ಯ, ಕು. ಲಲಿತಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಲೆಕ್ಕ ಸಹಾಯಕ ಪೂವಪ್ಪ ಮಳೆಕುಡಿಯ ಸ್ವಾಗತಿಸಿದರು. ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಪೂರ್ಣಿಮ ಜೆ. ಅನುಪಾಲನ ವರದಿ, ಜಮಾಖರ್ಚುಗಳ ವಿವರವನ್ನು ಮಂಡಿಸಿ, ಧನ್ಯವಾದವಿತ್ತರು.