September 6, 2026
ತಾಲೂಕು ಸುದ್ದಿ

ಅಮೃತ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹರ್ ಘರ್ ತಿರಂಗಾ ಅಭಿಯಾನ: ಬೆಳ್ತಂಗಡಿಯಲ್ಲಿ ಕಾಲ್ನಡಿಗೆ ಜಾಥಾ

ಬೆಳ್ತಂಗಡಿ: ಸರ್ಕಾರದ ಆದೇಶದಂತೆ , ಅಮೃತ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹರ್ ಘರ್ ತಿರಂಗಾ ಅಭಿಯಾನದಡಿ ಬೆಳ್ತಂಗಡಿ ಸಂತ ತೆರೇಸಾ ಪ್ರೌಢ ಶಾಲೆಯಿಂದ ಬೆಳ್ತಂಗಡಿ ತಾಲೂಕು ಕಛೇರಿವರೆಗೆ ಕಾಲ್ನಡಿಗೆ ಜಾಥಾಕ್ಕೆ ತಾಲೂಕಿನ ದಂಡಾಧಿಕಾರಿಯವರಾದ ಪೃಥ್ವಿ ಸಾನಿಕಮ್ ಚಾಲನೆ ನೀಡಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಿಯವರಾದ ಭವಾನಿಶಂಕರ್ ಅವರು ಮಾತನಾಡಿ ಸರ್ಕಾರದ ಆದೇಶದಂತೆ ಹರ್ ಘರ್ ತಿರಂಗಾ ಅಭಿಯಾನದಡಿ ರಾಷ್ಟ್ರ ಧ್ವಜಾರೋಹಣವನ್ನು ಪ್ರತಿ ಮನೆ ಮನೆಯಲ್ಲಿ, ಕಚೇರಿಗಳಲ್ಲಿ ಸಂಘ ಸಂಸ್ಥೆಗಳಲ್ಲಿ ಮಾಡುವುದರ ಮೂಲಕ ದೇಶಕ್ಕಾಗಿ ಮಡಿದ ಸ್ವಾತಂತ್ರ್ಯ ಹೋರಾಟಗಾರರನ್ನು, ಹುತಾತ್ಮರನ್ನು ನೆನಪಿಸಿ ಗೌರವ ಸಲ್ಲಿಸಲಾಗುವುದು. ಆದ್ದರಿಂದ ನಾಳೆ ಆಗಷ್ಟ್ 15ರಂದು ತಮ್ಮ ಮನೆಗಳಲ್ಲಿ,ಕಚೇರಿಗಳಲ್ಲಿ ಧ್ವಜಾರೋಹಣ ಮಾಡಿ ದೇಶಕ್ಕಾಗಿ ಪ್ರಾಣತೆತ್ತವರನ್ನು ಸ್ಮರಿಸಿಕೊಂಡು ಗೌರವ ಸಲ್ಲಿಸೋಣ ಎಂದರು.

ಜಾಥಾ ನಡೆದ ಸಂದರ್ಭ ವಿವಿಧ ಇಲಾಖೆಯ ಅಧಿಕಾರಿಗಳು,ಶಾಲಾ ಮಕ್ಕಳು,ಶಾಲಾ ಶಿಕ್ಷಕರು,ತಾಲೂಕು ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ನೆರಿಯ: ಗಂಡಿಬಾಗಿಲು ನಿವಾಸಿ ಗಂಗಯ್ಯ ಗೌಡ ನಿಧನ

Suddi Udaya

ಉಜಿರೆ: ಸರಳ ಸಂಸ್ಕೃತ ವ್ಯಾಕರಣ ಪುಸ್ತಕ ಬಿಡುಗಡೆ

Suddi Udaya

ಬಂಗಾಡಿ ಸರಕಾರಿ ಪ್ರೌಢಶಾಲೆಗೆ ಶೇ.98 ಫಲಿತಾಂಶ

Suddi Udaya

ಇಂದಬೆಟ್ಟು: ದಿ| ತುಷಾರ್ ರಿಗೆ ಹಿತೈಷಿಗಳಿಂದ ನುಡಿನಮನ

Suddi Udaya

ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರ : ಆಕಾಶಕಾಯಗಳ ವೀಕ್ಷಣೆ

Suddi Udaya

ವೇಣೂರು ಟೈಲರ್ ಅಸೋಸಿಯೇಷನ್ ನ ಸಮಿತಿಯ ಪದಾಧಿಕಾರಿಗಳು ಹಾಗೂ ಊರವರ ಸಹಕಾರದೊಂದಿಗೆ ಧನಸಹಾಯ ಹಸ್ತಾಂತರ

Suddi Udaya
error: Content is protected !!