24.4 C
ಪುತ್ತೂರು, ಬೆಳ್ತಂಗಡಿ
May 20, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿ

ಅರುಣಾಚಲ ಪ್ರದೇಶದಲ್ಲಿ ಐಟಿಬಿಪಿ ಸಬ್ ಇನ್ಸ್‌ಪೆಕ್ಟರ್ ಆಗಿ ಕಡಿರುದ್ಯಾವರ ಹರ್ಷಿತ್ ನೇಮಕ

ಕಡಿರುದ್ಯಾವರ: ಇಲ್ಲಿಯ ಹೊಸಮನೆ ಹರ್ಷಿತ್ ರವರು ಐಟಿಬಿಪಿ ಸಬ್ ಇನ್ಸ್‌ಪೆಕ್ಟರ್ ಆಗಿ ಅರುಣಾಚಲ ಪ್ರದೇಶದಲ್ಲಿ ಆ.20 ರಂದು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.


ಹರ್ಷಿತ್‌ರವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಡಿರುದ್ಯಾವರ ಗ್ರಾಮದ ಕೊಡಿಯಾಲ್‌ಬೈಲ್ ಶಾಲೆಯಲ್ಲಿ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ಎಸ್‌ಡಿಎಂ (ಕನ್ನಡ) ಉಜಿರೆಯಲ್ಲಿ, ಪಿ.ಯು ಶಿಕ್ಷಣವನ್ನು ಎಸ್.ಡಿ.ಎಂ ಉಜಿರೆಯಲ್ಲಿ, ಉಜಿರೆ ಎಸ್‌ಡಿಎಂ ನಲ್ಲಿ ಇಂಜಿನಿಯರಿಂಗ್ ಮಾಡಿ 2022 ರಲ್ಲಿ ನಡೆದ ವಿವಿಧ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ 2024 ಜನವರಿಯಲ್ಲಿ 6 ತಿಂಗಳ ತರಬೇತಿಗಾಗಿ ರಾಜಸ್ಥಾನದ ಅಲ್ವರ್‌ಗೆ ತೆರಳಿದರು. ಇದೀಗ ತರಬೇತಿ ಮುಗಿಸಿ ಐಟಿಬಿಪಿ ಸಬ್ ಇನ್ಸ್‌ಪೆಕ್ಟರ್ ಆಗಿ ಅರುಣಾಚಲ ಪ್ರದೇಶದಲ್ಲಿ ಆ.20 ರಂದು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಇವರು ಕಡಿರುದ್ಯಾವರ ಗ್ರಾಮದ ಹೊಸಮನೆ ರಾಮಚಂದ್ರ ಗೌಡ ಮತ್ತು ಜಯಂತಿ ದಂಪತಿಯ ಪುತ್ರ.

Related posts

ಮೈರೋಳ್ತಡ್ಕ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಮರದ ಕೊಂಬೆ ತೆರವು ಹಾಗೂ ಗಿಡ ಗಂಟಿಗಳ ತೆರವು ಕಾರ್ಯ

Suddi Udaya

ಲಾಯಿಲ ಬಲಮುರಿ ವಿಘ್ನೇಶ್ವರನ ಸನ್ನಿಧಿಯಲ್ಲಿ ಶಾಸಕ ಹರೀಶ್ ಪೂಂಜಾರ ನೇತೃತ್ವದಲ್ಲಿ 108 ಕಾಯಿ ಗಣಹೋಮ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಞವಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನ ಉದ್ಘಾಟನೆ

Suddi Udaya

ಮಾನಸಿಕ ಹಾಗೂ ಬುದ್ಧಿಮಾಂದ್ಯ ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆ ಶಿಬಿರ

Suddi Udaya

ಸೌತಡ್ಕದಲ್ಲಿ ಕೆಎಂಎಫ್ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಶುಭಾರಂಭ

Suddi Udaya

ಕನ್ಯಾಡಿ ಶ್ರೀರಾಮ ಕ್ಷೇತ್ರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ : ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ರವರಿಂದ ಆಶೀರ್ವಾದ ಪಡೆದ ಡಿಕೆಶಿ

Suddi Udaya
error: Content is protected !!