25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮುಂಡಾಜೆ : ಕೂಳೂರು ನಿವಾಸಿ ಪುತ್ತಾಕ‌ ನಿಧನ

ಮುಂಡಾಜೆ ಗ್ರಾಮದ ಕೂಳೂರು‌ ನಿವಾಸಿ, ಹಿರಿಯ ಮೇಸ್ತ್ರಿಗಳು ಹಾಗೂ ಧರ್ಮಬಂಧುವಾಗಿದ್ದ ಪುತ್ತಾಕ‌‌ ಕೂಳೂರು (78ವ.) ಅವರು ಅಲ್ಪ ಕಾಲದ ಅಸೌಖ್ಯದಿಂದ ಆ.12 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಪಾರ್ಶ್ವ ವಾಯು ಪೀಡಿತರಾಗಿದ್ದ ಅವರು ಹಲವು ವರ್ಷಗಳಿಂದ ವಿಶ್ರಾಂತಿಯಲ್ಲೇ ಇದ್ದರಾದರೂ ರವಿವಾರ ಹಠಾತ್ ಹೃದಯ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಅವರು ಕೊನೆಯುಸಿರೆಳೆದರು.

ಮರ್‌ಹೂಮ್ ಕಾಜೂರು ಜಮಲುಲ್ಲೈಲಿ ತಂಙಳ್ ಅವರ ಅನೇಕ ವರ್ಷ ನಿಕಟವರ್ತಿ ಮತ್ತು ಸೇವಕರಾಗಿದ್ದ ಅವರು ಮುಂಡಾಜೆ “ಮಸ್ಲಕ್” ಸಮಿತಿಯ ಸ್ಥಾಪಕಲ್ಲೊರ್ವರು‌ ಹಾಗೂ ಪ್ರಸ್ತುತ ಸಂಚಾಲಕರಾಗಿದ್ದರು. ಕೃಷಿಕರಾಗಿದ್ದ ಅವರು ಕನ್ಯಾಡಿ 2 ಇಲ್ಲಿ ಕೃಷಿ ತೋಟದ ಮೇಲ್ವಿಚಾರಕರಾಗಿ ದೀರ್ಘ ವರ್ಷ ಸೇವೆ ಸಲ್ಲಿಸಿದ್ದರು. ಬದ್ರಿಯಾ ಜುಮ್ಮಾ ಮಸ್ಜಿದ್ ಸೋಮಂತಡ್ಕ ಇದರ ಆಡಳಿತ ಸಮಿತಿಯಲ್ಲೂ ಹಲವು ವರ್ಷ ಸೇವೆ ಸಲ್ಲಿಸಿದ್ದು ಮಸೀದಿಯ ಆರಂಭಿಕ ದಾಖಲೆ ಪತ್ರಗಳು ಸರಿಪಡಿಸುವಲ್ಲಿ ತಮ್ಮ ಸೇವೆ ನೀಡಿದ್ದರು.

ಮೃತರು ಪತ್ನಿ, ಐವರು ಪುತ್ರರು ,‌ ಓರ್ವ ಪುತ್ರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Related posts

ಅಳದಂಗಡಿ ಮೆಸ್ಕಾಂ ಇಲಾಖೆಯಲ್ಲಿ ಆಯುಧ ಪೂಜೆ

Suddi Udaya

ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿ ಕುಸಿದು ಬಿದ್ದು ವ್ಯಕ್ತಿ ಸಾವು

Suddi Udaya

ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Suddi Udaya

ಧರ್ಮಸ್ಥಳ : ನಡುಗುಡ್ಡೆಕುಡುಮ ಶ್ರೀ ಟೈಗರ್ಸ್ ವತಿಯಿಂದ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯಾರ್ಥ ಹಾಗೂ ವಿದ್ಯಾನಿಧಿ ವಿತರಣೆ

Suddi Udaya

ಬಿಜೆಪಿಯಿಂದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ 6 ವರ್ಷಗಳ ಕಾಲ ಉಚ್ಚಾಟನೆ

Suddi Udaya

ಉಜಿರೆ ಪ್ರಗತಿ ಮಹಿಳಾ ಮಂಡಲದಿಂದ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ

Suddi Udaya
error: Content is protected !!