25.4 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಂಘ-ಸಂಸ್ಥೆಗಳುಸಾಧಕರು

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ವ್ಯವಹಾರದಲ್ಲಿ ಸಾಧಿಸಿದ ಸರ್ವತೋಮುಖ ಪ್ರಗತಿಯನ್ನು ಗುರುತಿಸಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನಾ ಪ್ರಶಸ್ತಿ

ಬೆಳ್ತಂಗಡಿ:ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ೨೦೨೩-೨೪ನೇ ಸಾಲಿನ ವ್ಯವಹಾರದಲ್ಲಿ ಸಾಧಿಸಿದ ಸರ್ವತೋಮುಖ ಪ್ರಗತಿಯನ್ನು ಗುರುತಿಸಿ “ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನಾ ಪ್ರಶಸ್ತಿ ೨೦೨೩-೨೪” ಪ್ರಶಸ್ತಿಯನ್ನು ಆಗಷ್ಟ್ ೧೪ ರಂದು ನಡೆದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ೨೦೨೩-೨೪ನೇ ಸಾಲಿನ ವಾರ್ಷಿಕ ಸಭೆಯಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಇವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ೨೦೧೨ ರಲ್ಲಿ ಪ್ರಾರಂಭವಾಗಿ ದಶಮಾನೋತ್ಸವಕ್ಕೆ ನಗರದ ಪಡೀಲ್‌ನಲ್ಲಿ ಸ್ವಂತ ಪ್ರಧಾನ ಕಛೇರಿಯನ್ನು ಹೊಂದಿರುತ್ತದೆ.

ಪ್ರಸ್ತುತ ದ.ಕ ಹಾಗೂ ಉಡುಪಿ ಜಿಲ್ಲೆಯಾದ್ಯಂತ ೩೩ ಶಾಖೆಗಳನ್ನು ಹೊಂದಿರುವ ಸಂಘವು, ೨೦೨೩-೨೪ನೇ ಸಾಲಿನಲ್ಲಿ ದುಡಿಯುವ ಬಂಡವಾಳ ೨೩,೬೫೫.೦೨ ಲಕ್ಷ ಹೊಂದಿದ್ದು, ರೂ. ೩.೩೩ ಕೋಟಿಗೂ ಮಿಕ್ಕಿ ಲಾಭ ಗಳಿಸಿರುತ್ತದೆ.

ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಶ್ರೀ ಭಾಸ್ಕರ್ ಎಸ್. ಕೋಟ್ಯಾನ್, ಶ್ರೀ ಟಿ.ಜಿ. ರಾಜಾರಾಮ ಭಟ್, ಶ್ರೀ ಎಂ. ವಾದಿರಾಜ್ ಶೆಟ್ಟಿ, ಶ್ರೀ ಎಸ್.ರಾಜು ಪೂಜಾರಿ, , ಶ್ರೀ ಶಶಿಕುಮಾರ್ ರೈ ಬಿ.,ಶ್ರೀ ಎಸ್.ಬಿ.ಜಯರಾಮ ರೈ, ಡಾ. ಐಕಳಬಾವ ದೇವಿ ಪ್ರಸಾದ್ ಶೆಟ್ಟಿ, ಶ್ರೀ ಕೆ.ಹರಿಶ್ಚಂದ್ರ, ಶ್ರೀ ಎಂ. ಮಹೇಶ್ ಹೆಗ್ಡೆ, ಶ್ರೀ ಬಿ. ಅಶೋಕ್ ಕುಮಾರ್ ಶೆಟ್ಟಿ, ಶ್ರೀ ಮೋನಪ್ಪ ಶೆಟ್ಟಿ ಎಕ್ಕಾರು, ಶ್ರೀ ಕೆ. ಜೈರಾಜ್ ಬಿ. ರೈ, ಶ್ರೀ ಕುಶಾಲಪ್ಪ ಗೌಡ ಪಿ., ಶ್ರೀ ಎಸ್. ಎನ್. ಮನ್ಮಥ, ಅಪೆಕ್ಸ್ ಬ್ಯಾಂಕ್ ನ ಪ್ರತಿನಿಧಿಯಾದ ಶ್ರೀ ಸದಾಶಿವ ಉಳ್ಳಾಲ್, ವೃತ್ತಿಪರ ನಿರ್ದೇಶಕರಾದ ಶ್ರೀ ರಾಜೇಶ್ ರಾವ್, ದ.ಕ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ಹೆಚ್.ಎನ್, ರಮೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಪ್ರ) ಶ್ರೀ ಗೋಪಾಲಕೃಷ್ಣ ಭಟ್ ಕೆ., ಸಂಘದ ಉಪಾಧ್ಯಕ್ಷರಾದ ಶ್ರೀ ನೇಮಿರಾಜ್ ಪಿ., ಸಲಹೆಗಾರರಾದ ಶ್ರೀ ಅಶೋಕ್ ಕುಮಾರ್ ಮತ್ತಿತ್ತರರು ಉಪಸ್ಥಿತರಿದ್ದರು.

Related posts

ರಾಜ್ಯಮಟ್ಟದ ಕರಾಟೆ ಸ್ಪರ್ಧೆ: ಹೊಸಂಗಡಿಯ ಇಂದಿರಾ ಗಾಂಧಿ ವಸತಿ ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಬಂದಾರು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳಿಂದ ಶ್ರಮದಾನ

Suddi Udaya

ಮಂಗಳೂರು ವಿ. ವಿ. ಅಂತರ್ ಕಾಲೇಜು ಪುರುಷರ ಕ್ರಿಕೆಟ್: ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಸತತ ಮೂರನೇ ಬಾರಿಗೆ ಚಾಂಪಿಯನ್

Suddi Udaya

ಅರಸಿನಮಕ್ಕಿ: ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿಯಲ್ಲಿ 500 ಎಕ್ರೆ ಯಾಂತ್ರಿಕೃತ ಯಂತ್ರಶ್ರೀ ನಾಟಿಗೆ ಚಾಲನೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ. ನಾರಾಯಣ ಪ್ರಭು ರವರಿಗೆ ಶ್ರದ್ಧಾಂಜಲಿ

Suddi Udaya
error: Content is protected !!