ಉಜಿರೆಯ ಎಸ್. ಡಿ.ಎಂ. ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳಿಗೆ ಒಂದು ದಿನದ ಪುನಶ್ಚೇತನ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದ ತರಬೆತುದರರಾಗಿ ಚೆವರು ವಿನೋದ, ಜಿಲ್ಲಾ ಸಹಾಯಕ ಆಯುಕ್ತರು, ಕಾಸರಗೋಡು ಇವರು ಆಗಮಿಸಿದ್ದು ವಿದ್ಯಾರ್ಥಿಗಳಿಗೆ ರೋವರ್ ಮತ್ತು ರೇಂಜರ್ ವಿಭಾಗದ ‘ನಿಪುನ್ ‘ ಪರೀಕ್ಷೆಗೆ ಬೇಕಾದ ವಿವಿಧ ಕೌಶಲ್ಯಗಳನ್ನು ಹಾಗೂ ಪೂರ್ವ ಸಿದ್ಧತಾ ತಯಾರಿಕೆಗಳ ಬಗ್ಗೆ ಸಮಗ್ರ ತರಬೇತಿಯನ್ನೂ ನೀಡುತ್ತಿದ್ದಾರೆ.
ಇದಕ್ಕೂ ಮೊದಲು ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಬಿರವನ್ನು ಉದ್ಘಾಟಸಿ ಮಾತನಾಡಿದ ಕಾಲೇಜಿನ ಪ್ರಚಾರ್ಯರಾದ ಪ್ರಮೋದ್ ಕುಮಾರ್ ಬಿ ಮಾತನಾಡಿ ಸ್ಕೌಟ್ ಎಂಬುದು ಒಂದು ನಿಸ್ವಾರ್ಥ ಸೇವಾ ಸಂಸ್ಥೆಯಾಗಿದ್ದು ಯಾವುದೇ ಫಲಪೇಕ್ಷೆ ಇಲ್ಲದೇ, ಯಾವುದೇ ಪ್ರಚಾರ ಬಯಸದೇ ಸೇವೆಯೇ ಪರಮ ಧರ್ಮ ಎಂಬ ತತ್ವದಡಿ ಕಾರ್ಯ ನಿರ್ವಹಿಸುತ್ತಿರುವುದು ತುಂಬಾ ಶ್ಲಾಘನೀಯ ಎಂದು ನುಡಿದು ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.
ವೇದಿಕೆಯ ಮೇಲೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಅಧಿಕಾರಿಗಳಾದ ಲಕ್ಷ್ಮೀಶ್ ಭಟ್ ಮತ್ತು ಶ್ರೀಮತಿ ಅಂಕಿತಾ ಎಂ ಕೆ ಉಪಸ್ಥಿತರಿದ್ದರು.
ರೋವರ್ ವಿಕ್ರಮ್ ಸರ್ವರನ್ನು ಸ್ವಾಗತಿಸಿ, ರೋವರ್ ಪರೀಕ್ಷಿತ್ ವಂದಿಸಿ,ರೆಂಜರ್ ಮೇಘನಾ ಕಾರ್ಯಕ್ರಮ ನಿರ್ವಹಿಸಿದರು.