April 2, 2025
Uncategorized

ದಸ್ಕತ್ ತುಳು ಚಲನಚಿತ್ರದ ಪೋಸ್ಟರ್ ಬಿಡುಗಡೆ

ಮಂಗಳೂರು :ಮಾಜಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಅರ್ಪಿಸುವ
ಸೆವೆಂಟಿ ಸೆವೆನ್ ಸ್ಟೂಡಿಯೋಸ್
ರಾಘವೇಂದ್ರ ಕುಡ್ವರವರ ನಿರ್ಮಾಣದ “ದಸ್ಕತ್” ತುಳು ಚಲನಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡು , ತಂಡವು ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಪೋಸ್ಟರನ್ನು ಕನ್ನಡ ಚಿತ್ರರಂಗದ ಖ್ಯಾತ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೈಯಲ್ಲಿ ಬಿಡುಗಡೆಗೊಳಿಸಿದೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್ ಪೂಜಾರಿ ವೇಣೂರು ಈ ಚಿತ್ರದ ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ.
ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಪ್ರಜ್ಞೇಶ್ ಶೆಟ್ಟಿ, ಕಾರ್ಯ ನಿರ್ವಹಿದ್ದಾರೆ.
ಸಂತೋಷ್ ಆಚಾರ್ಯ ಗುಂಪಲಾಜೆಯವರ ಛಾಯಾಗ್ರಹಣದ ಈ ಚಿತ್ರವನ್ನು ಗಣೇಶ್ ನೀರ್ಚಾಲ್ ರವರು ಸಂಕಲನ ಮಾಡಿದ್ದಾರೆ.
ಸಮರ್ಥನ್ ಎಸ್ ರಾವ್ ರವರ ಸಂಗೀತವಿದೆ.
ದೀಕ್ಷಿತ್ ಕೆ ಅಂಡಿಂಜೆ ,ಚಂದ್ರಹಾಸ್ ಉಲ್ಲಾಳ್, ಯುವ ಶೆಟ್ಟಿ , ಮೋಹನ್ ಶೇಣಿ, ದೀಪಕ್ ರೈ ಪಾಣಾಜೆ,ನೀರಜ್ ಕುಂಜರ್ಪ,ಮಿಥುನ್ ರಾಜ್
ತಿಮ್ಮಪ್ಪ ಕುಲಾಲ್, ಯೋಗಿಶ್ ಶೆಟ್ಟಿ .,ಚೇತನ್ ಪಿಲಾರ್ ಹೀಗೆ ಇನ್ನೂ ಅನೇಕ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.
ನಾಯಕಿಯಾಗಿ ಭವ್ಯ ಪೂಜಾರಿಯವರು ಬಣ್ಣ ಹಚ್ಚಿದ್ದಾರೆ.
ಚಲನಚಿತ್ರವು ಬೋಧಿ ಪ್ರೋಡಕ್ಷನ್ಸ್ ಸಹಯೋಗದೊಂದಿಗೆ ಮೂಡಿಬಂದಿದೆ.
ತಂಡದಲ್ಲಿ ಸ್ಮಿತೇಶ್ ಬಾರ್ಯ,ವಿನೋದ್ ರಾಜ್ ಕಲ್ಮಂಜ, ನಿಶಿತ್ ಶೆಟ್ಟಿ, ದೀಕ್ಷಿತ್ ಧರ್ಮಸ್ಥಳ , ಮನೋಜ್ ಆನಂದ್ ಮುಂತಾದವರು ಕಾರ್ಯ ನಿರ್ವಹಿಸಿದ್ದಾರೆ.

Related posts

ಜೆಡಿಎಸ್ ಅಭ್ಯರ್ಥಿಯಾಗಿ ಅಶ್ರಫ್ ಆಲಿಕುಂಞಿ ನಾಮಪತ್ರ ಸಲ್ಲಿಕೆ

Suddi Udaya

ಜೆಸಿಐ ಮಡಂತ್ಯಾರು ಇದರ 2025ನೆ ಸಾಲಿನ ಅಧ್ಯಕ್ಷರಾಗಿ ಅಮಿತಾ ಅಶೋಕ್

Suddi Udaya

ಗಡಾಯಿಕಲ್ಲು ಚಾರಣ: ತಾತ್ಕಾಲಿಕ ನಿಷೇಧ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಚಲನಚಿತ್ರ ತಾರೆ ಶ್ರುತಿ ಭೇಟಿ

Suddi Udaya

ನೇತ್ರಾವತಿಯಲ್ಲಿ ಅನ್ನಪೂರ್ಣ ಹೋಟೆಲ್ ನಡೆಸುತ್ತಿದ್ದ ಕನ್ಯಾಡಿಯ ಗೋಪಾಲ್ ಪೂಜಾರಿ ನಿಧನ

Suddi Udaya

ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಯಲ್ಲಿ ನ.4 ರಿಂದ 9 ಕೆಪಿಎಸ್ ಶೈಕ್ಷಣಿಕ ಹಬ್ಬ-2024 : 5,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ : ಶಾಸಕ ಹರೀಶ್

Suddi Udaya
error: Content is protected !!