24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಮಚ್ಚಿನ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

ಬಳ್ಳಮಂಜ :ಮಚ್ಚಿನ ಗ್ರಾಮ ಪಂಚಾಯತಿನ 2024 -25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ರವರ ಅಧ್ಯಕ್ಷತೆಯಲ್ಲಿ ಆ.14 ರಂದು ಸಮುದಾಯ ಭವನದಲ್ಲಿ ನಡೆಯಿತು.

ನೋಡಲ್ ಅಧಿಕಾರಿಯಾಗಿ ಪಶು ಸಂಗೋಪನಾ ಇಲಾಖೆಯಿಂದ ವಿನಯ ಪ್ರಸಾದ್ ವಹಿಸಿದರು.

ಇಲಾಖೆ ಮಾಹಿತಿಯನ್ನು ಶಿಕ್ಷಣ ಇಲಾಖೆ ಚೇತನ ಮಾಹಿತಿ ನೀಡಿ ಮಚ್ಚಿನ ಗ್ರಾಮದ ಸಹಕಾರಿ ಶಾಲೆಗಳಿಗೆ ಕೊರತೆಯನ್ನು ಭರ್ತಿ ಮಾಡುವಂತೆ ಸಂತಪ್ಪ ಇವರು ಪ್ರಸ್ತಾಪಿಸಿದರು. ಮಚ್ಚಿನ ಶಾಲೆಗೆ ಮುಖ್ಯ ಶಿಕ್ಷಕರನ್ನು ಪರ್ಮನೆಂಟ್ಟಾಗಿ ನೇಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಈ ವೇಳೆ ಕೃಷಿ ಇಲಾಖೆಯ ಜಲಾಯನ ಇಲಾಖೆಯ ಜಯಾನಂದ, ಇಂಜಿನಿಯರ್ ಗಫುರ್, ಗ್ರಾಮ ವಿ ಎ ಸತೀಶ್ ಪಿಂಟೋ, ಬಿಟ್ ಪೊಲೀಸ್ ರೇವಣ್ಣ, ಮೆಸ್ಕಾಂ ಇಲಾಖೆಯಿಂದ, ಅರಣ್ಯ ಇಲಾಖೆ ಯಿಂದ ಮಾಹಿತಿ ನೀಡಿದರು.

ಗ್ರಾಮ ಪಂಚಯತ್ ಉಪಾಧ್ಯಕ್ಷರು ಸೋಮವತಿ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಸದಸ್ಯರಾದ ಚಂದ್ರಶೇಖರ್ ಬಿ ಎಸ್ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಕಾರ್ಯದರ್ಶಿ ಸಂಜೀವ ವಿ ಇವರು ವರದಿ ಮಂಡಿಸಿದರು.

Related posts

ಕುವೆಟ್ಟು: ಸ.ಉ.ಹಿ. ಪ್ರಾ. ಶಾಲೆಯಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮ ಹಾಗೂ ಬೀಳ್ಕೊಡುಗೆ ಸಮಾರಂಭ

Suddi Udaya

ಎರಡು ದ್ವಿಚಕ್ರ ವಾಹನಗಳಿಗೆ ಇನೋವಾ ಕಾರು ಡಿಕ್ಕಿ: ಪ್ರಾಣಾಪಾಯದಿಂದ ಪಾರಾದ ಸವಾರರು

Suddi Udaya

ಉಜಿರೆ ದೇವಸ್ಥಾನದಲ್ಲಿ ಸಂಕಷ್ಟ ಚತುರ್ಥಿ ಪ್ರಯುಕ್ತ  ಕಾವ್ಯವಾಚನ-ವ್ಯಾಖ್ಯಾನ   

Suddi Udaya

ಕಳಿಯ ಗ್ರಾ.ಪಂ. ವ್ಯಾಪಿಯಲ್ಲಿ ಬಿರುಸಿನ ಮತದಾನ: ಗಮನಸೆಳೆದ ಪಿಂಕ್(ಸಖಿ) ಮತಗಟ್ಟೆ : ಮತಗಟ್ಟೆ ಕೇಂದ್ರದಲ್ಲಿ ಮತದಾರರ ವಿವಿಧ ಬೇಡಿಕೆ

Suddi Udaya

ಕೊಕ್ಕಡ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಪ್ರಶಾಂತ್ ಪೂವಾಜೆ ಆಯ್ಕೆ

Suddi Udaya

ಕೊಕ್ಕಡ ಬದ್ರಿಯಾ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮ

Suddi Udaya
error: Content is protected !!