ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ನಾಲ್ಕನೇ ಮತ್ತು ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳು ಸಿದ್ಧಪಡಿಸಿದ ಮಿನಿ ಪ್ರಾಜೆಕ್ಟ್ ಗಳ ಪ್ರದರ್ಶನವನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ಅಶೋಕ್ ಕುಮಾರ್ ರವರು ಆ. 10 ರಂದು ಉದ್ಘಾಟಿಸಿದರು.
ಎಲೆಕ್ಟ್ರಿಕಲ್ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ ವಿಭಾಗ ಮುಖ್ಯಸ್ಥರಾದ ಡಾ. ಕೆ. ಮಂಜುನಾಥ್ ವಂದಿಸಿದರು. ಪ್ರಾಜೆಕ್ಟ್ ಮೌಲ್ಯಮಾಪಕರಾಗಿ ಡಾ. ಗಿರೀಶ್ ಕುಮಾರ್ ಮತ್ತು ಡಾ. ಮಧುಸೂದನ್ ಸಹಕರಿಸಿದ್ದು, ಎಲೆಕ್ಟ್ರಿಕಲ್ ವಿಭಾಗದ ಡಾ. ಸತ್ಯನಾರಾಯಣ ಹಾಗೂ ಡಾ. ಸೋಮಶೇಖರ ಪ್ರಾಜೆಕ್ಟ್ ಪ್ರದರ್ಶನವನ್ನು ಸಂಯೋಜಿಸಿದರು.
ಹ್ಯೂಮನ್ ಫಾಲೋವಿಂಗ್ ರೋಬೋಟ್, ಲೀಸ್ಟ್ ಡಿಸ್ಟೆನ್ಸ್ ಫೈರ್ ಫೈಟಿಂಗ್ ರೋಬೋಟ್ ಮುಂತಾದ ಪ್ರಾಜೆಕ್ಟ್ ಗಳು ವೀಕ್ಷಕರ ಗಮನ ಸೆಳೆದವು. ಒಟ್ಟು ಹದಿನಾಲ್ಕು ತಂಡಗಳು ಇದರಲ್ಲಿ ಭಾಗವಹಿಸಿದ್ದವು