April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಬಂಗಾಡಿ ಸಹಕಾರಿ ವ್ಯವಸಾಯ ಸಂಘಕ್ಕೆ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ

ತಾಲೂಕಿನ ಮುಂಚೂಣಿ ಸಹಕಾರಿ ಸಂಸ್ಥೆಯಾದ ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು 2023-24 ನೇ ಸಾಲಿನ ಸಂಘದ ಅತ್ಯುತ್ತಮ ಕಾರ್ಯವೈಖರಿ ಹಾಗೂ ಸರ್ವಾಂಗೀಣ ಅಭಿವೃದ್ಧಿಯನ್ನು ಗುರುತಿಸಿ ದ.ಕ.ಜಿ.ಕೇಂದ್ರ ಸಹಕಾರ ಬ್ಯಾಂಕು ನಿ, ಮಂಗಳೂರು, ಇವರು ನೀಡುವ ಜಿಲ್ಲಾ ಮಟ್ಟದ ದ್ವೀತಿಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು ಏಳು ಶಾಖೆಗಳನ್ನು ಹೊಂದಿದ್ದು, 2023-24 ನೇ ಸಾಲಿನಲ್ಲಿ 1020-89 ಕೋಟಿ ವ್ಯವಹಾರ ನಡೆಸಿ 127-11 ಕೋಟಿ ಠೇವಣಿ ಹಾಗೂ 175-02 ಹೊಂದಿದೆ.2023-24 ನೇ ಸಾಲಿನಲ್ಲಿ 4-30ಕೋಟಿ ಲಾಭವನ್ನು ಗಳಿಸಿದೆ. ಕೋಟಿ ಹೊರಬಾಕಿ ಸಾಲವನ್ನು ಪ್ರಶಸ್ತಿ ಪಡೆದ ಸಂಘವನ್ನು ಆ.14 ರಂದು ದ.ಕ.ಜಿ.ಕೇಂದ್ರ ಸಹಕಾರ ಬ್ಯಾಂಕಿನ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷರಾದ ಹರೀಶ್ ಸಾಲಿಯಾನ್ ಹಾಗೂ ಕಾರ್ಯನಿರ್ವಹಣಾಧಿಕಾರಿಯವರಾದ ದಯಾನಂದ ಶೆಟ್ಟಿಗಾರ್ ಇವರನ್ನು ಡಾ.ಎಂ.ಎನ್.ರಾಜೇಂದ್ರ ದ.ಕ.ಜಿ.ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ಕುಮಾರ್ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ದ.ಕ.ಜಿ.ಕೇಂದ್ರ ಬ್ಯಾಂಕಿನ ನಿರ್ದೇಶಕರರಾದ ಕುಶಾಲಪ್ಪ ಗೌಡ ಪೂವಾಜೆ, ಶಶಿಕುಮಾರ್ ರೈ ಹಾಗೂ ದ.ಕ.ಜಿ,ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷರು, ಹಾಗೂ ಬಂಗಾಡಿ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ವಸಂತ ಗೌಡ, ನಿರ್ದೇಶಕರಾದ ರಮೇಶ್ ಕೆಂಗಾಜೆ, ವಿನಯ ಚಂದ್ರ ಕಿಲ್ಲೂರು, ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ ಕೆ., ಶ್ರೀಮತಿ ವಿಜಯ, ಸಿಬ್ಬಂದಿಗಳಾದ ಚಂದ್ರಕಾಂತ್ ಗೌಡ, ಬಾಲಕೃಷ್ಣ ಸುವರ್ಣ ಉಪಸ್ಥಿತರಿದ್ದರು.

Related posts

ಚುನಾವಣಾ ಆಯೋಗದ ಆದೇಶದಂತೆ ಶತಾಯುಷಿ ಮತದಾರಿಗೆ ಪ್ರಮಾಣ ಪತ್ರ: ಇಳಂತಿಲದಲ್ಲಿ 102 ವರ್ಷದ ಹುಟ್ಟು ಹಬ್ಬ ಆಚರಿಸಿದ ಖತಿಜರಿಗೆ ಪ್ರಮಾಣ ಪತ್ರ ವಿತರಣೆ

Suddi Udaya

ಪಡಂಗಡಿ ಮಹಿಳಾ ಗ್ರಾಮಸಭೆ: ಮಹಿಳಾ ಸ್ವಚ್ಛತಾಗಾರರಿಗೆ ಗೌರವ ಸನ್ಮಾನ ಮತ್ತು ಸಮವಸ್ತ್ರ ವಿತರಣೆ

Suddi Udaya

ಕೊಕ್ಕಡ: ಸ್ವಚ್ಛತೆಯೇ ಸೇವೆ, ಶ್ರಮದಾನ, ಸಾಧಕರಿಗೆ ಸನ್ಮಾನ

Suddi Udaya

ಧರ್ಮಸ್ಥಳ ಮೇಳದ ತಿರುಗಾಟ ಪ್ರಾರಂಭ

Suddi Udaya

ಬೆಳ್ತಂಗಡಿ ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಕಲ್ಲೇರಿಯಲ್ಲಿ ಸಂಘದ ಎರಡನೇ ಶಾಖೆ ಲೋಕಾರ್ಪಣೆ

Suddi Udaya

ವೇಣೂರು ಗ್ರಾಮ ಪಂಚಾಯತ್ ನ ಮೊದಲ ಹಂತದ ಗ್ರಾಮಸಭೆ

Suddi Udaya
error: Content is protected !!