29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಬೆಳ್ತಂಗಡಿ ಭಾರತಿಯ ಜೈನ್ ಮಿಲನ್ ವಲಯ 8ರ ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ಭಾರತಿಯ ಜೈನ್ ಮಿಲನ್ ವಲಯ 8 ರ ವಾರ್ಷಿಕ ಮಹಾಸಭೆ ಬೆಂಗಳೂರಿನ ಮಂಜುನಾಥ ಸ್ವಾಮಿ ಕಲಾ ಮಂಟಪ ದಲ್ಲಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ವೀರ್ ಡಿ.ಸುರೇಂದ್ರಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಸಾಮೂಹಿಕ ಪಂಚ ನಮಸ್ಕಾರ ದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ಉಪಾಧ್ಯಕ್ಷರಾದ ವೀರ್ ಸುದರ್ಶನ್ ಜೈನ್,ನಿರ್ದೇಶಕರಾದ ವೀರ್ ಬಿ. ಸೋಮ ಶೇಖರ ಶೆಟ್ಟಿ ಹಾಗೂ ಇತರ ಉಪಾಧ್ಯಕ್ಷರು,ನಿರ್ದೇಶಕರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು,ಜೈನ್ ಮಿಲನ್ ರಾಷ್ಟೀಯ ಉಪಾಧ್ಯಕ್ಷರಾದ ವೀರಾಂಗನಾ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ದಿಕ್ಸೂಚಿ ಭಾಷಣ ಮಾಡಿದರು,ಸಭಾಧ್ಯಕ್ಷರಾದ ವೀರ್ ಡಿ. ಸುರೇಂದ್ರ ಕುಮಾರ್ ಅವರು ಸಂಘಟನೆ ಬಲ ಪಡಿಸುವ ನಿಟ್ಟಿನಲ್ಲಿ ಹಾಗೂ ಜಿನ ಭಜನೆ ಕಾರ್ಯಕ್ರಮ ದ ಕುರಿತು ಮಾರ್ಗದರ್ಶನ ನೀಡಿದರು.

ವಲಯಾಧ್ಯಕ್ಷರಾದ ವೀರ್ ಯುವರಾಜ್ ಭಂಡಾರಿ ಅವರು ಎಲ್ಲಾ ವಿಭಾಗಗಳ ಚಟುವಟಿಕೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು,ಕಾರ್ಯದರ್ಶಿ ವೀರ್ ರತ್ನ ರಾಜ್ ನಿರೂಪಿಸಿದ ಕಾರ್ಯಕ್ರಮದಲ್ಲಿ ವಲಯದ ಪದಾಧಿಕಾರಿಗಳು, ಉಪಾಧ್ಯಕ್ಷರು, ನಿರ್ದೇಶಕರು ಭಾಗವಹಿಸಿ , ಕಾರ್ಯಕ್ರಮ ಯಶಸ್ವಿಗೊಳಿಸಿದರು,

Related posts

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಪುಂಜಾಲಕಟ್ಟೆ : ನಯನಾಡು ಸಮೀಪ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಧರ್ಮಸ್ಥಳ: ಮಾನ್ವಿ ಶ್ರೀ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಧರ್ಮಸ್ಥಳದಲ್ಲಿ ವ್ಯಸನಮುಕ್ತರ ನವಜೀವನೋತ್ಸವ ಕಾರ್ಯಕ್ರಮ: ಪಾನ ಮುಕ್ತ ಗ್ರಾಮ ಸಾಧಕರಿಗೆ ಗೌರವ-ಜಾಗೃತಿ ಅಣ್ಣ ಜಾಗೃತಿ ಮಿತ್ರ ಪ್ರಶಸ್ತಿ ಪ್ರದಾನ

Suddi Udaya

ಅರಸಿನಮಕ್ಕಿಯ ತೇಜಸ್ವಿಗೆ ಐಸರ್ ಪರೀಕ್ಷೆಯಲ್ಲಿ 47ನೇ ರ್‍ಯಾಂಕ್

Suddi Udaya

ಅಂಡಿಂಜೆ ಗ್ರಾ.ಪಂ ಮಾಜಿ ಅಧ್ಯಕ್ಷ ರಾಘವ ಪುತ್ರನ್ ನಿಧನ

Suddi Udaya
error: Content is protected !!