ಉಜಿರೆ : ಯು.ಎಸ್. ಅಟೋ ಚಾಲಕರ-ಮಾಲಕರ ಸಂಘದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಆ.15 ರಂದು ಉಜಿರೆ ಸೌತ್ ಪ್ಯಾಲೆಸ್ ಹೋಟೆಲ್ ಬಳಿ ನಡೆಯಿತು.
ಉಜಿರೆ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಧ್ವಜಾರೋಹಣ ನಡೆಸಿದರು. ಉಜಿರೆ ಯು.ಎಸ್. ಅಟೋ ಚಾಲಕರ- ಮಾಲಕರ ಸಂಘದ ಅಧ್ಯಕ್ಷ ಲತೀಫ್ ಯು.ಎಚ್. ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ ಉಜಿರೆ, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ಅಬ್ದುಲ್ ರಝಕ್ ಸುಪ್ರೀಂ ಸೆಂಟರ್ ಉಜಿರೆ, ಶಿವಕಾಂತ ಎಸ್.ಪಿ. ಆಯಿಲ್ ಮಿಲ್ ಉಜಿರೆ, ಪ್ರಶಾಂತ್ ಜೈನ್ ಅಮೃತ್ ಸಿಲ್ಕ್ಸ್ ಉಜಿರೆ, ಆಸೀಫ್ ಅತ್ತಾಜೆ, ಯು.ಎಸ್. ಅಟೋ ಚಾಲಕರ-ಮಾಲಕರ ಸಂಘದ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್, ಸುಬ್ರಹ್ಮಣ್ಯ ಹಾಂಗ್ಯೋಐಸ್ ಕ್ರೀಮ್ ಉಜಿರೆ, ಸುಬ್ರಹ್ಮಣ್ಯ ಮನೋಹರ್ ಇಲೆಕ್ಟ್ರಾನಿಕ್ ಉಜಿರೆ, ಫಾರೂಕ್ ಹೋಟೆಲ್ ಸೌತ್ ಪ್ಯಾಲೆಸ್ ಉಜಿರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅತಿಥಿಗಳಾಗಿ ಉಜಿರೆ ವಲಯ ಬಿ.ಎಂ.ಎಸ್. ಅಟೋ ಚಾಲಕರ – ಮಾಲಕರ ಸಂಘದ ಅಧ್ಯಕ್ಷ ಉಮೇಶ್ ಅತ್ತಾಜೆ, ಸೂರಪ್ಪ ಗಾಂಧಿನಗರ, ದಿನೇಶ್, ಅಣ್ಣು, ಸಲೀಂ ಕುಂಟಿನಿ, ಪ್ರದೀಪ್, ಝಕರಿಯಾ, ದಿವಾಕರ ಹೆಗ್ಡೆ ಭಾಗವಹಿಸಿದ್ದರು. ಹಾಗೂ ಯು.ಎಸ್. ಅಟೋ ಚಾಲಕರ – ಮಾಲಕರ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಕು. ಅನನ್ಯ ಭಟ್ ಉಜಿರೆ ದೇಶ ಭಕ್ತಿ ಗೀತೆ ಹಾಗೂ ಜನಾರ್ಧನ ಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಗೀತೆಯನ್ನು ಹಾಡಿದರು.