ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ: ಅಂಗನವಾಡಿಗಳ 159 ಮಕ್ಕಳಿಗೆ ಮತ್ತು 87 ಮಂದಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹಧನ ವಿಚಾರಣೆ

Suddi Udaya

ಸುಯ೯: ಬೆಳ್ತಂಗಡಿ ತಾಲೂಕು ನಡ ಗ್ರಾಮದ ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ವತಿಯಿಂದ ಅಂಗನವಾಡಿಗಳ 159 ಮಕ್ಕಳಿಗೆಮತ್ತು 87 ಮಂದಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಅರ್ಹ,ಪ್ರತಿಭಾನ್ವಿತ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮ ಆ.15ರಂದು ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದೇವಸ್ಥಾನದ ಆನುವಂಶಿಕ ಆಡಳಿತ ಮುಕ್ತೇಸರರಾದ ಡಾ. ಸತೀಶ್ಚಂದ್ರ ಸುರ್ಯಗುತ್ತು ಇವರು ಸಮವಸ್ತ್ರ ಹಾಗೂ ಪ್ರೋತ್ಸಾಹಧನ ವಿತರಿಸಿದರು. ವೇದಿಕೆಯಲ್ಲಿ ಸಂಗ್ರಾಮ್ ಸುರ್ಯಗುತ್ತು, ಬಿ. ರಾಜಶೇಖರ ಅಜ್ರಿ, ಬಿ. ಮುನಿರಾಜ ಅಜ್ರಿ, ಬಿ. ಇ. ಓ. ಶ್ರೀಮತಿ ತಾರಕೇಸರಿ, ಇಂದಬೆಟ್ಟು ವಲಯದಮಹಿಳಾ ಮತ್ತು ಮಕ್ಕಳ

ಅಭಿವೃದ್ಧಿ ಅಧಿಕಾರಿ ಶ್ರೀಮತಿ ನಾಗವೇಣಿ, ನಡ ಗ್ರಾ. ಪಂ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ರತ್ನಾಕರ್, ಗ್ರಾ. ಪಂ ಸದಸ್ಯರುಗಳಾದ ಸುಕೇಶ್ ಪೂಜಾರಿ, ಪ್ರವೀಣ್.ವಿ ಜಿ, ಶ್ರೀಮತಿ ಶಶಿಕಲಾ ಜೈನ್, ಶ್ರೀಮತಿ ಸುಮಿತ್ರಾ, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ವಿದ್ಯಾರ್ಥಿಗಳು, ಪೋಷಕರು ಉಪಸ್ಥಿರಿದ್ದರು.

Leave a Comment

error: Content is protected !!