ಪಟ್ರಮೆ: ತಾವು ಹೊತ್ತ ಕನಸಿನ ಸ್ವತಂತ್ರ ಭಾರತದ ಸ್ಥಾಪನೆಗೆ ಬೇಕಾಗಿ ಅದೆಷ್ಟೋ ತ್ಯಾಗ ಬಲಿದಾನಗಳ ಮೂಲಕ ಹೋರಾಡಿದ ಹಿರಿಯ ಮಹಾತ್ಮರೆಲ್ಲರ ನೆನೆಯುವ ದಿನ ಮತ್ತು ಅವರು ನಡೆದ ದಾರಿಯಲ್ಲಿ ನಡೆಯಲು ಪ್ರೇರಣೆ ನೀಡುವ ದಿನವೇ ಸ್ವಾತಂತ್ರೋತ್ಸವ ಎಂದು ಸಿಐಟಿಯು ನಾಯಕ ಬಿ.ಎಂ.ಭಟ್ ಹೇಳಿದರು.
ಅವರು ಪಟ್ರಮೆಯ ಜುಮ್ಮಾ ಮಸೀದಿಯಲ್ಲಿ ನಡೆದ 78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣಗೈದು ಮಾತಾಡುತ್ತಿದ್ದರು.
ನಮ್ಮ ಬದುಕಿನ ಮೇಲೆ ಕಾಳಜಿ ಹೊಂದಿ ಪ್ರಜಾಪ್ರಭುತ್ವ ವ್ಯವಸ್ಥೆ ತಂದು ಕೊಟ್ಟದ್ದನ್ನು ಅನುಭವಿಸಿದರೆ ಸಾಲದು, ಆ ಬದುಕನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷ ಮಹಮ್ಮದ್ ಹನೀಫ್, ಕಾರ್ಯದರ್ಶಿ ಅನ್ಸಪ್, ಖಜಾಂಜಿ ಎನ್.ಎಸ್.ನಾಸಿರ್, ಮಹಮ್ಮದ್ ಪಿ, ಸಿಐಟಿಯು ಮುಖಂಡರಾದ ಧನಂಜಯ ಗೌಡ, ಸಿಪಿಐಎಂ ಮುಖಂಡರೂ ಮಾಜಿ ಪಂಚಾಯತು ಸದಸ್ಯರೂ ಆದ ಮಹಮ್ಮದ್ ಅನಸ್, ಮೊದಲಾದವರು ಉಪಸ್ಥಿತರಿದ್ದರು.
ರಾಷ್ಟ್ರಗೀತೆ ಹಾಡಿದ ಬಳಿಕ ಮದರಸದ ಪುಟ್ಟ ವಿದ್ಯಾರ್ಥಿಗಳು ಸಾರೇ ಜಹಾಂಸೆ ಅಚ್ಚಾ ಹಾಡು ಹಾಡಿ ಗಮನ ಸೆಳೆದರು. ಮಸೀದಿಯ ಆವರಣ ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು.
ಮಸೀದಿಯ ಗುರುಗಳಾದ ತಮೀಮ್ ಅನ್ಸಾರಿ ಕುಂಡಾಜೆ(ಖತೀಬರು ಪಟ್ರಮೆ) ಸ್ವಾಗತಿಸಿ, ವಂದಿಸಿದರು.