ಪಟ್ರಮೆ: ಅನಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಧನಂಜಯ ಗೌಡ ನೆರವೇರಿಸಿದರು.
ವಿದ್ಯಾರ್ಥಿ ನಾಯಕ ಮಾ| ಜಿತೇಶ್ ಮುಂದಾಳುತ್ವದಲ್ಲಿ ಶಾಲಾ ಮಕ್ಕಳಿಂದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪರ ಜಯಕಾರದ ಉದ್ಘೋಷಗಳು ಕೇಳಿಬಂದವು.
ಅಧ್ಯಕ್ಷ ಧನಂಜಯರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಯಕ್ಷಬಿಂದು ಪಟ್ಲ ಫೌಂಡೇಶನ್ ವತಿಯಿಂದ ಸದ್ರಿ ಶಾಲೆಯಲ್ಲಿ ನಡೆಸಲಾಗುವ ಯಕ್ಷ ನಾಟ್ಯ ತರಬೇತಿಯ ಉದ್ಘಾಟನೆಯನ್ನು ದೀಪ ಬೆಳಗುವ ಮೂಲಕ ಪಟ್ಲ ಫೌಂಡೇಶನಿನ ಬೆಳ್ತಂಗಡಿ ತಾಲೂಕು ಸಂಚಾಲಕ ಭುಜಬಲಿ ಧರ್ಮಸ್ಥಳ ಇವರು ನೆರವೇರಿಸಿದರು.
ನಾಟ್ಯಗುರುಗಳಾದ ಅರುಣ್ ಕುಮಾರ್, ನಿವೃತ್ತ ಪ್ರಾಧ್ಯಾಪಕ ಡೀಗಯ ಗೌಡ, ಗ್ರಾ.ಪಂ. ಸದಸ್ಯೆ ಶ್ರೀಮತಿ ಗಿರಿಜ, ಎಸ್‌ಡಿಎಂಸಿ ಉಪಾಧ್ಯಕ್ಷೆ ಸುರೇಖಾ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಶ್ಯಾಮರಾಜ್, ಶಾಲಾ ಮುಖ್ಯಶಿಕ್ಷಕ ಕೃಷ್ಣಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಳೆವಿದ್ಯಾರ್ಥಿಗಳ ಹೊಸ ಸಮಿತಿಯನ್ನು ರಚಿಸಲಾಯಿತು. ಶ್ರೀಮತಿ ವಿಮಲ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ, ಜಯಂತ ಪಂಜುರ್ಲಿಕೋಡಿ ಕಾರ್ಯದರ್ಶಿಯಾಗಿ, ಧನಂಜಯ ಕೋಶಾಧಿಕಾರಿಯಾಗಿ ಆಯ್ಕೆಯಾದರು.
ಶಾಲಾ ಸಹಶಿಕ್ಷಕ ಪ್ರಕಾಶ್, ಅತಿಥಿ ಶಿಕ್ಷಕರಾದ ಜಯಂತ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ದೊಲ್ಲ ಗೌಡ, ವಿವಿಧ ಸಂಘಸಂಸ್ಥೆಗಳ, ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಸದಸ್ಯರು, ಶಾಲಾ ಎಸ್‌ಡಿಎಂಸಿ ಸದಸ್ಯರು, ಪೋಷಕರು, ಅಂಗನವಾಡಿ ಮಕ್ಕಳು, ಶಿಕ್ಷಕಿಯರು ಉಪಸ್ಥಿತರಿದ್ದರು.
ಗೌರವ ಶಿಕ್ಷಕಿ ರೇಷ್ಮಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಹರ್ಷಿಣಿ ಧನ್ಯವಾದವಿತ್ತರು.
ಸಿಹಿತಿಂಡಿಗಳ ವಿತರಣೆ ನಡೆಯಿತು.