September 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆ

ಬೊಳಿಯಾರು ಕಾಡಾನೆ ದಾಳಿಗೆ ರಿಕ್ಷಾ ನಜ್ಜುಗುಜ್ಜು: ಅದೃಷ್ಟಾವಶತ್ ಪಾರಾದ ಚಾಲಕ

ಧರ್ಮಸ್ಥಳ: ಧರ್ಮಸ್ಥಳದ ಬೊಳಿಯಾರು ಎಂಬಲ್ಲಿ ಕಾಡಾನೆ ದಾಳಿಯಿಂದ ಆಟೋರಿಕ್ಷಾವೊಂದು ನಜ್ಜುಗುಜ್ಜಾದ ಘಟನೆ ಜೂ.6ರಂದು ಮುಂಜಾನೆ ನಡೆದಿದೆ.

ಬೊಳಿಯಾರು ನಿವಾಸಿ ದಿನೇಶ್ ಎಂಬುವರು ತಮ್ಮ ಆಟೋರಿಕ್ಷಾದಲ್ಲಿ ಮುಂಜಾನೆ ೫:೩೦ ಗಂಟೆ ತನ್ನ ಮನೆಯಿಂದ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ವೇಳೆ ಮನೆಯ ಸಮೀಪವೇ ಕಾಡಾನೆಗಳ ಹಿಂಡು ರಸ್ತೆ ಮಧ್ಯೆ ಎದುರಾಗಿದ್ದು ದಿನೇಶ್ ಇದನ್ನು ಗಮನಿಸಿ ಆತಂಕಗೊಂಡು ರಿಕ್ಷಾವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿ ದೂರದಲ್ಲಿ ಅಡಗಿ ನಿಂತರು.

ಈ ವೇಳೆ ಗುಂಪಿನಲ್ಲಿದ್ದ ದೊಡ್ಡ ಕಾಡಾನೆಯೊಂದು ರಿಕ್ಷಾದ ಮೇಲೆ ಎರಗಿ ನಜ್ಜುಗುಜ್ಜುಗೊಳಿಸಿ ಸಮೀಪದ ಚರಂಡಿಗೆ ತಳ್ಳಿ ಹಾಕಿದ್ದು ಇದನ್ನು ಕಂಡ ದಿನೇಶ್ ಗಾಬರಿಗೊಂಡು ಸ್ಥಳದಲ್ಲಿಯೇ ಮೋರ್ಛೆ ಹೋಗಿದ್ದರು. ರಿಕ್ಷಾವನ್ನು ಪುಡಿ ಮಾಡುತ್ತಿರುವ ಶಬ್ಧ ದಿನೇಶ್ ರವರ ಪತ್ನಿ ಹಾಗೂ ನೆರೆಯವರಿಗೆ ಕೇಳಿ ಸ್ಥಳಕ್ಕೆ ಬಂದು ದಿನೇಶ್ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಉಪಚರಿಸಿದ ಬಗ್ಗೆ ವರದಿಯಾಗಿದೆ. ಕಲ್ಲೇರಿ ರಿಕ್ಷಾ ನಿಲ್ದಾಣದಲ್ಲಿ ಬಾಡಿಗೆ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು.

ಈ ಬಗ್ಗೆ ಸ್ವತಃ ದಿನೇಶ್‌ರವರು ಸುದ್ದಿ ಉದಯಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಡೆಂಗ್ಯೂ ಜ್ವರಕ್ಕೆ ಬೆಳ್ತಂಗಡಿ ಖಾಸಗಿ ಕಾಲೇಜು ವಿದ್ಯಾರ್ಥಿ ಬಲಿ

Suddi Udaya

ಶ್ರೀನಾಗ ಬ್ರಹ್ಮ ಸೇವಾ ಸನ್ನಿಧಿ ಕೊಜಪ್ಪಾಡಿ

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಹೆಗ್ಗಡೆಯವರಿಗೆ ಹುಟ್ಟುಹಬ್ಬದ ಸಂಭ್ರಮ: ಶಾಂತಿವನ ಟ್ರಸ್ಟ್ ನಿಂದ ಗೌರವಾರ್ಪಣೆ

Suddi Udaya

ಅಂಡಿಂಜೆ: ಅಕ್ರಮ ಮರಳು ಸಾಗಾಟ : ರೂ.7 ಸಾವಿರ ಮೌಲ್ಯದ ಮರಳು ವಶಪಡಿಸಿಕೊಂಡ ವೇಣೂರು ಪೊಲೀಸರು

Suddi Udaya

ಉಜಿರೆ: ಜೀನಿಯಸ್ ಕೋಚಿಂಗ್ ಸೆಂಟರ್ ಸ್ಥಳಾಂತರಗೊಂಡು ಶುಭಾರಂಭ

Suddi Udaya

ಬೆಳ್ತಂಗಡಿ ಅಬಕಾರಿ ಎಸ್‌ಐ ಸಯ್ಯದ್ ಶಬೀರ್ ಬೆಂಗಳೂರಿಗೆ ವರ್ಗಾವಣೆ

Suddi Udaya
error: Content is protected !!