
ಉಜಿರೆ: ಹಳೇಪೇಟೆ ಮುಹಿಯುದ್ದೀನ್ ಜುಮಾ ಮಸ್ಜಿದ್ ಹಾಗೂ ಬದ್ರ್ ಹುದಾ ಅರಬಿಕ್ ಮದ್ರಸ ಹಳೇಪೇಟೆ ಇದರ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ಎಂಜೆಎಂ ಅಧ್ಯಕ್ಷ ಬಿ.ಎಂ. ಹಮೀದ್ ಹಾಗೂ ಆಡಳಿತ ಸಮಿತಿಯ ನಾಯಕರು ನೆರವೇರಿಸಿದರು.
ವಿದ್ಯಾರ್ಥಿ ನಾಯಕ ಮತ್ತು ಮದರಸ ಮಕ್ಕಳ ಸಂಗಡಿಗರಿಂದ ರಾಷ್ಟ್ರಗೀತೆ ಹಾಡಲಾಯಿತು. ಸದರ್ ಉಸ್ತಾದ್ ರವರ ನೇತೃತ್ವದಲ್ಲಿ ಪ್ರತಿಜ್ಞೆ ಸ್ವೀಕಾರ ನಡೆಯಿತು.

ಮುಹಮ್ಮದ್ ಯಾಸಿರ್ ಫಾಝಿಲ್ ಅಲ್ ಫುರ್ಕಾನಿ, ಮುದರ್ರ್‍ಇಸ್ & ಖತೀಬರು ಮುಹಿಯಿದ್ದೀನ್ ಜುಮಾ ಮಸ್ಜಿದ್, ಹಳೆಪೇಟೆ, ಸಂದೇಶ ಭಾಷಣ ಮಾಡಿದರು.
ಪಬ್ಲಿಕ್ ಪರೀಕ್ಷೆಯಲ್ಲಿ ರೇಂಜ್ ಮಟ್ಟದದಲ್ಲಿ ರ್‍ಯಾಂಕ್ ಪಡೆದ ಮಕ್ಕಳನ್ನು ಸನ್ಮಾನಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆದ ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಫಝಲ್ ರಹಿಮಾನ್ ಸ್ವಾಗತಿಸಿದರು. ಸಿಹಿ ತಿಂಡಿ ವಿತರಿಸಲಾಯಿತು.