25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜು

ಎಕ್ಸೆಲ್ ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ 78 ನೇ ವರ್ಷದ ಸ್ವಾತಂತ್ರ್ಯೋತ್ಸವನ್ನು ಅತ್ಯಂತ ವಿನೂತನವಾಗಿ ಆಚರಿಸಲಾಯಿತು.

ವಿಧಾನ ಪರಿಷತ್ ಶಾಸಕ‌ಕೆ. ಪ್ರತಾಪಸಿಂಹ ನಾಯಕ್ ಧ್ವಜಾರೋಹಣ ನೆರವೇರಿಸಿದ ಸ್ವಾತಂತ್ರೋತ್ಸವದ ಸಂದೇಶ ನೀಡಿದರು.

ನಮ್ಮ‌ನಡಿಗೆ ಅರಿವಿನಡೆಗೆ ಎಂಬ ಧ್ಯೇಯದಡಿ ವೈವಿದ್ಯಮಯ ಸಿಂಗಾರಿ ಮೇಳ,ಹುಲಿವೇಷ ಮತ್ತು ಉದ್ಘೋಷಗಳ ಮೂಲಕ ಎಕ್ಸೆಲ್ ಕಾಲೇಜಿನಿಂದ ಶ್ರೀ ರತ್ನತ್ರಯ ಜೈನ ತೀರ್ಥ ಕ್ಷೇತ್ರದವರೆಗೆ ಬ್ರಹತ್ ಪಥ ಸಂಚಲನ ನಡೆಯಿತು.ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು.

ಅಪರಾಹ್ನ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ನಡೆದ ರಕ್ಷಕ ನಮನ ಕಾರ್ಯಕ್ರಮದಲ್ಲಿ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಬೆಸ್ಟ್ ಪೌಂಢೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಭಾಗವಹಿಸಿದ್ದರು.

ಉದಯವಾಣಿ,ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ ಉಪಾಧ್ಯಕ್ಷ ರಾಮಚಂದ್ರ ವಮಿಜಾರು ಅಭಿನಂದನಾ ಭಾಷಣ ಮಾಡಿದರು.

ಭಾರತೀಯ ಸೇನೆಯ ಯೋಧರು,ಆರಕ್ಷಕ ಪಡೆಗಳಲ್ಲಿ ರಕ್ಷಕರಾದ ಎಕ್ಸೆಲ್ ವಿದ್ಯಾರ್ಥಿಗಳ ಹೆತ್ತವರಿಗೆ ಸನ್ಮಾನ ಹಾಗೂ ಶೈಕ್ಷಣಿಕ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಗೌರವ ಉಪಸ್ಥಿತಿಯಲ್ಲಿ ಎಕ್ಸೆಲ್ ಕಾಲೇಜಿನ ಕಾರ್ಯದರ್ಶಿ ಅಭಿರಾಮ್ ಬಿ.ಯಸ್,ಎಕ್ಸೆಲ್ ಕಾಲೇಜಿನ ಅರಮಲೆಬೆಟ್ಟ ಕ್ಯಾಂಪಸ್ ಇನ್ ಚಾರ್ಜ್ ಪ್ರಿನ್ಸಿಪಾಲ್ ಡಾ.ಪ್ರಜ್ವಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಕ್ಸೆಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ನವೀನ್ ಕುಮಾರ್ ಮರಿಕೆ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು.

Related posts

ಕುಕ್ಕಾಜೆ ದಿ. ಕುಶಾಲಪ್ಪ ನಾಯ್ಕರ ಮನೆಯವರಿಗೆ ಧನಸಹಾಯ ಹಸ್ತಾಂತರ

Suddi Udaya

ಬಂದಾರು: ಮಹೇಶ್ ರವರ ತೋಟಕ್ಕೆ ನುಗ್ಗಿದ್ದ ಒಂಟಿಸಲಗ: ಅಪಾರ ಕೃಷಿ ಹಾನಿ

Suddi Udaya

ರಾಷ್ಟ್ರಮಟ್ಟದ ವಾಲಿಬಾಲ್: ಮುಂಡಾಜೆ ಕಾಲೇಜಿನ ಇಂದುಮತಿ ತಳವಾರ್ ಹಾಗೂ ಅಂಜಲಿಗೆ ಚಿನ್ನದ ಪದಕ

Suddi Udaya

ಶಿಶಿಲದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ ಬಂಡಿಹೊಳೆ ಕೆಮ್ಮಣ್ಣು ಎಂಬಲ್ಲಿ ಬರೆ ಜರಿದು ರಸ್ತೆ ಬಂದ್

Suddi Udaya

“ಲೋಕಾಯುಕ್ತ ಜನ ಸಂಪರ್ಕ ಸಭೆ: ಗ್ರಾಮ ಮಟ್ಟದಲ್ಲಿ ಭ್ರಷ್ಟಚಾರದ ಕುರಿತು ಜಾಗೃತಿ-ಲೋಕಾಯುಕ್ತ ಅಧೀಕ್ಷಕ ಕುಮಾರಚಂದ್ರ

Suddi Udaya

ರಾಣಿ ಚೆನ್ನಭೈರಾದೇವಿ ಅವರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ: ಡಾ| ಹೆಗ್ಗಡೆ ಭಾಗಿ

Suddi Udaya
error: Content is protected !!