ಕನ್ಯಾಡಿ-2 ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ” ನಶಾ ಮುಕ್ತ ಭಾರತ ಅಭಿಯಾನ ” ಎಂಬ ವಿಷಯ ವನ್ನು ಮುಂದಿಟ್ಟು ಕೂಂಡು 78ನೇಯ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾದ ಶ್ರೀಮತಿ ಶಾರಿಕಾ. ಡಿ .ಶೆಟ್ಟಿ ಹಾಗೂ ಗಣ್ಯರು ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿ, ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು .ಮುಖ್ಯ ಅತಿಥಿಗಳಾದ ಶ್ರೀಮತಿ ಸಾರಿಕಾ. ಡಿ .ಶೆಟ್ಟಿ ಧ್ವಜಾರೋಹಣವನ್ನು ಮಾಡಿ ಸ್ವಾತಂತ್ರ ದಿನದ ಮಹತ್ವವನ್ನು ತಿಳಿಸಿ ಕೊಟ್ಟರು. ಶಾಲಾ ನಾಯಕ ಸುಜಿತ್ ನೇತೃತ್ವದಲ್ಲಿ ಮಕ್ಕಳು ಘೋಷಣೆ ಕೂಗಿದರು ಮತ್ತು ಮಕ್ಕಳು ಮಾಸ್ ಪಿ.ಟಿ ಯನ್ನು ಸೊಗಸಾಗಿ ಮಾಡಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮ್ ಪಂಚಾಯತ್ ಸದಸ್ಯರು ಹಾಗೂ ನಮ್ಮ ಶಾಲೆಯ ಅಡುಗೆ ಸಿಬ್ಬಂದಿಯೂ ಆದ ಶ್ರೀಮತಿ. ಭಾರತಿ, ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಕೆ.ನಂದ , ಉಪಾಧ್ಯಕ್ಷರು ಶ್ರೀಮತಿ ರಮ್ಯಾ ಗೌರವ ಸಲಹೆಗಾರರಾದ .ರಾಜೇಂದ್ರ ಅಜ್ರಿ ,.ನವೀನ್ ಚಂದ್ರ ಶೆಟ್ಟಿ. ನಮ್ಮ ಶಾಲೆಯ ಹಳೆ ವಿದ್ಯಾರ್ಥಿ .ಸುದರ್ಶನ್ ಕನ್ಯಾಡಿ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಪುಷ್ಪಾ.ಎನ್, ಶಾಲಾ ಶಿಕ್ಷಕ ವೃಂದ,ಪೋಷಕ ವೃಂದ,ಶಾಲಾ ಮೇಲುಸ್ತುವಾರಿ ಸಮಿತಿಯ ಸರ್ವ ಸದಸ್ಯರು,ಶಾಲಾ ನಾಯಕ ಸುಜಿತ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜೇಂದ್ರ ಅಜ್ರಿ “ನಶಾ ಮುಕ್ತ ಭಾರತ ಅಭಿಯಾನ” ಬಗ್ಗೆ ಮಾಹಿತಿಯನ್ನು ನೀಡಿದರು .ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ .ಕೆ ನಂದ ರವರು ಶುಭ ಆರೈಸಿದರು. ಕಾರ್ಯಕ್ರಮವನ್ನು ನಮ್ಮ ಶಾಲಾ ಗೌರವ ಶಿಕ್ಷಕಿಯಾದ ಶ್ರೀಮತಿ. ರಾಜಶ್ರೀ ನಿರೂಪಣೆಯನ್ನು , ಗೌರವ ಶಿಕ್ಷಕಿಯಾದ ಶ್ರೀಮತಿ .ರೇವತಿ ಸ್ವಾಗತವನ್ನು ಶಾಲಾ ಅತಿಥಿ ಶಿಕ್ಷಕಿಯಾದ ಶ್ರೀಮತಿ. ಶ್ವೇತಾ ಧನ್ಯವಾದ ಕಾರ್ಯಕ್ರಮವನ್ನು ಮಾಡಿದರು.
ಶಾಲಾ ಸಹ ಶಿಕ್ಷಕಿಯಾದ ಶ್ರೀಮತಿ ದೀಪಿಕಾ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿದರು.