ವೇಣೂರು ಗ್ರಾಮ ಪಂಚಾಯತ್ ನಲ್ಲಿ ವಿನೂತನವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ವೇಣೂರು ಕೆಳಗಿನ ಪೇಟೆ ಶ್ರೀರಾಮ ಭಜನಾ ಮಂದಿರದಿಂದ ನಮನ ಪ್ಯೂಲ್ಸ್ – ಗ್ರಾಮ ಪಂಚಾಯತ್ ವರೆಗೆ ವಾಹನ ಜಾಥಾ ಮಾಡಲಾಯಿತು.
ಗ್ರಾಮ ಪಂಚಾಯತ್ ಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೇರವೇರಿಸಲಾಯಿತು. ನಂತರ ಬಸ್ಸ್ ತಂಗುದಾಣದ ಕಟ್ಟಡ ಸಭಾಂಗಣದಲ್ಲಿ ಶ್ರುತಿ ಕಾಂತಜೆ ಹಾಗೂ ತಂಡದವರಿಂದ ದೇಶ ಭಕ್ತಿ ಗೀತೆಗಳ ಸಂಗೀತಾ ಕಾರ್ಯಕ್ರಮ ನಡೆಯಿತು.
ಖ್ಯಾತ ವಾಗ್ಮಿ ಅಕ್ಷಯ ಗೋಖಲೆ ಕಾರ್ಕಳ ಸ್ವಾತಂತ್ರ್ಯ ಉತ್ಸವದ ಮಹತ್ವದ ಕುರಿತು ಭಾಷಣ ಮಾಡಿದರು.
ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜ, ವೇಣೂರು ಗ್ರಾ.ಪಂ ಅದ್ಯಕ್ಷೆ ಮಲ್ಲಿಕಾ ಕಾಶಿನಾಥ ಹೆಗ್ಡೆ, ಹಿರಿಯರಾದ ಪುರುಷೋತ್ತಮ ರಾವ್, ಪ್ರಮುಖರಾದ ಜಯಂತ್ ಕೋಟ್ಯಾನ್, ಗ್ರಾ.ಪಂ ಉಪಾಧ್ಯಕ್ಷ ಉಮೇಶ್ ನಡ್ತಿಕಲ್ಲು ಉಪಸ್ಥಿತರಿದ್ದರು.
ಪಂಚಾಯತ್ ಸದಸ್ಯರು, ಸಿಬ್ಬಂದಿಗಳು ,ಗ್ರಾಮಸ್ಥರು ಸಹಕರಿಸಿದರು.