ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್

ಶಾಸಕ ಹರೀಶ್ ಪೂಂಜರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

ಬೆಳ್ತಂಗಡಿ : ತಾಲೂಕು ಆಡಳಿತದಿಂದ ಆಡಳಿತ ಸೌಧದ ಮುಂಭಾಗದಲ್ಲಿ ನಡೆದ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ,ಶಾಸಕ ಹರೀಶ್ ಪೂಂಜ ಈ ದೇಶಕ್ಕೆ ಕೇವಲ ಶಾಂತಿಯಿಂದ ಕೇವಲ ಚರಕ ತಿರುಗಿಸಿದರಿಂದ ಈ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ. ಸರ್ಕಾರಿ ಅಧಿಕೃತ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿಯ ಕುರಿತು ಅವಮಾನದ ರೀತಿಯಲ್ಲಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಮತ್ತು ಸಮಾಜದಲ್ಲಿ ಹಿಂದೂ ಮುಸ್ಲಿಂ ಸಮುದಾಯದವರಲ್ಲಿ ಕಂದಕವನ್ನು ಸೃಷ್ಟಿ ಮಾಡಿ ಸಮಾಜದ ನೆಮ್ಮದಿ ಮತ್ತು ಶಾಂತಿಯನ್ನು ಕದಡುವಂತೆ ಪ್ರೇರೇಪಿಸುತ್ತಾರೆ ಎಂದು ಅಪಾದಿಸಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಮ್ ನಾಗೇಶ್ ಕುಮಾರ್ ಗೌಡ ಮತ್ತು ಸಿಪಿಐಎಮ್ ಮುಖಂಡ ಬಿ.ಎಮ್ ಭಟ್ ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶೇಖರ್ ಕುಕ್ಕೆಡಿ,ಅರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸೆಬಾಸ್ಟಿಯನ್ ,ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲಿಯಾನ್ ಮಾಲಾಡಿ ,ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಅಮೀನ್ , ಹಾಗೂ ಪಕ್ಷದ ಪ್ರಮುಖರಾದ ಸದಾನಂದ ನಾಲ್ಕೂರು ಉಪಸ್ಥಿತರಿದ್ದರು.

Related posts

ವೇಣೂರು ಮಸೀದಿಯ ಅಧ್ಯಕ್ಷ ಹಾಜಿ ವಿ. ಅಬೂಬಕ್ಕರ್ ನಿಧನ

Suddi Udaya

ಜಿ.ಪಂ. ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್‌ರ ಮಾತೃಶ್ರೀ ಸಿರಿಯಮ್ಮ ಹೊಸಂಗಡಿ ನಿಧನ

Suddi Udaya

ಧರ್ಮಸ್ಥಳ: ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ “ಪರ್ಯೂಷಣ ಪರ್ವ” ಕೃತಿ ಬಿಡುಗಡೆ

Suddi Udaya

ಸೌತಡ್ಕ: ಸತ್ತ ಕರುವೊಂದನ್ನು ಮೋರಿಗೆ ಎಸೆದ ದುಷ್ಕಾರ್ಮಿಗಳು: ಹಿಂ.ಜಾ. ವೇದಿಕೆ ಮತ್ತು ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಸದಸ್ಯರಿಂದ ಅಂತ್ಯಸಂಸ್ಕಾರ

Suddi Udaya

ಮಂದಿರಗಳ ರಕ್ಷಣೆ ದೃಷ್ಟಿಯಿಂದ ಕರ್ನಾಟಕ ಮಂದಿರ ಮಹಾಸಂಘದ ವತಿಯಿಂದ ಬೆಳ್ತಂಗಡಿ ತಹಶೀಲ್ದಾರರಿಗೆ ಮನವಿ

Suddi Udaya

ನಾರಾವಿ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya
error: Content is protected !!