24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಲ್ಮಂಜ ಗ್ರಾಮಸಭೆ: ಪೈಪುಗಳು ಒಡೆದು 4 ದಿವಸದಿಂದ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ.

ಕಲ್ಮಂಜ:ಕಲ್ಮಂಜ ಗ್ರಾಮ‌ಪಂಚಾಯತ್ ನ 2024-25’ನೇ ಸಾಲಿನ ಮೊದಲ ಹಂತದ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ವಿಮಲ ಇವರ ಅಧ್ಯಕ್ಷತೆಯಲ್ಲಿ ಆ.16 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಪಶು ವೈದ್ಯಾಧಿಕಾರಿ ವಿಶ್ವನಾಥ ಸಿ.ಎನ್ ಅವರು ಗ್ರಾಮಸಭೆಯನ್ನು ಮುನ್ನಡೆಸಿದರು.

ಹಲವಡೆ ನೀರಿನ ಪೈಪುಗಳು ಒಡೆದು ಹೋಗಿ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುವುದಿಲ್ಲ ಎಂದು ಗ್ರಾಮಸ್ಥರೊರ್ವರು ತಿಳಿಸಿದರು.

ಸಿಎ ಬ್ಯಾಂಕ್ ಮತ್ತು ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡ ನಿರ್ಮಿಸಲು ಕಲ್ಮಂಜದಲ್ಲಿ ಸರಕಾರಿ ಜಾಗವಿದೇಯೇ ಎಂದು ಗ್ರಾಮಸ್ಥರು ಕಂದಾಯ ಇಲಾಖಾ ಅಧಿಕಾರಿಯಲ್ಲಿ ತಿಳಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಲ್ಲರನ್ನು ಸ್ವಾಗತಿಸಿ,ಸಭೆಗೆ ವರದಿ ಮಂಡಿಸಿದರು. ಕಾರ್ಯದರ್ಶಿ ಸರೋಜಿನಿ ಕೆ ವಾರ್ಡ್ ಸಭೆಯಲ್ಲಿ ಬಂದ ಬೇಡಿಕೆಯನ್ನು ಸಭೆಯ ಮುಂದಿಟ್ಟರು.

ರಾಧಾಕೃಷ್ಣ ಗೌಡ, ಲೀಲಾ, ಸವಿತಾ, ಪ್ರವೀಣ, ವರದಾಕ್ಷ ಆಚಾರ್ಯ, ಎಂ.ಶ್ರೀಧರ,ಕೃಷ್ಣಮೂರ್ತಿ, ಶೋಭಾವತಿ ಉಪಸ್ಥಿತರಿದ್ದರು.

ವಿವಿಧ ಇಲಾಖೆಯ ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು. ಅಂಗನವಾಡಿ,ಆಶಾ ಕಾರ್ಯಕರ್ತರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಶಿಶಿಲ ಗ್ರಾಮ ಪಂಚಾಯತ್ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ

Suddi Udaya

ಕೆ.ಪಿ.ಸಿ.ಸಿ ಉಪಾಧ್ಯಕ್ಷರಾಗಿ ಮಾಜಿ ಸಚಿವ ಗಂಗಾಧರ ಗೌಡ ಆಯ್ಕೆ

Suddi Udaya

ಕೋಲ್ಕತ್ತಾದಲ್ಲಿ ಮೆಡಿಕಲ್ ವಿದ್ಯಾರ್ಥಿನಿಯ ಹತ್ಯೆ ಖಂಡಿಸಿ ಉಜಿರೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮೌನ ಆಚರಣೆ ಹಾಗೂ ಶ್ರದ್ಧಾಂಜಲಿ ಸಭೆ

Suddi Udaya

ಕೊಕ್ಕಡ ವಲಯದ ಹಳ್ಳಿoಗೇರಿಯಲ್ಲಿ ಪ್ರಗತಿ-ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಪುತ್ತೂರು: ಸಹಾಯಕ ಆಯುಕ್ತ ಗಿರೀಶ್ ನಂದನ್ ವರ್ಗಾವಣೆ: ನೂತನ ಆಯುಕ್ತರಾಗಿ ಮಹೇಶ್ ಚಂದ್ರ ನೇಮಕ

Suddi Udaya

ಮುಗೇರಡ್ಕ ದೈವಸ್ಥಾನಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya
error: Content is protected !!