September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಸತೀಶ್ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ : ಹೃದಯಾಘಾತದಿಂದ ಪ್ರಥಮ ದರ್ಜೆ ಸಹಾಯಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಜು.15ರಂದು ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಪ್ರಥಮ ದರ್ಜೆ ಸಹಾಯಕ ಹಾಸನ ಜಿಲ್ಲೆಯ ನಿವಾಸಿ ಸತೀಶ್(46ವ) ಜುಲೈ 15 ರಂದು ಬೆಳಗ್ಗೆ ಸ್ನಾನ ಮಾಡಿ ವಾಪಸ್ ಬರುವಾಗ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಲಾಯಿಲ ಬಾಡಿಗೆ ಮನೆಯಲ್ಲಿ ನಡೆದಿದೆ.

ಎಂದಿನಂತೆ ಬೆಳಗ್ಗೆ ಸ್ನಾನ ಮಾಡಿ ವಾಪಸ್ ಬರುವಾಗ ಕುಸಿದು ಬಿದ್ದ ಸತೀಶ್ ಅವರನ್ನು ಪತ್ನಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ತಿಳಿಸಿದ್ದಾರೆ. ಸತೀಶ್ ಮೂಲತಃ ಹಾಸನ ಜಿಲ್ಲೆಯವರು ಲಾಯಿಲದಲ್ಲಿ ಬಾಡಿಗೆ ಮನೆ ಮಾಡಿದ್ದರು.

ಮೃತರು ಪತ್ನಿ ಜಯಶ್ರೀ ಮತ್ತು ಓರ್ವ ಮಗ ಚಂದನ್ ನನ್ನು ಅಗಲಿದ್ದಾರೆ.

Related posts

ನಾರಾವಿ: ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

Suddi Udaya

ವಾಲಿಬಾಲ್ ಪಂದ್ಯಾಟ: ಚಂದ್ರಶೇಖರ ಗೌಡ ಕೊಯ್ಯೂರು ದ್ವಿತೀಯ ಸ್ಥಾನ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಸಾವು : ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಉಜಿರೆ ಮೆಸ್ಕಾಂ‍ನ ಸಹಾಯಕ ಇಂಜಿನಿಯರ್ ವಸಂತ ಟಿ. ರವರು ಮಂಗಳೂರು ವಿದ್ಯುತ್ ಉಪ ವಿಭಾಗದ ಸಹಾಯಕ ಇಂಜಿನಿಯರ್ ಹುದ್ದೆಗೆ ನಿಯೋಜನೆ

Suddi Udaya

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಅಭಿನಂದನಾ ಸಭೆ

Suddi Udaya

ಉಜಿರೆ: ಶ್ರೀ ಶಾರದಾ ಪೂಜೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!