April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವಾಣಿ ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ

ಬೆಳ್ತಂಗಡಿ: ರಾಷ್ಟ್ರಪ್ರೇಮದೊಂದಿಗೆ ಗುಣಾತ್ಮಕವಾದ ವಿಚಾರಗಳನ್ನು ಬೆಳೆಸಿಕೊಂಡು ಏಳಿಗೆಯನ್ನು ಹೊಂದುವುದು ಪ್ರತಿಯೊಬ್ಬರ ಧ್ಯೇಯವಾಗಬೇಕು ಎಂದು ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಪ್ರಜ್ವಲಾ ಡಿ ಆರ್ ಹೇಳಿದರು.


ಅವರು ವಾಣಿ ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸ್ವತಂತ್ರ ಭಾರತದಲ್ಲಿ ನಾವು ನೆಮ್ಮದಿಯನ್ನು ಕಾಣಬೇಕಾದರೆ ಜನರನ್ನು ದಾರಿ ತಪ್ಪಿಸುವ ವಿಚಾರಗಳಿಂದ ದೂರ ಇರಬೇಕು. ಯುವ ಜನಾಂಗ ಆಧುನಿಕ ಎಲೆಕ್ಟ್ರಾನಿಕ್ ಮಾಧ್ಯಮಗಳನ್ನು ದುರುಪಯೋಗ ಪಡಿಸಿಕೊಳ್ಳದೆ ಜ್ಞಾನವನ್ನು ಹೊಂದುವಲ್ಲಿ ಬಳಸಿಕೊಳ್ಳಬೇಕು. ಯುವ ಪ್ರತಿಭೆಗಳು‌ ರಾಷ್ಟ್ರ ಅಭಿವೃದ್ಧಿಯ ಕನಸುಗಳನ್ನು ಕಾಣಬೇಕು. ಪ್ರತಿಭೆಗಳು ವಿದೇಶದ ಪಾಲಾಗದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ನಡೆದಾಗ ಮಾತ್ರ ಸ್ವಾತಂತ್ರ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.


ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲರಾದ ವಿಷ್ಣು ಪ್ರಕಾಶ್ ಸ್ವಾಗತಿಸಿದರು. ಉಪನ್ಯಾಸಕ ಮಹಾಬಲ ಗೌಡ ಧನ್ಯವಾದವಿತ್ತರು. ಉಪನ್ಯಾಸಕಿ ಲತಾಶ್ರೀ ಕಾರ್ಯಕ್ರಮ ನಿರೂಪಿಸಿದರು.

Related posts

ಪುದುವೆಟ್ಟು ಮಿಯ್ಯಾರು ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ ಮಾಜಿ ಸಚಿವ ಕೆ. ಗಂಗಾಧರ ಗೌಡ

Suddi Udaya

ಕಣಿಯೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಸ್ವಚ್ಛತಾ ಶ್ರಮದಾನ

Suddi Udaya

ಮೇ 3: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 53 ನೇ ವರ್ಷದ ಉಚಿತ ಸಾಮೂಹಿಕ ವಿವಾಹ: ಅರ್ಜಿ ಆಹ್ವಾನ

Suddi Udaya

ಉಜಿರೆ ಮಹಿಳಾ ಜ್ಞಾನವಿಕಾಸ ಕೇಂದ್ರದಲ್ಲಿ ಬೀದಿ ನಾಟಕ

Suddi Udaya

ಪುಂಜಾಲಕಟ್ಟೆಯಲ್ಲಿ ಜನಔಷಧಿ ಕೇಂದ್ರ ಶುಭಾರಂಭ

Suddi Udaya
error: Content is protected !!