23.6 C
ಪುತ್ತೂರು, ಬೆಳ್ತಂಗಡಿ
May 19, 2025
Uncategorized

ವೇಣೂರು: ಶ್ರೀ ಜೈನ ದಿಗಂಬರ ತೀರ್ಥಕ್ಷೇತ್ರ ಸಮಿತಿ ಮಾಜಿ ಕಾರ್ಯದರ್ಶಿ, ಮಾರಗುತ್ತು ಯಂ. ವಿಜಯರಾಜ ಅಧಿಕಾರಿ ನಿಧನ

ವೇಣೂರು : ಇಲ್ಲಿಯ ಮಾರಗುತ್ತು ಮನೆ ನಿವಾಸಿ, ವೇಣೂರು ಶ್ರೀ ಜೈನ ದಿಗಂಬರ ತೀರ್ಥಕ್ಷೇತ್ರ ಸಮಿತಿ ಮಾಜಿ ಕಾರ್ಯದರ್ಶಿಗಳು, ದೈವದ ಗಡಿ ಪ್ರಧಾನರಾಗಿರುವ ಮಾರಗುತ್ತು ಯಂ. ವಿಜಯರಾಜ ಅಧಿಕಾರಿ ಅವರು ಹೃದಯಾಘಾತದಿಂದ ಆ.16 ರಂದು ನಿಧನರಾಗಿದ್ದಾರೆ. ಸುಮಾರು 3ದಶಕ ಕ್ಕೂ ಮಿಕ್ಕಿ ವಿಜ್ಞಾನ ದ ಅಧ್ಯಾಪಕರಾಗಿ ಜನಾನು ರಾಗಿ ಗಳಾಗಿದ್ದರು ಜೈನ ಧರ್ಮ ಹಾಗೂ ಹಿಂಧೂ ಧರ್ಮ ವಿವೇಕಾನಂದ ಚಿಂತನೆ ಗಳ ಬಗ್ಗೆ ಅಳವಾ ದ ಅಭ್ಯಾಸ ಮಾಡಿದವರು ಉತ್ತಮ ಸಂಘಟಕಧಾರ್ಮಿಕ ಉಪನ್ಯಾಸ ಕಾರ ರಾಗಿ ಜನಪ್ರಿಯ ರಾಗಿದ್ದರು ಇವರು ಪ್ರಗತಿಪರ ಕೃಷಿಕರೂ ಆಗಿ ಧಾರ್ಮಿಕ, ಸಮಾಜಸೇವೆಯಲ್ಲೇ ಸಮಯ ಕಳೆಯುತ್ತಿದ್ದರು. ಮಾರಗುತ್ತು ಮಾರವಾಂಡಿ ದೈವದ ಗಡಿ ಪ್ರದಾನರಾಗಿ ಗ್ರಾಮದ ಜನತೆಗೆ ಮಾರ್ಗದರ್ಶಕರಾಗಿದ್ದರು. ಮುದ್ದಾಡಿ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದರು. ವಿವೇಕಾನಂದ ಸೇವಾ ಟ್ರಸ್ಟ್ ಸ್ಥಾಪಿಸಿ ಸಮಾಜ ಸೇವೆಯಲ್ಲೂ ನಿರತರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ. ವಿಜಯರಾಜ ಅಧಿಕಾರಿ ಅವರು ಶ್ರೀ ಮಠ ದ ಶಿಷ್ಯ ವರ್ಗ ದವರಗಿದ್ದು ಸದಾ ಶ್ರೀ ಮಠ ದ ಸಂಪರ್ಕ ದಲ್ಲಿದ್ದರು ಅವರ ಅಗಲಿದ ಆತ್ಮಕ್ಕೆ ಉತ್ತಮ ಸದ್ಗತಿ ಪ್ರಾಪ್ತಿ ಯಾಗಲಿ ಅವರ ಅಗಲುವಿಕೆ ಯಿಂದ ಆಗಿರುವ ದುಃಖ್ಖ ವನ್ನು ಸಹಿಸುವ ಶಕ್ತಿ ಅವರ ಕುಟುಂಬ ವರ್ಗ ಕ್ಕೆ ಸಿಗಲಿ ಎಂದು ಶ್ರೀ ಜಿನೇಂದ್ರ ಭಗವಂತ ರಲ್ಲಿ ಪ್ರಾರ್ಥಿಸುತ್ತೇವೆ ಎಂದು ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಶ್ರೀ ಜೈನ ದಿಗಂಬರ ಜೈನ ಮಠ, ಸ್ವಸ್ತಿ ಶ್ರೀ ಭಟ್ಟಾರಕ ನಗರ ಮೂಡುಬಿದಿರೆ ತಿಳಿಸಿದ್ದಾರೆ.

Related posts

ಉಜಿರೆಯಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ

Suddi Udaya

ಕಾಜೂರು ಮಖಾಂ ಉರೂಸ್‌ಗೆ ಸಂಭ್ರಮದ ಚಾಲನೆ: ಆಧ್ಯಾತ್ಮಿಕ ಚೌಕಟ್ಟು ಮೀರಿ ಬದುಕುವವರಿಂದ ಸಮಾಜಕ್ಕೆ ಅಪಾಯ: ಕಾಜೂರು ತಂಙಳ್

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದದಲ್ಲಿ ಜುಬಿಲಿ ವರ್ಷ ಉದ್ಘಾಟನೆ

Suddi Udaya

ಲಾಯಿಲ:ಉಮ್ಮಣ್ಣ ಗೌಡ ನಿಧನ

Suddi Udaya

ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ಉಜಿರೆ ವಲಯ ಸಮಿತಿ ಮಹಾಸಭೆಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya

ಧರ್ಮಸ್ಥಳ ವಲಯದ ಕಾಯರ್ತಡ್ಕ – ಕಳೆಂಜ ಎ ಒಕ್ಕೂಟದ ಸಭೆ: ಮಾಶಾಸನದ ಮಂಜೂರಾತಿ ಪತ್ರ ಹಸ್ತಾಂತರ

Suddi Udaya
error: Content is protected !!