April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್

ಶಾಸಕ ಹರೀಶ್ ಪೂಂಜರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

ಬೆಳ್ತಂಗಡಿ : ತಾಲೂಕು ಆಡಳಿತದಿಂದ ಆಡಳಿತ ಸೌಧದ ಮುಂಭಾಗದಲ್ಲಿ ನಡೆದ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ,ಶಾಸಕ ಹರೀಶ್ ಪೂಂಜ ಈ ದೇಶಕ್ಕೆ ಕೇವಲ ಶಾಂತಿಯಿಂದ ಕೇವಲ ಚರಕ ತಿರುಗಿಸಿದರಿಂದ ಈ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ. ಸರ್ಕಾರಿ ಅಧಿಕೃತ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿಯ ಕುರಿತು ಅವಮಾನದ ರೀತಿಯಲ್ಲಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಮತ್ತು ಸಮಾಜದಲ್ಲಿ ಹಿಂದೂ ಮುಸ್ಲಿಂ ಸಮುದಾಯದವರಲ್ಲಿ ಕಂದಕವನ್ನು ಸೃಷ್ಟಿ ಮಾಡಿ ಸಮಾಜದ ನೆಮ್ಮದಿ ಮತ್ತು ಶಾಂತಿಯನ್ನು ಕದಡುವಂತೆ ಪ್ರೇರೇಪಿಸುತ್ತಾರೆ ಎಂದು ಅಪಾದಿಸಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಮ್ ನಾಗೇಶ್ ಕುಮಾರ್ ಗೌಡ ಮತ್ತು ಸಿಪಿಐಎಮ್ ಮುಖಂಡ ಬಿ.ಎಮ್ ಭಟ್ ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶೇಖರ್ ಕುಕ್ಕೆಡಿ,ಅರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸೆಬಾಸ್ಟಿಯನ್ ,ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಸಾಲಿಯಾನ್ ಮಾಲಾಡಿ ,ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ಅಮೀನ್ , ಹಾಗೂ ಪಕ್ಷದ ಪ್ರಮುಖರಾದ ಸದಾನಂದ ನಾಲ್ಕೂರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಕೆಂಬರ್ಜೆ ನಿವಾಸಿ ಗುರುವಪ್ಪ ಪೂಜಾರಿ ನಿಧನ

Suddi Udaya

ಮಡಂತ್ಯಾರು: ಸುವೇಗಾ ಮೋಟಾರ್ಸ್ ನಲ್ಲಿ ಹೀರೋ ಡೆಸ್ಟಿನಿ- 125 ಮಾರುಕಟ್ಟೆಗೆ ಬಿಡುಗಡೆ

Suddi Udaya

ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಮಡoತ್ಯಾರು ನಗರದಲ್ಲಿ ಅಂಗಡಿ ಮುoಗಟ್ಟುಗಳಿಗೆ ಭೇಟಿ ನೀಡಿ ಮತಯಾಚನೆ

Suddi Udaya

ಶಾಸಕ ಹರೀಶ್ ಪೂಂಜರವರ ನಿವಾಸಕ್ಕೆ ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

Suddi Udaya

ಗ್ರಾಮಕರಣಿಕ ಮಹೇಶ್ ಗೆ ಜೈಲು ಶಿಕ್ಷೆ

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮ ಕಲಶೋತ್ಸವ

Suddi Udaya
error: Content is protected !!