ಅತ್ಯುನ್ನತ ಸೇವೆಗಾಗಿ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪಡೆದ ವಿಜಯ ಕುಮಾರ್ ಕೆಲ್ಲಗುತ್ತು ರವರಿಗೆ ಪೊಲೀಸ್ ಮಹಾ ನಿರ್ದೇಶಕರಾದ ಡಾ. ಅಲೋಕ್ ಮೋಹನ್ ರಿಂದ ಸ್ಮರಣಿಕೆ ನೀಡಿ ಗೌರವ

Suddi Udaya

ಬೆಳ್ತಂಗಡಿ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅತ್ಯುನ್ನತ ಸೇವೆಗಾಗಿ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪಡೆದ
ಉಡುಪಿ ಜಿಲ್ಲಾ ಪೊಲೀಸ್‌ ಕಚೇರಿಯ ಡಿಸಿಆರ್ ಬಿ ವಿಭಾಗದಲ್ಲಿ ಸಿವಿಲ್ ಹೆಡ್ ಕಾನ್ ಸ್ಟೇಬಲ್ ಆಗಿ ಸೇವೆಸಲ್ಲಿಸುತ್ತಿರುವ ಬೆಳ್ತಂಗಡಿಯ ವಿಜಯ ಕುಮಾರ್ ಕೆಲ್ಲ ಗುತ್ತು ಅವರನ್ನು ಬೆಂಗಳೂರಿ ನಲ್ಲಿ ಕರ್ನಾಟಕ ದ ಪೊಲೀಸ್ ಮಹಾ ನಿರ್ದೇಶಕರಾದ ಡಾ. ಅಲೋಕ್ ಮೋಹನ್ ಐಪಿಎಸ್ ರವರು ಆ.15 ಸ್ವಾತಂತ್ರ ದಿನದಂದು ರಾಷ್ಟಪತಿ
ಪದಕ ಪಡೆದ ಬಗ್ಗೆ ಅಭಿನಂದನೆ ನೀಡಿ ಪೊಲೀಸ್ ಇಲಾಖೆ ಪರವಾಗಿ ಸ್ಮರಣಿಕೆ ಯನ್ನು ನೀಡಿ ಕುಟುಂಬದ ಸದಸ್ಯರ ಜೊತೆ ಗೌರವಿಸಿದರು. ಈ ಸಂದರ್ಭದಲ್ಲಿ ಪತ್ನಿ ಶ್ರೀಮತಿ ಸುಚಿತ್ರ ಬಿ. ಮಗಳು ಪೂರ್ವಿಕ ಇದ್ದರು.

ವಿಜಯ್ ಕುಮಾರ್ 1993ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಂಡು, 31 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈವರೆಗೆ ಪಣಂಬೂರು, ಪುತ್ತೂರು ನಗರ, ಉರ್ವ, ಉಡುಪಿ ನಗರ, ಕುಂದಾಪುರ, ಉಡುಪಿ ಟ್ರಾಫಿಕ್, ಉಡುಪಿ ಮಹಿಳಾ ಠಾಣೆ ಮತ್ತು ಹಿರಿಯಡ್ಕ ಠಾಣೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. 2022ರಲ್ಲಿ ಇವರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದರು. ಇವರು ಬೆಳ್ತಂಗಡಿಯ ಕೆಲ್ಲಗುತ್ತು ನಿವಾಸಿಯಾಗಿದ್ದು, ದಿ. ಗೋಪಾಲಕೃಷ್ಣ ಮತ್ತು ಶಾರದಾ ದಂಪತಿಯ ಸುಪುತ್ರರಾಗಿರುತ್ತಾರೆ.

Leave a Comment

error: Content is protected !!