31.8 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

ಪಡಂಗಡಿ: ವರಮಹಾಲಕ್ಷ್ಮಿ ಪೂಜಾ ಸಮಿತಿ ರಾಷ್ಟ್ರಸೇವಿತಾ ಸಮಿತಿ . ನಂದಿನಿ ಭಜನಾ ಮಂಡಳಿ ಶ್ರೀ ಕ್ಷೇತ್ರ ಓಡೀಲು ಪಡಂಗಡಿ ಇದರ ಸಹಯೋಗದೋಂದಿಗೆ ಆ.16 ರಂದು ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ವೃತ ಪೂಜೆಯು ತಂತ್ರಿಗಳಾದ ಮುಂಡೂರು ಗೋಪಾಲ ಕೃಷ್ಣ ಭಟ್ ಮಾಲಾಡಿ ಅವರ ನೇತ್ರತ್ವದಲ್ಲಿ ಜರಗಿತು.

ಮಧ್ಯಾಹ್ನ ರಕ್ಷಾ ಬಂಧನ ಹಾಗೂ ಧಾರ್ಮಿಕ ಸಭೆ ನಡೆಯಿತು. ಧಾರ್ಮಿಕ‌ ಉಪನ್ಯಾಸಕರಾಗಿ ಮಾನನೀಯ ಮೀನಾಕ್ಷಿ ಹೊಯ್ಸಳ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ರಾಷ್ಟ್ರ ಸೇವಿಕಾ ಸಮಿತಿ ಅವರು ವರಮಹಾಲಕ್ಷ್ಮಿ ವ್ರತದ ಬಗ್ಗೆ ಉಪನ್ಯಾಸ ನೀಡಿದರು. ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸಂಘಕರು ಶೀಲಾ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸುಮಲತಾ ಸಂಪತ್ ಸುವರ್ಣ ಉಪಸ್ಥಿತರಿದ್ದರು. ದಿವ್ಯ ಆಚಾರ್ಯ ಸ್ವಾಗತಿಸಿ ಸುಗುಣ ರಾವ್ ಕಾರ್ಯಕ್ರಮ ನಿರೂಪಿಸಿದರು. ಆಶಾ ಆಚಾರ್ಯ ಧನ್ಯವಾದವಿತ್ತರು.

ಕುವೆಟ್ಟು, ಓಡಿಲ್ನಾಳ, ಪಡಂಗಡಿ, ಸೋಣಂದೂರು ಗ್ರಾಮದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related posts

ಕಥೊಲಿಕ್‌ ಸಭಾ ಮಂಗಳೂರು ಪ್ರದೇಶ ಇದರ ಆಶ್ರಯದಲ್ಲಿ ಬೆಳ್ತಂಗಡಿ ವಲಯ ಕಾರ್ಯಕಾರಿ ಸಮಿತಿಯ ಸಹಮಿಲನ

Suddi Udaya

ಭಾರೀ ಮಳೆಯ ಹಿನ್ನೆಲೆ: ಬೆಳ್ತಂಗಡಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಇಂದು ರಜೆ

Suddi Udaya

ಬೆಳ್ತಂಗಡಿಯ ಹಲವು ಕಡೆ ಆಲಿಕಲ್ಲು ಮಳೆ

Suddi Udaya

ಬರೆಂಗಾಯ ವಣಸಾಯದಲ್ಲಿ ವನದುರ್ಗಾರಾಧನೆ, ವರ್ಷಾವಧಿ ನೇಮೋತ್ಸವ

Suddi Udaya

ಲಾಯಿಲ: ವಿಶ್ವಮಟ್ಟದ ಸ್ಥಾನಿಕ ಬ್ರಾಹ್ಮಣ ಸಮಾವೇಶ

Suddi Udaya

ಗುರಿಪಳ್ಳ ಜಯನಗರದಲ್ಲಿ ಬ್ರಹ್ಮಶ್ರೀ ಬಿಲ್ಲವ ಮಹಿಳಾ ಸ್ವ ಸಹಾಯ ಸಂಘ ಉದ್ಘಾಟನೆ

Suddi Udaya
error: Content is protected !!