ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಧರ್ಮಪ್ರಾಂತ್ಯದ ಗುತ್ತಿಗಾರು ಫಾ. ಆದರ್ಶ್ ಜೋಸೆಫ್ ರವರಿಗೆ ಹ್ಯೂಮನಿಟೆರಿಯನ್ ಎಕ್ಸಲೆನ್ಸ್ ಅವಾರ್ಡ್

ಬೆಳ್ತಂಗಡಿ: ಆ 15 ರಂದು ಸ್ವಾತಂತ್ರ್ಯ ದಿನಾಚರಣೆ ಹಾಗೂ ಹ್ಯೂಮನಿಟೆರಿಯನ್ ದಿನದ ಪ್ರಯುಕ್ತ ಹ್ಯೂಮನಿಟೆರಿಯನ್ ಸಂಸ್ಥೆ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಫಾ. ಆದರ್ಶ್ ಜೋಸೆಫ್ ಅವರಿಗೆ ” ಹ್ಯೂಮನಿಟೀರಿಯನ್ ಎಕ್ಸಲೆನ್ಸ್ ಅವಾರ್ಡ್ 2024 ” ನೀಡಿ ಗೌರವಿಸಲಾಯಿತ್ತು.

ಕೇಂದ್ರ ಸರಕಾರದ ಮಾಜಿ ಸಚಿವ ಸಂತೋಷ್ ಬಗ್ರೋಡಿಯಾ ಹಾಗೂ ಕಿರುತೆರೆ ತಾರೆ ಸುರೇಂದ್ರ ಪಾಲ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಕೋವಿಡ್ 19 ರ ಸಂದರ್ಭದಲ್ಲಿ ಗ್ರಾಮ ಮಟ್ಟದಲ್ಲಿ ಮಾಡಿದ ಸಮಾಜಸೇವೆಯನ್ನು ಸಂಸ್ಥೆ ಶ್ಲಾಘಸಿದರು. ತನ್ನ ವೈಯಕ್ತಿಕ ವಾಹನದಲ್ಲಿ ನೂರಕ್ಕೂ ಅಧಿಕ ಕೋವಿಡ್ ರೋಗಿಗಳನ್ನು ಆಸ್ಪತ್ರೆ ಹಾಗೂ ಕೋವಿಡ್ ಸೆಂಟರ್ ಗಳಿಗೆ ಉಚಿತವಾಗಿ ರವಾನೆ ಮಾಡುವುದರ ಮೂಲಕ ಹಲವಾರು ಜನರ ಪ್ರಾಣ ಉಳಿಸುವಲ್ಲಿ ಯಶ್ವಸಿಯಾದರು. ಅದು ಅಲ್ಲದೆ ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮದಲ್ಲಿ ತನ್ನನೇ ತೊಡಗಿಸಿಕೊಂಡು ಜಾತಿ, ಧರ್ಮ ವ್ಯತ್ಯಾಸವಿಲ್ಲದೆ ಮಾಡುವ ಮಾನವ ಸೇವೆಯನ್ನು ಸಂಸ್ಥೆ ಗುರುತಿಸಿಕೊಂಡರು. ಧರ್ಮದ ಅಂತರ ಬಿಟ್ಟು ಎಲ್ಲರನ್ನು ಒಟ್ಟುಸೇರಿಸಿ ಸಮಾಜದಲ್ಲಿ ಸಾಮರಸ್ಯ ಬೆಳೆಸಬೇಕೆಂಬ ಉದ್ದೇಶದಿಂದ ಹಲವಾರು ಕಾರ್ಯಕ್ರಮದ ಮೂಲಕ ಸೌಹಾರ್ದತೆಯ ಸಂದೇಶವನ್ನು ಸಮಾಜಕ್ಕೆ ಸಾರುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಾರೆ.

ಪ್ರಸ್ತುತ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಗುತ್ತಿಗಾರು ಹಾಗೂ ನೆಟ್ಟಣ ಚರ್ಚಿನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತಾರೆ.

Related posts

ಗುರುವಾಯನಕೆರೆ ಸಹಕಾರಿ ಸಂಘದ  ವಾರ್ಷಿಕ ಮಹಾಸಭೆ

Suddi Udaya

ಸೆ.3: ಶ್ರೀ ರಾಮ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ರವರ ಪಟ್ಟಾಭಿಷೇಕ ವರ್ಧಂತಿ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ, ವಿದ್ವತ್ ಪಿಯು ಕಾಲೇಜಿಗೆ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ತನುಶ್ರೀ ಶೇ.98.83

Suddi Udaya

ಮೇ 17: ಪೇರಾಲ್ದಪಲ್ಕೆ ಶ್ರೀ ಕ್ಷೇತ್ರ ಬಂಗಾಡಿ ಸತ್ಯ ಸಾರಮಾನಿ ಕಾನದ ಕಟದ ಜನ್ಮಭೂಮಿ ಇದರ ವಾರ್ಷಿಕ ಪರ್ವ ಮತ್ತು ವಿಜ್ಞಾಪನ ಪತ್ರ ಬಿಡುಗಡೆ

Suddi Udaya

ಬಳಂಜ ಶಾಲಾ ಕ್ರೀಡಾಂಗಣ ನವೀಕರಣ, ಎಲ್.ಕೆ.ಜಿ, ಯು.ಕೆ.ಜಿ, ರಂಗ ಮಂದಿರ ನಿರ್ಮಾಣ, ಶಾಲಾ ಕೊಠಡಿ ನವೀಕರಣ ಕಾಮಗಾರಿಗೆ ಶಿಲಾನ್ಯಾಸ

Suddi Udaya

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ: ಪೆರಿಂಜೆ ಶ್ರೀ ಧ.ಮಂ.ಅ. ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!