April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಮಹಿಳಾ ವೇದಿಕೆಯ ನೇತೃತ್ವದಲ್ಲಿ ವರಮಹಾಲಕ್ಷ್ಮೀ ಪೂಜೆ

ಉಜಿರೆ :ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘ ಉಜಿರೆ ಇವರ ಸಹಕಾರದಲ್ಲಿ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಮಹಿಳಾ ವೇದಿಕೆಯ ನೇತೃತ್ವದಲ್ಲಿ ವರಮಹಾಲಕ್ಷ್ಮೀ ವ್ರತ ಪೂಜೆಯು ಎಸ್ ಪಿ ಆಯಿಲು ಮಿಲ್ ಸಭಾಂಗಣದಲ್ಲಿ ಆ16 ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ವೇದಿಕೆಯ ಅಧ್ಯಕ್ಷೆ ಅಪರ್ಣ ಶಿವಕಾಂತ ಗೌಡ ವಹಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.

ಶ್ರೀಮತಿ ಸುಲೋಚನಾ ಸಂಜೀವ ಗೌಡ ಪಾಂಚಜನ್ಯ ವರಮಹಾಲಕ್ಷ್ಮೀ ವ್ರತದ ಮಹತ್ವವನ್ನು ತಿಳಿಸಿದರು.

ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ರಂಜನ್ ಜಿ ಗೌಡ,ದಾಮೋದರ ಗೌಡ ಸುರುಳಿ ನಿರ್ದೇಶಕರು ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೌಹಾರ್ದ ಸಹಕಾರಿ ಉಜಿರೆ, ಜೊತೆ ಕಾರ್ಯದರ್ಶಿ, ಒಕ್ಕಲಿಗ ಗೌಡರ ಸೇವಾ ಸಂಘ ದ. ಕ,ಸೌಮ್ಯಲತ ಜಯಂತ ಗೌಡ,ದ.ಕ ಒಕ್ಕಲಿಗ ಸೇವಾ ಸಂಘದ ಸದಸ್ಯ ವಿಜಯ್ ಗೌಡ ವೇಣೂರು,ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ ಕಲ್ಮoಜ,ಜೊತೆ ಕಾರ್ಯದರ್ಶಿ ಸೂರಜ್ ವಳಂಬ್ರ, ಸದಸ್ಯರು ಒಕ್ಕಲಿಗರ ಸೇವಾ ಸಂಘ ದ.ಕ ಜಿಲ್ಲೆ ಉಪಸ್ಥಿತರಿದ್ದರು.

ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಕೇರಿಮಾರು ಬಾಲಕೃಷ್ಣ ಗೌಡರು ಪ್ರಸ್ತಾವಿಕ ಮಾತನಾಡಿದರು.
ಶ್ರೀಮತಿ ಯಶೋದಾ ರಾಘವೇಂದ್ರ ಗೌಡ ಸ್ವಾಗತಿಸಿ,ಅನುಪಮಾ ಸತೀಶ್ ಗೌಡ ಧನ್ಯವಾದವಿತ್ತರು. ಪ್ರಕಾಶ್ ಗೌಡ ಕೆದ್ಲ ನಿರೂಪಿಸಿದರು.

Related posts

ನಿಡ್ಲೆ: ನಾಟಿ ವೈದ್ಯ ಬಾಬು ನಿಧನ

Suddi Udaya

ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ

Suddi Udaya

ಯುವವಾಹಿನಿ ಬೆಂಗಳೂರು ಘಟಕದ ಪದಗ್ರಹಣ ಸಮಾರಂಭ

Suddi Udaya

ಮೂರು ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ಜಾನುವಾರು ಸಾಗಾಟದ ಪ್ರಕರಣ ಪತ್ತೆ: ಪಿಕಪ್ ಸಹಿತ ವಾಹನದಲ್ಲಿದ್ದ 6 ದನ, 2 ಗಂಡು ಕರುಗಳು ಸೇರಿ ಒಟ್ಟು 8 ಜಾನುವಾರು ವಶ

Suddi Udaya

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಿಂದ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅವಹೇಳನ ಮತ್ತು ಅಪಪ್ರಚಾರ ಮಾಡುವವರ ವಿರುದ್ಧ ಜಾನ್ ಡೋ ಆದೇಶ

Suddi Udaya

ಜಿಯೋ ಭಾರತ್ 4g ಮೊಬೈಲ್ ಕೇವಲ 999 ಕ್ಕೆ

Suddi Udaya
error: Content is protected !!