ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಲಾಯಿಲ: ಕುಂಟಿನಿ ಮುಹಿಯ್ಯುದ್ಧೀನ್ ಅರಬಿಕ್ ಮದರಸ ನೂತನ ಕಟ್ಟಡ ಉದ್ಘಾಟನೆ

ಲಾಯಿಲ: ಮುಹಿಯ್ಯುದ್ಧೀನ್ ಅರಬಿಕ್ ಮದರಸ ಕುಂಟಿನಿ ಇದರ ನೂತನ ಮದರಸ ಕಟ್ಟಡ ಉದ್ಘಾಟನಾ ಸಮಾರಂಭ ಆ. 16ರಂದು ಜುಮಾ ನಮಾಝಿನ ನಂತರ ನಡೆಯಿತು.

ಉದ್ಘಾಟನೆಯನ್ನು ಕಾಜೂರು ತಂಙಳಾದ ಅಸ್ಸಯ್ಯಿದ್ ಝೈನುಲ್ ಆಬಿದೀನ್ ನೆರವೇರಿಸಿ ದುವಾ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಕಟ್ಟಡ ಕಾಮಗಾರಿಗಾಗಿ ಹಗಲಿರುಳು ಶ್ರಮಿಸಿದ ಅಲ್-ಬುಖಾರಿ ಜುಮಾ ಮಸೀದಿಯ ಅಧ್ಯಕ್ಷರಾದ ಇಸ್ಮಾಯಿಲ್ ಸನಾ ಇವರನ್ನು ಪ್ರೀತಿಪೂರ್ವಕವಾಗಿ ಸನ್ಮಾನಿಸಲಾಯಿತು. ಅದೇ ರೀತಿ ಕಟ್ಟಡ ಕಾಮಗಾರಿಯನ್ನು ಕೇವಲ ಐದು ತಿಂಗಳಲ್ಲಿ ಪೂರ್ತಿಗೊಳಿಸಿಕೊಟ್ಟ ಕಾಂಟ್ರಾಕ್ಟರಾದ ರಿಯಾಝ್ ಪಾದೆ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ವೇದಿಕೆಯಲ್ಲಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷರಾದ ಬಿ.ಎಂ. ಅಬ್ದುಲ್ ಹಮೀದ್ ಹಾಜಿ, ಕಾರ್ಯದರ್ಶಿ ಮಹಮ್ಮದ್ ಕೆ.ಎಸ್.ಆರ್.ಟಿ.ಸಿ., ಖತೀಬರಾದ ಮಹಮ್ಮದ್ ಶರೀಫ್ ಸಖಾಫಿ, ಅಧ್ಯಾಪಕರಾದ ಸೈಫುದ್ಧೀನ್ ಹಾಸಿಮಿ, ಎಲ್ಲಾ ಕರಿಯದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಜಮಾಅತ್ ಬಾಂಧವರು ಉಪಸ್ಥಿತರಿದ್ದರು. ಸದರ್ ಉಸ್ತಾದರಾದ ಉಮರುಲ್ ಫಾರೂಕ್ ಸಅದಿ ಸ್ವಾಗತ ನೆರವೇರಿಸಿ ಧನ್ಯವಾದವಿತ್ತರು.

Related posts

ಮೈಪಾಲದಲ್ಲಿ ಭರದಿಂದ ಸಾಗುತ್ತಿರುವ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿ, ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ – ಕಾಮಗಾರಿ ವೀಕ್ಷಣೆ

Suddi Udaya

ನಾವೂರು ಗ್ರಾ.ಪಂ.ನಲ್ಲಿ ಮಹಾತ್ಮಾ ಗಾಂಧೀಜಿ ಜನ್ಮ ದಿನಾಚರಣೆ ಹಾಗೂ ಉದ್ಯೋಗ ಖಾತರಿ ಯೋಜನೆ ಗ್ರಾಮ ಸಭೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ.ಪೂ. ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾಗಿ ರಹಿಮಾನ್ ಪಡ್ಪು ಆಯ್ಕೆ

Suddi Udaya

ಡಿ.12: ವಿದ್ಯುತ್ ನಿಲುಗಡೆ

Suddi Udaya

ಸಿಯೋನ್ ಆಶ್ರಮ ಟ್ರಸ್ಟ್ ವತಿಯಿಂದ ಮಹಾಶಿವರಾತ್ರಿ ಯಾತ್ರಿಕರಿಗೆ ಉಚಿತ ಮಜ್ಜಿಗೆ ವಿತರಣೆ

Suddi Udaya

ಕೊಕ್ಕಡ ಸಂಗಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya
error: Content is protected !!