ಬೆಳ್ತಂಗಡಿ:ಲಾಯಿಲ ಗ್ರಾಮಸಭೆಯಲ್ಲಿ ಗ್ರಾ.ಪಂ ಮತ್ತು ಅಧಿಕಾರಿಗಳ ನಿದ್ರಾವಸ್ಥೆಯನ್ನು ಖಂಡಿಸಿ ಶೇಖರ್ ಲಾಯಿಲ ಪಂಚಾಯತ್ ಸಭಾಭವನದ ಎದರು ನಿದ್ದೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ಗ್ರಾಮ ಸಭೆಯಲ್ಲಿ ನಡೆಯಿತು.
ನೇತಾಜಿನಗರ ಪಡ್ಲಾಡಿ 1ನೇ ವಾರ್ಡ್ ನಲ್ಲಿ ಕಾನೂನು ಬಾಹಿರ ನಿವೇಶನ ಹಂಚಿಕೆಯಾಗಿದೆ.ಒಂದು ಸೆಂಟ್ಸ್ ನಿವೇಶನ ಇಲ್ಲದ ಗ್ರಾಮಸ್ಥರಿಗೆ ನಿವೇಶನ ನೀಡದೆ,ಜಮೀನು,ಜಾಗ,ತೋಟವಿದ್ದ ಶ್ರೀಮಂತರಿಗೆ ಹಾಗೂ ಪಂಚಾಯತ್ ಸದಸ್ಯರಿಗೆ ನಿವೇಶನ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಮತ್ತು ಅಧಿಕಾರಿಗಳು ನಿದ್ರೆ ಮಾಡುತ್ತಿದ್ದರೆ ಎಂದು ಶೇಖರ್ ಲಾಯಿಲ ದೂರಿದರು. ಒಬ್ಬ ಪಂಚಾಯತ್ ಸದಸ್ಯನಾದರೆ ಅವನಿಗೆ,ಅವನ ಕುಟುಂಬಿಕರಿಗೆ ಬೇಕಾದಷ್ಟು ಜಾಗ ಮಾಡುತ್ತಾರೆ, ಅದನ್ನು ಇನ್ನೊಬ್ವರಿಗೆ ಸೇಲ್ ಮಾಡುತ್ತಾರೆ. ಸುಮಾರು 500ಅರ್ಜಿಗಳು ಬಾಕಿಯಿವೆ ಎಲ್ಲವೂ ತನಿಖೆಯಾಗಬೇಕು ಎಂದು ಸದ್ದು ಗದ್ದಲದೊಂದಿಗೆ ಚರ್ಚೆಗಳು ನಡೆಯುತ್ತಿದೆ.
ಗ್ರಾಮ ಪಂಚಾಯತ್ ನಲ್ಲಿ ನಿರ್ಣಯವಾದ ಬೇಡಿಕೆಗಳು ಸಮರ್ಪಕವಾಗಿ ಜಾರಿಯಾಗುವುದಿಲ್ಲ, ತಾಲೂಕು ಮಟ್ಟದ ಅಧಿಕಾರಿಗಳು ಬಂದು ಉತ್ತರ ನೀಡಬೇಕು.ಇಲ್ಲದಿದ್ದರೆ ನಾನು ಒಂದು ವಾರವಾದರೂ ಏಳುವುದಿಲ್ಲ ಎಂದು ಶೇಖರ್ ಲಾಯಿಲ ಹೇಳಿದರು.
ಸುಮಾರು 21ನಿರ್ಣಯಗಳಲ್ಲಿ ಸುಮಾರು 13 ನಿರ್ಣಯಗಳು ಜಾರಿಯಾಗಿದೆ. ಉಳಿದವು ಹಂತ ಹಂತವಾಗಿ ಜಾರಿಯಾಗುತ್ತಿದೆ ಎಂದು ಗ್ರಾಮಸಭೆಯಲ್ಲಿ ಪಿಡಿಓ,ನೋಡೇಲ್ ಅಧಿಕಾರಿ ತಿಳಿಸಿದರು.
ಕಾನೂನು ಬಾಹಿರವಾಗಿರುವ ನಿವೇಶನವನ್ನು ಸರ್ವೆ ನಡೆಸಿ, ಪಟ್ಟಿ ಮಾಡಿ ತೆರವುಗೊಳಿಸುವಂತೆ ಸಂಭಂದಪಟ್ಟ ಅಧಿಕಾರಿಗಳು ಪೋಲೀಸ್ ರಕ್ಷಣೆಯೊಂದಿಗೆ ತೆರವುಗೊಳಿಸಲು ಸೂಚಿಸಿದ್ದಾರೆ ಎಂದು ಪಂಚಾಯತ್ ಅಧಿಕಾರಿ ಹೇಳಿದರು.
ಲಾಯಿಲ ಗ್ರಾಮಪಂಚಾಯತ್ ನ 2024-25ನೇ ಸಾಲಿನ ಮೊದಲ ಹಂತದ ಗ್ರಾಮಸಭೆಯು ಪಂಚಾಯತ್ ನ ಭಾರತ್ ಮಾತಾ ಸಭಾಭವನದಲ್ಲಿ ನಡೆಯುತ್ತಿದೆ.
ಮಾರ್ಗದರ್ಶಿ ಅಧಿಕಾರಿಯಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೀಯಾ ಆಗ್ನೇಶ್ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಡಿ.ಪಿ,ಪಂಚಾಯತ್ ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್ ಸದಸ್ಯರಾದ ಆಶಾ ಸಲ್ಡಾನ,ಜಯಂತಿ ಅನ್ನಡ್ಕ,ದಿನೇಶ್ ಶೆಟ್ಟಿ,ಗಣೇಶ್ ಆರ್, ಪ್ರಸಾದ್ ಶೆಟ್ಟಿ ಎಣಿಂಜೆ, ಚಿದಾನಂದ ಶೆಟ್ಟಿ, ಅರವಿಂದ ಕುಮಾರ್, ಸವಿತ ಶೆಟ್ಟಿ, ಹರಿಕೃಷ್ಣ, ರಜನಿ ಎಂ. ಆರ್, ಮರಿಯಮ್ಮ, ರೇವತಿ, ಹರೀಶ್ ಕುಲಾಲ್,ಮಹೇಶ್ ಕೆ, ಆಶಾಲತಾ ಉಪಸ್ಥಿತರಿದ್ದರು.
ಕಾರ್ಯದರ್ಶಿ ತಾರನಾಥ ಅವರು ಎಲ್ಲರನ್ನು ಸ್ವಾಗತಿಸಿ ಅನುಪಲನಾ ವರದಿ ಸಭೆಯ ಮುಂದಿಟ್ಟರು. ಲೆಕ್ಕಾ ಸಹಾಯಕರಾದ ಸುಪ್ರಿತ ಶೆಟ್ಟಿ ಹಾಗೂ ಪಂಚಾಯತ್ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು,ಅಂಗನವಾಡಿ ಕಾರ್ಯಕರ್ತರು ಸಹಕರಿಸಿದರು..